ಅಷ್ಟರಲ್ಲೇ ಅವರ ಸೊಸೆ ಹರ್ಷಿತ ಅಣ್ಣ ನೀವು ಯಾವ ಕೆಲಸವನ್ನು ಮಾಡಿಸುತ್ತೀರಾ ಎಂದು ಕೇಳಿದಳು. ಅಯ್ಯೋ ! ಇವರ ಅತ್ತೆಯ ಸರದಿ ಆಯ್ತು ಈವಾಗ ಸೊಸೆಯ ಸರದಿಯಲ್ಲ ಎಂದು ಮನದಲ್ಲೇ ಅಂದುಕೊಂಡ. ನಾವು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮಾಡಿಸುತ್ತೇವೆ ಎಂದು ಹೇಳಿ ಸುಮ್ಮನಾದ. ಹರ್ಷಿತಾ ಮಾತು ಮುಂದುವರೆಸಿ ಹಾಗಾದರೆ ಒಳ್ಳೆಯದೇ ದುಡಿಮೆ ಇದೆ ಮದುವೆ ಆಗಬಹುದಲ್ಲ ಎಂದು ಕೇಳಿದ ಕೂಡಲೇ ವಿಧು ಅಯ್ಯೋ ಇವರೇನು ಹೀಗೆ ಗುರುತು ಪರಿಚಯ ಇಲ್ಲದವರಿಗೆ ಇವರು ಈಗೆಲ್ಲ ಮಾತನಾಡುತ್ತಾರಲ್ಲ ಎಂದು ಮನಸ್ಸಿನಲ್ಲೇ ಅಂದುಕೊಂಡ. ಅತ್ತೆ ಆಯ್ತು ಸೊಸೆ ಆಯ್ತು ಇವಾಗ ಹುಡುಗಿಯ ಮಾವ ಏನು ಹೇಳುತ್ತಾರೋ ಎಂದುಕೊಳ್ಳುವಷ್ಟರಲ್ಲಿ ಮಾವನ ಮುಖದಲ್ಲಿ ಮುಗುಳ್ನಗೆ ಕಂಡಿತು. ಅಬ್ಭಾ... ಇವರಿಂದ ಮದುವೆ ಪ್ರವಚನ ನಡೆಯಲಿಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟು ಉಸಿರು ಎಳೆದುಕೊಳ್ಳುವರೊಳಗಾಗಿ ಅವರ ಮಾತು ಆರಂಭವಾಯಿತು. ಓಹೂ.. ಇನ್ನು ಸುಮ್ಮನಿದ್ದರೆ ಮದುವೆ ಬಗ್ಗೆ ಪ್ರವಚನ ಕೇಳಬೇಕಲ್ಲ ಎಂದುಕೊಂಡು, ಸತ್ಯವತಿಯವರು ಮಾತನಾಡುವ ಭಾವ ಕಂಡ ಕೂಡಲೇ ಅಮ್ಮ ನೋಡಿ ರೈಲುಗಾಡಿಯು ತಿಪಟೂರು ನಿಲ್ದಾಣವನ್ನು ಪ್ರವೇಶಿಸುತ್ತಿದೆ ಎಂದು ಗಮನವನ್ನು ಬೇರೆಡೆಗೆ ಸೆಳೆದ.
ಓಹೋ.. ಹೌದಲ್ಲಪ್ಪ ನೋಡು ಮಾತನಾಡುತ್ತ ಹೋದಂತೆಲ್ಲ ಸಮಯ ಸರಿದು ಹೋಗುವುದು ಗೊತ್ತಾಗುವುದಿಲ್ಲ ಎಂದು ಹೇಳುತ್ತಾ ರೈಲಿನ ಮೇಲಿನ ಬರ್ತ್ ಇಂದ ಒಂದು ಬಾಕ್ಸ್ ಅನ್ನು ತೆಗೆಯಲು ಮುಂದಾದರು. ಅದು ಅಷ್ಟು ಸುಲಭವಾಗಿ ಸಿಗುವಂತಿರಲಿಲ್ಲ ಹಾಗಾಗಿ ವಿಧು ಎದ್ದು ಅವರಿಗೆ ಆ ಬಾಕ್ಸನ್ನು ತೆಗೆದುಕೊಟ್ಟ, ಧನ್ಯವಾದ ಅರ್ಪಿಸಿದ ಅವರು ಅದನ್ನು ತೆಗೆದುಕೊಂಡರು. ಅದನ್ನು ತೆಗೆದ ಮೇಲೆ ತಮ್ಮ ಕೆಳಗೆ ಇದ್ದ ಬ್ಯಾಗ್ ಇಂದ ಒಂದು ಕವರನ್ನು ತೆಗೆದರು ಅದರಲ್ಲಿದ್ದ ಚಪಾತಿಯನ್ನು ಕೊಡಲು ಬಂದರು. ಅದಕ್ಕೆ ಬೇಡಮ್ಮ ಊಟವನ್ನು ಮುಗಿಸಿ ನಾನು ರೈಲನ್ನು ಹತ್ತಿರುವುದು ಎಂದು ಹೇಳಿದ ಆಗ ಮಧ್ಯಪ್ರವೇಶಿಸಿದ ಸತ್ಯವತಿ ಗಂಡನಾದ ಚಿದಾನಂದ ಅವರು ಏನಪ್ಪಾ ನೀನು, ನಿನ್ನ ವಯಸ್ಸಿನಲ್ಲಿ ನಾನು ದಿನಕ್ಕೆ ನಾಲ್ಕು ಬಾರಿ ಊಟ ಮಾಡುತ್ತಿದ್ದೆ .