ಪ್ರೀತಿಯೆಂದರೆ ಜಗತ್ತಿನ ಶಕ್ತಿ ಆ ಶಕ್ತಿಯಿಂದಲೇ ಜಗತ್ತು ನಡೆಯುವುದು ಎಂದರೆ ತಪ್ಪಾಗಲಾರದು. ಪ್ರೀತಿ ಎಂಬುದು ಇದೇ ರೀತಿ ಇರುತ್ತದೆ ಎಂದು ಹೇಳಲಾಗದು. ಅದರ ಶಕ್ತಿ ಅನಂತ, ಆಗಾದ ಎಷ್ಟು ಅಗಾದವೆಂದರೆ ಮಹಾನ್ ಸಾಮ್ರಾಜ್ಯಗಳನ್ನು ಕಟ್ಟುವಷ್ಟು ಹಾಗೂ ಮಹಾನ್ ಸಾಮ್ರಾಜ್ಯಗಳನ್ನು ಪತನ ಮಾಡುವಷ್ಟು .ಪ್ರೀತಿಯೆಂಬುದು ಬರಿ ಮನುಷ್ಯನಿಗೆ ಸಂಬಂಧಪಟ್ಟ ವಿಷಯವಲ್ಲ .ಪ್ರೀತಿ ಸಕಲ ಜೀವರಾಶಿಗಳಲ್ಲಿ ಇರುತ್ತದೆ. ಪ್ರೀತಿ ಇಲ್ಲದ ಬದುಕು ಶೂನ್ಯ ಎಂಬ ಭಾವನೆ ಮೂಡುತ್ತದೆ. ಅದರಲ್ಲೂ ಹದಿಹರಿಯದ ಪ್ರೀತಿಯಂದರೆ ಕೇಳಬೇಕಾ ? ಪ್ರೀತಿಯಂದರೆ ಅದು ಬರೀ ಹದಿಹರೆಯದವರ ನಡುವೆ ಮಾತ್ರ ಇರುವಂತಹದ ? ಅಥವಾ ಸಕಲ ಜೀವರಾಶಿಗಳಲ್ಲಿ ಇರುವಂತಹದ ? ಎಂದು ನೋಡುತ್ತಾ ಹೋದರೆ ನಮಗೆ ಪ್ರೀತಿ ಏಕೆ ಹುಟ್ಟುತ್ತದೆ ಅದನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ಸಾಮಾನ್ಯವಾಗಿ ಕಾಡುವ ಪ್ರಶ್ನೆ ? ಮೊದಲು ಪ್ರೀತಿ ಹೇಗೆ ಹುಟ್ಟುತ್ತದೆ ಎಂಬುದನ್ನು ನೋಡೋಣ ಪ್ರೀತಿ ಎಲ್ಲಾ ಸಂಬಂಧಗಳಲ್ಲಿ ಇರುವಂತಹ ಸಾಮಾನ್ಯ ವಿಷಯ ಆದರೆ ಅದನ್ನು ದೀರ್ಘಕಾಲದಲ್ಲಿ ಉಳಿಸಿಕೊಳ್ಳುವ ಬಗೆ ಹೇಗೆ ?
