ಬಸ್ ನಿಲ್ದಾಣ ಹತ್ತಿರವಿರುವ ಬೀದಿಗೆ ಹೊರಟು ಒಂದು ಕಪ್ ಚಾ ಕುಡಿದು ಮತ್ತೆ ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಸರಿಯಾಗಿ 38 ನಿಮಿಷವಾಗಿತ್ತು. ಬಸ್ ನಿಲ್ದಾಣಕ್ಕೆ ಬರುವುದಕ್ಕೂ ಕೃಷ್ಣ ಅವರು ಬಂದರು. ವಿಧುವನ್ನು ಕರೆದುಕೊಂಡು ಹೊರಟರು. ಅವನಿಗೆ ಶಿವಮೊಗ್ಗ ಬಿಟ್ಟು ಬೇರೆ ಎಲ್ಲೋ ಹೋಗುತ್ತಿರುವಂತೆ ಎನಿಸಿತು. ನೇರ ವ್ಯಕ್ತಿತ್ವದ ಹುಡುಗ ಕೃಷ್ಣ ಅಣ್ಣಾವ್ರನ್ನು ಕೇಳಿಯೇಬಿಟ್ಟ ನಾವು ಎಲ್ಲಿಗೆ ಹೋಗುತ್ತಿರುವುದು ಎಂದು. ಅದಕ್ಕೆ ಅವರು ಹೇಳಿದರು ಮತ್ತೂರಿಗೆ. ವಿದು ಮನಸ್ಸಿನಲ್ಲಿ ಅಂದುಕೊಂಡ ಇವರು ಹೇಳುತ್ತಿರುವ ಮತ್ತೂರು ನಾನು ಹಿಂದೆ ಪತ್ರಿಕೆಯಲ್ಲಿ ಓದಿದ ಸಂಸ್ಕೃತ ಮಾತನಾಡುವ ಮತ್ತೂರು ಗ್ರಾಮ ಅಲ್ಲ ತಾನೇ ! ನೋಡೋಣ ಹೇಗಿದ್ದರೂ ಹೋಗುತ್ತಿದ್ದೇನೆ ಎಂದು ಅಂದುಕೊಂಡು ಸುಮ್ಮನಾದ. ಊರು ತಲುಪಿದ ಮೇಲೆ ಅವನಿಗೆ ಆಶ್ಚರ್ಯ ಕಾದಿತ್ತು ಅವನು ಅಂದುಕೊಂಡಂತೆ ಅದು ಸಂಸ್ಕೃತ ಮಾತನಾಡುವ ಗ್ರಾಮ. ಭಾರತೀಯ ಸಂಸ್ಕೃತಿ ಭಾರತೀಯ ಪರಂಪರೆ ಮೇಲೆ ವಿಶೇಷ ಅಭಿಮಾನವಿದ್ದ ವಿಧುವಿಗೆ ತುಂಬಾ ಖುಷಿಯಾಯಿತು. ಈ ಗ್ರಾಮಕ್ಕೆ ಒಂದು ಬಾರಿಯಾದರೂ ಭೇಟಿ ಕೊಡಬೇಕು ಅಂದುಕೊಂಡಿದ್ದ ವಿಧು ಇಂದು ಅದೇ ಗ್ರಾಮದಲ್ಲಿ ಇದ್ದಾನೆ. ಕೃಷ್ಣ ಅಣ್ಣನವರು ಅವನಿಗೆ ಅಲ್ಲಿ ಉಳಿಯಲು ವ್ಯವಸ್ಥೆ ಮಾಡಿದರು. ಅದು ನಾಲ್ಕು ರೂಮುಗಳು ಇರುವ ಒಂದು ಭವನ, ಸಂಸ್ಕೃತ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಅಲ್ಲಿ ಉಳಿಯಲು ವ್ಯವಸ್ಥೆ ಮಾಡುತ್ತಿದ್ದ ಜಾಗ, ಅಲ್ಲಿ ಉಳಿಯಲು ವ್ಯವಸ್ಥೆ ಮಾಡಿ ಕೆಲಸ ಮಾಡುತ್ತಿದ್ದ ಜಾನಕಿ ಅಮ್ಮನವರಿಗೆ ಊಟದ ವ್ಯವಸ್ಥೆ ಮಾಡುವಂತೆ ಹೇಳಿ ಬೆಳಿಗ್ಗೆ ಸಿಗುತ್ತೇನೆ ಎಂದು ಹೇಳಿ ಹೋದರು. ವಿಧು ಕೈಕಾಲು ಮುಖ ತೊಳೆದುಕೊಂಡು ಹೊರಬರುವಷ್ಟರಲ್ಲಿ ಜಾನಕಿಮ್ಮನವರು ಮನೆಗೆ ಹೋಗಿ ಊಟವನ್ನು ತಂದಿದ್ದರು. ಊಟವನ್ನು ತಂದು ಮುಂಭಾಗದಲ್ಲಿ ಇಟ್ಟು ನೋಡಪ್ಪ ಎರಡು ಊಟ ಇಟ್ಟಿದ್ದೇನೆ. ಒಂದು ನಿನಗೆ ಮತ್ತೊಂದು ಆದಿತ್ಯನಿಗೆ ಎಂದು ಹೇಳಿದರು. ಜಾನಕಿ ಅಮ್ಮನವರನ್ನು ಯಾರು ಆದಿತ್ಯ ಎಂದು ಕೇಳಿದ್ದಕ್ಕೆ ನಿನ್ನ ಮುಂದಿನ ರೂಂನಲ್ಲಿರುವ ಹುಡುಗನ ಆದಿತ್ಯ .ಅವನು ಬಾಗಿಲು ತೆರೆದು ಹೊರಗೆ ಬಂದಮೇಲೆ ಊಟವನ್ನು ಅವನಿಗೆ ಕೊಡು ಎಂದು ಹೇಳಿ ಹೋದರು. ಕೆಲವು ನಿಮಿಷಗಳನಂತರ ಆದಿತ್ಯ ಹೊರಗೆ ಬಂದನು.