ತೆಗೆದುಕೋ ಎಂದರು ಅದಕ್ಕೂ ಬೇಡ ಅಣ್ಣ ನಿಮ್ಮ ಕಾಲದಲ್ಲಿ ಎಲ್ಲಾ ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿದ್ದರು ನಿಮ್ಮ ಕಾಲದ ಊಟ ಆರೋಗ್ಯವನ್ನು ವೃದ್ಧಿಸುತ್ತಿತು ಇವಾಗ ಎಸಿಡಿಟಿ ಯನ್ನು ಉಂಟುಮಾಡುತ್ತದೆ, ಎಂದು ತಮಾಷೆ ಮಾಡಿದ. ಅದಕ್ಕೆ ಮುಗುಳ್ನಕ್ಕ ಚಿದಾನಂದ ಅವರು ನೀವು ಈಗಿನ ಕಾಲದ ಹುಡುಗರು ಹಾಗೂ ಹುಡುಗಿಯರು ಡಯಟ್ ಡಯಟ್ ಅಂತ ಚೆನ್ನಾಗಿ ತಿಂದು ಚೆನ್ನಾಗಿ ಇರುವುದಿಲ್ಲ. ನಮ್ಮ ಕಾಲದ ಊಟನೇ ಬೇರೆ ಎಂದರು ಅದಕ್ಕೊ ಮುಗುಳು ನಕ್ಕು ಸುಮ್ಮನಾದ.
ಸತ್ಯವತಿಯವರು ಒಂದು ದಾಳಿಂಬೆ ಹಣ್ಣನ್ನು ಕೊಟ್ಟು ಕೊನೆಪಕ್ಷ ಈ ದಾಳಿಂಬೆ ಹಣ್ಣನ್ನು ಆದರೂ ತಿನ್ನು ಎಂದು ಹೇಳಿದರು ಸರಿ ಇನ್ನೇನು ಹಣ್ಣಿನ ಸಿಪ್ಪೆಯನ್ನು ಬಿಡಿಸಿ ತಿನ್ನಬೇಕು ಅನ್ನುವಷ್ಟರಲ್ಲಿ ಮತ್ತೆ ಮದುವೆ ಪ್ರವಚನ ಶುರುವಾಯಿತು. ನೋಡಪ್ಪ ವಿಧು ವಯಸ್ಸಿಗೆ ತಕ್ಕಂತೆ ಮದುವೆಯಾಗಬೇಕು ನೋಡಿ ತೆಳ್ಳಗೆ ಸುಂದರವಾಗಿ ಬೆಳ್ಳಗಿರುವ ಹೆಣ್ಣನ್ನು ನೋಡಿ ಮದುವೆಯಾಗು ಏಕೆಂದರೆ ನೀನು ಸುಂದರವಾಗಿರುವ ಹುಡುಗಿಯನ್ನು ಮದುವೆಯಾದರೆ ಸುಂದರವಾದ ಮಕ್ಕಳು ಹುಟ್ಟುತ್ತಾರೆ. ಇಲ್ಲ ಕಪ್ಪು ಹುಡುಗಿ ಮದುವೆಯಾದರೆ ಹುಟ್ಟುವ ಮಗು ಗಂಡಾದರೆ ಪರವಾಗಿಲ್ಲ ಹೆಣ್ಣಾದರೆ ಮತ್ತೆ ವರದಕ್ಷಿಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟು ಅವಳಿಗೆ ಮದುವೆ ಮಾಡಬೇಕಾಗುತ್ತದೆ. ಅದಕ್ಕೆ ಇವಾಗಲೇ ಒಳ್ಳೆಯ ಬೆಳ್ಳಗಿನ ಹುಡುಗಿಯನ್ನು ನೋಡಿ ಮದುವೆಯಾದರೆ ಒಳ್ಳೆಯದಲ್ಲವೇ ನೋಡು ನನ್ನ ಸೊಸೆಯನ್ನು ಅದಕ್ಕೆ ಹುಡುಕಿ ಹುಡುಕಿ ಇಂತಹ ಸೊಸೆಯನ್ನು ನನ್ನ ಮಗನಿಗೆ ತಂದಿದ್ದೇನೆ ಎಂದರು. ವಿಧು ಮನಸ್ಸಿನಲ್ಲೇ ಸತ್ಯವತಿ ಬಹಳ ಲೆಕ್ಕಾಚಾರದ ವ್ಯಕ್ತಿತ್ವದ ಅಮ್ಮನವರು ಎಂದುಕೊಂಡ.ಈ ಜನ್ಮದಲ್ಲಿ ನಾನು....
No comments:
Post a Comment