ಹೇಗಿದ್ದರೂ ಕುಶಾಲ್ ನಿಂದ ದೂರಸರಿಯಲು ನಿಶ್ಚಯಿಸಿದ್ದ ವಿಧುವಿಗೆ ಇದು ಒಂದು ರೀತಿಯ ಅನುಕೂಲವೇ ಆಯಿತು. ಇನ್ನು ಅಂತರವನ್ನು ಕಾಯ್ದುಕೊಳ್ಳಲು ಸುಲಭವಾಯಿತು. ವಿಧು ಎರಡನೆಯ ಬಾರಿಯೂ ತರಗತಿಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ಕುಶಾಲ್ಗೆ ತಡೆಯಲಾಗಲಿಲ್ಲ ಹೇಗಾದರೂ ಮಾಡಿ ಪ್ರಥಮಸ್ಥಾನ ಗಳಿಸಿದಂತೆ ತಡೆಯಬೇಕು ಎಂದು ನಿಶ್ಚಯಿಸಿ ನೇರವಾಗಿ ಎದುರಿಸಲು ಸಾಧ್ಯವಾಗದೆ ಕುಶಾಲ್ ವಿಧುವಿಗೆ ಯಾವುದೇ ರೀತಿಯ ಶೈಕ್ಷಣಿಕ ನೆರವು ಸಿಗದಂತೆ ಮಾಡಬೇಕು ಎಂದು ಯೋಚಿಸಿ ತನ್ನ ಸಹಪಾಠಿಗಳಿಗೆ ಯಾವುದೇ ಕಾರಣಕ್ಕೂ ಅವನಿಗೆ ಗೊತ್ತಿಲ್ಲದ್ದನ್ನು ಹೇಳಿ ಕೊಡಬೇಡಿ ಎಂದು ತಾಕೀತು ಮಾಡುತ್ತಿದ್ದ ಅವನ ಸಹಪಾಠಿಗಳು ಕುಶಾಲ್ ನ ಅರಿವಿಗೆಬಾರದೆ ಹೇಳಿಕೊಡುತ್ತಿದ್ದರು. ಅದನ್ನು ತಿಳಿದ ಕುಶಾಲ್ ವಿಧುವಿನ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಹೇಳಿ ಅವನ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡುತ್ತಿದ್ದ .ಆ ವಿಚಾರವಾಗಿ ಕೆಲವು ಸಹಪಾಠಿಗಳು ವಿಧುವಿನ ಹತ್ತಿರ ಚರ್ಚೆ ಮಾಡುತ್ತಿದ್ದರು. ವಿಧುವಿಗೆ ಗೊತ್ತಿಲ್ಲದ ಪಾಠದ ವಿಷಯಗಳನ್ನು ಹೇಳಿ ಕೊಡಲು ಹಿಂದೇಟು ಹಾಕುವಂತೆ ಮಾಡಿದ. ಆಗ ಅವನ ನೆರವಿಗೆ ಬಂದಿದೆ ಅವನ ಗುರುಗಳು. ಗುರುಗಳ ಬಳಿ ತನ್ನ ಸಮಸ್ಯೆಗಳನ್ನು ಹೇಳಿಕೊಂಡು ಯಾರು ನನಗೆ ಪಠ್ಯಪುಸ್ತಕದ ವಿಚಾರಗಳನ್ನು ಹೇಳಿಕೊಡುತ್ತಿಲ್ಲ ಸರ್ .ನಿಮ್ಮ ಸಹಾಯ ಬೇಕು ಎಂದಾಗ ಅವನು ಗುರುಗಳು ದಿನದ 24 ಗಂಟೆಗಳು ನಮ್ಮ ಮನೆಯ ಬಾಗಿಲು ತೆರೆದಿರುತ್ತದೆ ಎಂದು ಹೇಳಿ ಆತ್ಮಸ್ಥೈರ್ಯವನ್ನು ತುಂಬಿ ಕಳುಹಿಸಿದರು. ಹರ ಮುನಿದರೂ ಗುರು ಕಾಯುವನು ಎಂಬ ನಾಡು-ನುಡಿ ಅವನ ವಿಷಯದಲ್ಲಿ ಸತ್ಯವಾಯಿತು. ಸರ್ವ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುತ್ತಿದ್ದ ಗುರುಗಳಿಗೆ ಕುಶಾಲ್ ಅವಮಾನ ಮಾಡಿಬಿಟ್ಟ. ವಿದು ಗುರುವಿಗೆ ಪ್ರಿಯವಾದ ಶಿಷ್ಯ ಹಾಗಾಗಿ ಇವನಿಗೆ ಹೆಚ್ಚಿನ ಅಂಕಗಳನ್ನು ಕೊಡುತ್ತಾರೆಂದು ತರಗತಿಯ ಸಹಪಾಠಿಗಳನ್ನು ಗುರುಗಳ ವಿರುದ್ದ ಎತ್ತಿಕಟ್ಟಿ ಬಿಟ್ಟ.