ವಿಧು ಮತ್ತು ಆದಿತ್ಯ ಇಬ್ಬರೂ ಸಮಾನ ವಯಸ್ಕರಾಗಿದ್ದರಿಂದ ಇಬ್ಬರಿಗೂ ಇಂಗ್ಲೀಷ್ ಬರುತ್ತಿದ್ದರಿಂದ ಅವರ ಮಾತುಕತೆಗೆ ಸಮಸ್ಯೆ ಏನು ಆಗಲಿಲ್ಲ .ಒಬ್ಬರಿಗೊಬ್ಬರ ಪರಿಚಯ ಆಯಿತು. ಆದಿತ್ಯ ಸಂಸ್ಕೃತ ಕಲಿಯಲು ಮತ್ತೂರಿಗೆ ಆಂಧ್ರದ ವಿಜಯವಾಡದಿಂದ ಬಂದಿದ್ದವನಾಗಿದ್ದನು. ವಿಧು ತಾನು ಬಂದಿದ್ದ ಕೆಲಸದ ವಿಚಾರವನ್ನು ಹೇಳಿದನು. ವಿಧು ಕೃಷ್ಣ ಅಣ್ಣನವರ ಮಾರ್ಗದರ್ಶನದಂತೆ ಜನರಿಗೆ ರಾಷ್ಟ್ರೀಯತೆಯ ಬಗ್ಗೆ ತಿಳಿಹೇಳುವ ಕೆಲಸವನ್ನು ಆರಂಬಿಸಿದನು. ಅವನಿಗೆ ಹೊಸ ಹೊಸ ಜಾಗಗಳನ್ನು ಆವಿಷ್ಕಾರ ಮಾಡುವ ಹಾಗೂ ಇತಿಹಾಸದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜಾಸ್ತಿ ಹಾಗಾಗಿ ಸ್ಥಳೀಯರೊಂದಿಗೆ ಕೆಲವು ಸ್ಥಳೀಯ ವಿಷಯಗಳನ್ನು ತಿಳುವ ಪ್ರಯತ್ನ ಮಾಡಿದನು. ಸಮಾಜವನ್ನು ಸೂಕ್ಷ್ಮವಾಗಿ ಅವಲೋಕಿಸುವ ವ್ಯಕ್ತಿತ್ವದ ವಿಧುವಿಗೆ ಸ್ಥಳೀಯವಾಗಿ ಒಬ್ಬ ವ್ಯಕ್ತಿಯ ಪರಿಚಯವಾಯಿತು. ಅವನ ಹೆಸರು ಸಾಗರ್ ವಿಧುವಿನ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ. ಮತ್ತೂರಿನ ಹತ್ತಿರದಲ್ಲೇ ಒಂದು ಪುರಾತನ ಶಿವನ ದೇವಾಲಯವಿದೆ ಎಂದು ಜನಕಿ ಅಮ್ಮ ಹಾಗೂ ಸಾಗರ್ ಇಂದ ತಿಳಿದ ಅವನಿಗೆ ಆ ದೇವಸ್ಥಾನವನ್ನು ನೋಡುವ ಬಯಕೆ. ಆದರೆ ಆ ದೇವಸ್ಥಾನಕ್ಕೆ ಸಂಜೆಯ ಮೇಲೆ ಯಾರೂ ಹೋಗುವುದಿಲ್ಲ ಅಲ್ಲಿ ದಿವ್ಯಜ್ಯೋತಿಯ ಸಂಚಾರವಿದೆ ಎಂದು ಜಾನಕಿ ಅಮ್ಮನವರು ಹೆದರಿಸುತ್ತಿದ್ದರು. ಹಾಗಾದರೆ ಆ ದೇವಸ್ಥಾನವನ್ನು ಸಂಜೆಯ ಸಮಯದಲ್ಲಿಯೇ ನೋಡಬೇಕು ಎಂದು ನಿಶ್ಚಯಿಸಿದ ವಿಧು ಅದರ ವಿಚಾರವಾಗಿ ಆದಿತ್ಯ ನೊಂದಿಗೆ ಚರ್ಚಿಸಿದನು. ಆದಿತ್ಯನು ಕೂಡ ಹುಚ್ಚುಸಾಹಸಗಳನ್ನು ಮಾಡಲು ಇಷ್ಟ ಪಡುವ ವ್ಯಕ್ತಿ. ಇಬ್ಬರು ಸೇರಿ ಒಂದು ಸಂಜೆ ದೇವಸ್ಥಾನದ ಹತ್ತಿರ......
No comments:
Post a Comment