ಪ್ರೀತಿಯಲ್ಲಿ ಹಲವು ಬಗೆ ಅದು ತಂದೆ ತಾಯಿಯ ಪ್ರೀತಿಯಿಂದ ಹಿಡಿದು ತಮ್ಮ ತಂಗಿಯಂದಿರು ಹಾಗೂ ಸಂಬಂಧಿಕರಿಂದ ಸಿಗುವ ಪ್ರೀತಿ ಅಮೂಲ್ಯವಾದದ್ದು. ಒಂದು ಹುಡುಗ ಹುಡುಗಿ ಹಾಗೂ ನಿಷ್ಕಲ್ಮಶ ಸ್ನೇಹದ ಪ್ರೀತಿ ಇನ್ನೂ ಅಮೋಘ. ಸ್ನೇಹದ ಪ್ರೀತಿಯಲ್ಲಿ ಕಾಳಜಿ ಇರುತ್ತದೆ. ಸ್ನೇಹ ಎಲ್ಲ ಸಂಬಂಧಗಳ ಸಮ್ಮಿಲನ ಅಲ್ಲಿ ತಂದೆಯ ಕಾಳಜಿ ತಾಯಿಯ ಮಮತೆ, ತಮ್ಮ ಹಾಗೂ ತಂಗಿಯಂದಿರ ಕುಚೇಷ್ಟೆ ಇರುತ್ತದೆ. ಇನ್ನು ಹದಿಹರೆಯದ ಪ್ರೀತಿಯಲ್ಲಿ ಹಲವು ಬಗೆಗಳು ಇರುತ್ತವೆ. ಹದಿಹರೆಯದವರು ಎಂದರೆ 15 ವರ್ಷದಿಂದ 23 ವರ್ಷದೊಳಗಿನ ಪ್ರೀತಿಯನ್ನು ಹದಿಹರೆಯದ ಪ್ರೀತಿಯೆಂದು ಕರೆಯಬಹುದು. 15ವರ್ಷದ ಪ್ರೀತಿ ಆಕರ್ಷಣೆಯಿಂದ ಹುಟ್ಟುವಂತಹ ಒಂದು ಕ್ರಿಯೆ, ಅದು ನಮ್ಮ ದೇಹದಲ್ಲಿ ಆಗುವ ಹಾರ್ಮೋನುಗಳ ಬದಲಾವಣೆಯಿಂದ ಆಗುವಂತಹ ಆಕರ್ಷಣೆ ದೈಹಿಕ ಆಕರ್ಷಣೆಯಿಂದ ಶುರುವಾಗಿ ಅರ್ಥಮಾಡಿಕೊಳ್ಳುವ ಮಟ್ಟಿಗೆ ಮುಂದುವರೆದರೆ ಆ ಪ್ರೀತಿ ದೀರ್ಘಕಾಲ ಉಳಿಯುತ್ತದೆ. ಇಲ್ಲವಾದಲ್ಲಿ ಆಕರ್ಷಣೆ ಕಡಿಮೆಯಾದಂತೆ ಪ್ರೀತಿ ಕಡಿಮೆಯಾಗುತ್ತ ಹೋಗುತ್ತದೆ. ಅಂದರೆ ಅದು ಪ್ರೀತಿಯಲ್ಲ ಆಕರ್ಷಣೆ ಎಂದಾಯಿತು.
ಇನ್ನು ಕಾಲೇಜು ದಿನಗಳಲ್ಲಿ ಆಗುವ ಪ್ರೀತಿ ಆಕರ್ಷಣೆ ಜೊತೆಗೆ ಭ್ರಮಾತ್ಮಕ ಲೋಕದೊಂದಿಗೆ ಬೆಸೆದಿರುತ್ತದೆ. ಅಂದರೆ ಯಾವುದೋ ಸಿನಿಮಾದ ಪ್ರಭಾವ ಆಗಿರಬಹುದು ಅಥವಾ ಪ್ರೀತಿಸುವ ವ್ಯಕ್ತಿಯ ಆ ಸಮಯದ ನಡವಳಿಕೆ ಆಗಿರಬಹುದು ಅದನ್ನು ಇಷ್ಟಪಡುತ್ತಿದಂತೆ ಹುಟ್ಟುವ ಪ್ರೀತಿ, ಅದು ವಾಸ್ತವಿಕತೆಗೆ ದೂರವಾಗಿರುವಹಂತಹದ್ದು. ಇನ್ನು 23ರ ನಂತರ ಆಗುವ ಪ್ರೀತಿ ವಾಸ್ತವಿಕತೆಗೆ ಸಮೀಪ ಇರುವ ವಯಸ್ಸಿನಲ್ಲಿ ಆಗುವ ಪ್ರೀತಿ ಅಲ್ಲಿ ಭ್ರಮಾತ್ಮಕ ಹಾಗು ವಾಸ್ತವಿಕತೆಯ ಸಣ್ಣ ಎಳೆಯ ಅಂತರವಿರುತ್ತದೆ. ಆ ಅಂತರ ತಿಳಿಯುವುದು 23ರ ನಂತರ, ಬದುಕಿನ ಹಾಗು ಮನೆಯಲ್ಲಿನ ಜವಾಬ್ದಾರಿ ವ್ಯಕ್ತಿಯನ್ನು ಭ್ರಮಾತ್ಮಕದಿಂದ ವಾಸ್ತವಿಕತೆಗೆ ತಂದು ನಿಲ್ಲಿಸುತ್ತದೆ. ಆನಂತರದ ವಯಸ್ಸಿನಲ್ಲಿ ಪ್ರೀತಿ ಹುಟ್ಟುವ ಪ್ರಮಾಣ ಕಡಿಮೆ ಆದರೆ ಅದು ದೀರ್ಘಕಾಲ ಉಳಿಯುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗಾದರೆ ಹದಿಹರೆಯದ ಪ್ರೀತಿ ಉಳಿಯುವುದಿಲವಾ ? ಎಂದು ಪ್ರಶ್ನೆ ಕಾಡುವುದು ಸಹಜ. ಹದಿಹರೆಯದ ಪ್ರೀತಿಯು ಉಳಿಯುತ್ತದೆ. ಆದರೆ ಅದು ಆಕರ್ಷಕ ಹಾಗೂ ಬ್ರಹ್ಮ ತ್ಮಕ ಹಂತವನ್ನು ದಾಟಿರಬೇಕು. ಆಗ ಮಾತ್ರ ಅಂತಹ ಪ್ರೀತಿ ಉಳಿಯಲು ಸಾಧ್ಯ.
ಪ್ರೀತಿಯಲ್ಲಿ ಮೂಲವಾಗಿ ಬೇಕಾಗಿರುವುದು ನಂಬಿಕೆ .ಅದು ಪ್ರೀತಿಯಲ್ಲಿ ಮಾತ್ರವಲ್ಲ ಎಲ್ಲ ಸಂಬಂಧಗಳಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಅಂಶ, ನಂಬಿಕೆ ಇಲ್ಲದೆ ಯಾವ ಪ್ರೀತಿಯು ಉಳಿಯುವುದಿಲ್ಲ ನಂಬಿಕೆ ಎಲ್ಲಾ ಸಂಬಂಧಗಳ ಜೀವಾಳ. ನಂಬಿಕೆ ಹೊರತಾದ ಸಂಬಂಧ ಒಂದು ರೀತಿ ಯಾಂತ್ರಿಕ ಬದುಕಿನಂತೆ, ಬದುಕು ನಡೆಯುತ್ತದೆ ಆದರೆ ಒಳಗಿನಿಂದ ಅಂದರೆ ಅಂತರಂಗದಿಂದ ಮನುಷ್ಯ ಖುಷಿಯಾಗಿರುವುದು ಇಲ್ಲ ,ಆದರೆ ಬದುಕಿರುತ್ತಾನೆ. ಪ್ರೀತಿ ದೀರ್ಘಕಾಲ ಉಳಿಯಲು ನಂಬಿಕೆ ಒಂದೆ ಸಾಲದು ಪರಸ್ಪರ ಅರ್ಥಮಾಡಿಕೊಳ್ಳುವುದು ಬಹುಮುಖ್ಯವಾಗುತ್ತದೆ. ಪರಸ್ಪರ ಅರ್ಥಮಾಡಿಕೊಂಡು ನಂಬಿಕೆ ಆಧಾರದ ಮೇಲೆ ಬದುಕಿದರೆ ಸಂಬಂಧಗಳು ಖುಷಿಯನ್ನು ನೆಮ್ಮದಿಯನ್ನು ಸಂತೃಪ್ತಿಯನ್ನು ನೀಡಿ ಬದುಕನ್ನು ಅರ್ಥಪೂರ್ಣಗೊಳಿಸುತ್ತವೆ.