ಕುಶಾಲ್ ನ ನಿಜಮುಖ ಗೋಚರಿಸಿದ್ದು ತರಗತಿಯಲ್ಲಿ. ವಿಧುವಿಗೆ ಹೆಚ್ಚಿನ ಅಂಕವನ್ನು ನೀವು ಕೊಡುತ್ತಿದ್ದೀರಾ ಎಂದು ತರಗತಿಯಲ್ಲಿ ಗುರುಗಳ ವಿರುದ್ಧದ ಆರೋಪವನ್ನು ಮಾಡಿದ ಗುರುಗಳು ಪುಸ್ತಕ ಮುಟ್ಟಿ ಪ್ರಮಾಣ ಮಾಡುವಂತಹ ಪರಿಸ್ಥಿತಿಗೆ ತಂದು ಬಿಟ್ಟ. ಇಂತಹ ಆರೋಪ ನಿರೀಕ್ಷಿಸದ ಗುರುಗಳು ಮನಸ್ಸಿನಲ್ಲಿ ನೊಂದುಕೊಂಡು ನೋವುಂಡು ತರಗತಿಯಲ್ಲಿ ಪುಸ್ತಕವನ್ನು ಹಿಡಿದು ಪ್ರಮಾಣ ಮಾಡಿಬಿಟ್ಟರು. ಯಾವುದೇ ಕಾರಣಕ್ಕೂ ವಿಧುವಿಗೆ ನಾನು ಹೆಚ್ಚು ಅಂಕಗಳನ್ನು ನೀಡಿಲ್ಲ ಅವನು ಸ್ವಂತ ಶಕ್ತಿಯನ್ನು ಅನುಸಾರ ಅಂಕಗಳನ್ನು ಪಡೆಯುತ್ತಿದ್ದಾನೆ. ಅದರಲ್ಲಿ ನನ್ನ ಪಾತ್ರವಿಲ್ಲ ಎಂದು ತರಗತಿಯಲ್ಲಿ ವಿದ್ಯಾರ್ಥಿಗಳ ಎದುರಿಗೆ ಪ್ರಮಾಣ ಮಾಡಿಬಿಟ್ಟರು. ಬದುಕಿನಲ್ಲಿ ಗಟ್ಟಿತನವನ್ನು ರೂಡಿಸಿಕೊಂಡಿದ್ದ ವಿಧುವಿನ ಕಣ್ಣಿನ ಅಂಚಿನಲ್ಲಿ ನೀರು ಜಿನುಗಿತು. ಅವನ ಮನಸ್ಸಿನಲ್ಲಿ ಆ ಚಿತ್ರಣ ಅಚ್ಚಳಿಯದೇ ಉಳಿಯಿತು.
ನನ್ನ ಮೇಲೆ ಇದ್ದ ದ್ವೇಷ ಗುರುಗಳ ಮೇಲೆ ತೀರಿಸಿ ಬಿಟ್ಟನಲ್ಲ ಎಂದು ಮನಸ್ಸಿನಲ್ಲೇ ಕೊರಗಿದನು. ಗುರುಗಳು ಪುಸ್ತಕ ಮುಟ್ಟಿ ಪ್ರಮಾಣಿಸುವ ಅಂತಾಯಿತಲ್ಲ ಎಂದು ದುಃಖಿಸಿದನು. ಕುಶಾಲ್ ಗೆ ವಿಧುವಿನ ಮೇಲೆ ಇದ್ದ ದ್ವೇಷಭಾವನೆ ಹೊರಜಗತ್ತಿಗೆ ಪ್ರಕಟಗೊಂಡಿತು. ಅಲ್ಲಿಗೆ ಕುಶಾಲ್ನ ನಾಟಕೀಯತೆ ಪೂರ್ಣಪ್ರಮಾಣದಲ್ಲಿ ತಿಳಿಯಿತು. ಕುಶಾಲ್ ನ ಸ್ವಾರ್ಥ ಹಿತದ ಸ್ನೇಹ ತಿಳಿದು ವಿಧು ಸ್ನೇಹವನ್ನು ಅಂತ್ಯಗೊಳಿಸಿದನು. ಅಲ್ಲಿಗೆ ಕುಶಾಲ್ ಮೇಲೆ ಇದ್ದ ನಿಷ್ಕಲ್ಮಶವಾದ ಸ್ನೇಹ ಪ್ರೀತಿ ವಿಶ್ವಾಸ ಕಳೆದುಹೋಯಿತು. ವಿಧುವಿಗೆ ಸತ್ಯದ ಅರಿವಾಯಿತು. ಮನೆಯಲ್ಲಿ ಸಿಗದ ಪ್ರೀತಿ ವಿಶ್ವಾಸ ಸ್ನೇಹಿತನಲ್ಲಿ ಸಿಕ್ಕಿದೆ ಎಂದು ಅಂದುಕೊಂಡಿದ್ದ ವಿಧುವಿಗೆ ಸ್ನೇಹದ ಹೆಸರಿನಲ್ಲಿ ಮೋಸ ಹೋಗಿದ್ದ ಅವನಿಗೆ ಅವನ ಬಗ್ಗೆ ಜಿಗುಪ್ಸೆಯಾಯಿತು. ಲಾಭಕ್ಕಾಗಿ ಅನುಕೂಲತೆಗಾಗಿ ನೋಡಿ ಸಂಬಂಧಗಳನ್ನು ಬೆಳೆಸುತ್ತಾರೆ ಎಂಬುದನ್ನು ಮನಗಂಡನು. ನಿಜವಾದ ಸಂಬಂಧಗಳಿಗೆ ಬೆಲೆ ಇಲ್ಲ ಎಂಬ ಸತ್ಯದ ಅರಿವಾಯಿತು. ಸಂಬಂಧವೆಂಬುದು ಅನಿವಾರ್ಯತೆ , ಅವಶ್ಯಕತೆ ಮೇಲೆ ಮಾಡುವುದು ಎಂಬ ಸತ್ಯವನ್ನು ತಿಳಿದುಕೊಂಡನು. ಅಲ್ಲಿಂದ ಸಂಬಂಧಗಳ ಮೇಲಿನ......
No comments:
Post a Comment