ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಆದಿತ್ಯನಿದ್ದ ವೈದ್ಯರು ಅವನ ಕಿವಿಯಲ್ಲಿ ತುಂಬಾ ರಕ್ತ ಹೋಗಿದೆ ಸ್ವಲ್ಪದರಲ್ಲಿ ಡ್ಯಾಮೇಜ್ ಆಗುವುದು ತಪ್ಪಿದೆ. ತಲೆಬುರುಡೆಯಲ್ಲಿ ಏರ್ಕ್ರಾಕ್ ಆಗಿದೆ ಇವನು ಬದುಕಿ ಉಳಿದದ್ದೇ ಹೆಚ್ಚು ಅದು ಖಂಡಿತವಾಗಿ ಬದುಕಿ ಉಳಿಯುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ ಪ್ರಜ್ಞೆ ಬರುವತನಕ ಏನನ್ನು ಹೇಳಲು ಬರುವುದಿಲ್ಲ ಎಂದರು. ಐಸಿಯು ಇಂದ ಹೊರಗೆ ಬಂದವನೇ ಆದಿತ್ಯನ ಸ್ನೇಹಿತರಾದ ಚಿರಾಗ್ ಮತ್ತು ಚಿನ್ಮಯ್ ಅನ್ನು ಕರೆದು ಮನೆಗೆ ವಿಷಯವನ್ನು ತಿಳಿಸಿದ್ದೀರಾ ಎಂದು ಕೇಳಿದ ಅದಕ್ಕವರು ತಿಳಿಸಿದ್ದೇವೆ ಆದಿತ್ಯನ ತಂದೆ-ತಾಯಿ ಬರುತ್ತಾರೆ ಎಂದರು. ಮತ್ತೆ ವೈದ್ಯರ ಬಳಿ ಹೋದ ವಿಧು ಎಷ್ಟೇ ಖರ್ಚು ಆದರೂ ಪರವಾಗಿಲ್ಲ ಅತ್ಯುತ್ತಮ ಚಿಕಿತ್ಸೆಯನ್ನು ನೀಡಿ ಆದಿತ್ಯನನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡಿ, ಅವರ ತಂದೆ ತಾಯಿ ಸದ್ಯದಲ್ಲಿ ಬರುತ್ತಾರೆ ಒಳ್ಳೆಯ ಔಷಧಿ ಗಳನ್ನು ಕೊಡಿ ಎಂದು ಹೇಳಿ ಹೊರಬರುವಾಗ ವೈದ್ಯರು ನಿಮ್ಮ ಸ್ನೇಹಿತ ಮಧ್ಯಪಾನ ಮಾಡಿದ್ದಾನೆ ಎಂದು ಹೇಳಿದರು. ಓಹೋ ಆದಿತ್ಯ ಹಾಗೂ ಆತನ ಸ್ನೇಹಿತರು ಹಿಂದಿನ ರಾತ್ರಿ ಮಧ್ಯಪಾನವನ್ನು ಮಾಡಿದ್ದಾರೆ ಎಂದು ಅರಿವಿಗೆ ಬರುತ್ತಿದ್ದಂತೆ ವೈದ್ಯರಿಗೆ ವಿಧು ಇವನ್ನೆಲ್ಲ ಅವನ ತಂದೆ ತಾಯಿಗೆ ಹೇಳಬೇಡಿ ಅವರು ನೊಂದುಕೊಳ್ಳುತ್ತಾರೆ ಅವನ ಆರೋಗ್ಯದ ಬಗ್ಗೆ ಮಾತ್ರ ಗಮನ ಕೊಡಿ ಎಂದು ಹೇಳಿ ಬಂದನು. ಚಿರಾಗ್ ಚಿನ್ಮಯ್ ಅವರಿಗೆ ಹಣದ ಅವಶ್ಯಕತೆ ಇದ್ದರೆ ಕೇಳಿ ಎಂದು ಹೇಳಿ ಆಸ್ಪತ್ರೆಯಿಂದ ಹೊರಟ. ಮಧ್ಯಾಹ್ನದ ಹೊತ್ತಿಗೆ ಫೋನ್ ಕರೆ ಬಂದಿತ್ತು ಆದಿತ್ಯನ ತಂದೆ-ತಾಯಿ ಬಂದಿದ್ದಾರೆಂದು ನೀವು ಬರಬೇಕು ಎಂದು. ವಿಧು ಆಸ್ಪತ್ರೆ ತಲುಪಿದಾಗ ಅವರ ತಂದೆ-ತಾಯಿ ಹಾಗು ತಂಗಿ ಆಸ್ಪತ್ರೆಯಲ್ಲಿ ಕುಳಿತಿದ್ದರು. ಚಿನ್ಮಯ್ ಆದಿತ್ಯನ ತಂದೆ-ತಾಯಿ ಹಾಗೂ ಅವರ ತಂಗಿಯನ್ನು ಪರಿಚಯ ಮಾಡಿಕೊಟ್ಟ.
ಆದಿತ್ಯ ಅವರಿಗೆ ಒಬ್ಬನೇ ಮಗ ಅವನಿಗೆ ಊರೂರು ಸುತ್ತುವ ಹವ್ಯಾಸ ಅದೇ ರೀತಿ ಊರೂರು ಸುತ್ತುತ್ತ ಬಂದವನು ಸಂಸ್ಕೃತ ಗ್ರಾಮಕ್ಕೆ ಬಂದು ಸಂಸ್ಕೃತ ಕಲಿಯುವ ಇಚ್ಛೆಯಾಗಿ ಉಳಿದಿದ್ದ. ಆದಿತ್ಯನ ತಂದೆ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ತಾಯಿ ಆಂಧ್ರಪ್ರದೇಶದ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿ ಇಬ್ಬರು ಮಕ್ಕಳು ಒಂದು ಹೆಣ್ಣು ಒಂದು ಗಂಡು ಬೇರೆ ರಾಜ್ಯದಿಂದ ಬಂದವರಾಗಿದ್ದರಿಂದ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿತ್ತು .ಅವರ ಜೊತೆ ಮಾತನಾಡಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಭರವಸೆ ಮೂಡಿಸಲಾಯಿತು . ಆದಿತ್ಯ ಓಡಿಸಿಕೊಂಡು ಬಂದಿದ್ದ ಅವನ ಸ್ನೇಹಿತನಾದ ಚಿನ್ಮಯ್ ಅವನ ಬೈಕನ್ನು ಪೊಲೀಸರು ತೆಗೆದುಕೊಂಡುಹೋಗಿ ಪೊಲೀಸ್ ಠಾಣೆಯಲ್ಲಿ ಇಟ್ಟುಕೊಂಡಿದ್ದರು. ಅದನ್ನು ಬಿಡಿಸಿಕೊಡುವಂತೆ ಕೇಳಿಕೊಂಡರು. ವಿಧು ತನ್ನ ರಾಜಕೀಯ ಪ್ರಭಾವ ಬಳಸಿ ಆದಿತ್ಯ ತಾಯಿಯ ಒಪ್ಪಿಗೆ ಮೇಲೆ ಬೈಕನ್ನು ಬಿಡಿಸಿಕೊಂಡು ಅವರ ಸ್ನೇಹಿತರಿಗೆ ವಾಪಸ್ ಸಿಗುವಂತೆ ಮಾಡಿದನು. ಅದನ್ನು ಅವರಿಗೆ ಕೊಡಿಸಿದ ಮೇಲೆ ರಿಪೇರಿ ಮಾಡಿಸಿಕೊಂಡು ಮತ್ತೆ ಆಂಧ್ರಕ್ಕೆ ತಮ್ಮ ಬೈಕನ್ನು ತೆಗೆದುಕೊಂಡು ಹೋದರು. ಆದಿತ್ಯ ಕಾಲ ಕ್ರಮೇಣ ಹಂತಹಂತವಾಗಿ ಸುಧಾರಿಸುತ್ತ ಬಂದನು. ಆದಿತ್ಯನಿಗೆ ಚಿಕಿತ್ಸೆ ಮುಂದುವರಿಸುವ ಸಲುವಾಗಿ ಮತ್ತೂರಿನಲ್ಲಿ ಉಳಿಯುವ ಪರಿಸ್ಥಿತಿ ಎದುರಾಯಿತು. ಆದಿತ್ಯನ ಕುಟುಂಬ ಮತ್ತೂರಿಗೆ ಬಂದು ಭವನದಲ್ಲಿ ಉಳಿಯುವಂತಾಯಿತು. ಕನ್ನಡ ಭಾಷೆಯ ಅರಿವಿಲ್ಲದ ತಂದೆ-ತಾಯಿ ಹಾಗೂ ಮಗಳು. ವಿಧು ಹಾಗೂ ಅವರ ನಡುವೆ ಇದ್ದ ಏಕೈಕ ಭಾಷೆ ಇಂಗ್ಲಿಷ್, ಅವರ ಸಂವಹನಕ್ಕೆ ಅಡ್ಡಿಯಾಗದ ಭಾಷೆಯಾಯಿತು. ಅವರ ಮಗಳು ಇಂಗ್ಲಿಷ್ ಹಾಗು ಹಿಂದಿಯನ್ನು ಸಲೀಸಾಗಿ ಮಾತನಾಡುತ್ತಿದ್ದಳು. ಬರಿ ಮುಖತಹ ಪರಿಚಯವಿದ್ದ ವಿಧು ಅಷ್ಟಗಿ ಅವರ ಬಗ್ಗೆ ಕೇಳಲು ಹೋಗಲಿಲ್ಲ. ಮಾತು ಮುಂದುವರಿಸಿದ ಆದಿತ್ಯನ ತಂಗಿ ನನ್ನ ತಂದೆ ಹೆಸರು ಜಗನ್ ತಾಯಿಯ ಹೆಸರು ಗಾಯತ್ರಿ ಹಾಗೂ ನನ್ನ ಹೆಸರು.......
No comments:
Post a Comment