Thursday, September 17, 2020

ಪ್ರೇಮದ ಅನ್ವೇಷಣೆ ಭಾಗ - 11


12ನೇ ತರಗತಿ ಓದುತ್ತಿದ್ದ ಸಮಯದಲ್ಲಿ ವಿಧುವಿಗೆ ಒಳ್ಳೆಯ ಉಪಾಧ್ಯಾಯರು ಸಿಕ್ಕರು. 12ನೇ ತರಗತಿಯ ವಿಜ್ಞಾನದ ವಿಷಯ ಹಾರಿಸಿದ್ದರಿಂದ ಗಣಿತವೆಂಬ ಕಬ್ಬಿಣದಕಡಲೆ ಜಿಗಿಯುವುದು ಸ್ವಲ್ಪ ಕಷ್ಟವೆನಿಸಿತು. ಕಾಲೇಜಿನಲ್ಲಿ ಉತ್ತಮ ಶಿಕ್ಷಕ ವೃಂದ ಮನೆಯಲ್ಲಿ ತದ್ವಿರುದ್ಧ ವಾತಾವರಣ ತೊಳಲಾಟದಲ್ಲಿ ವಿಜ್ಞಾನ ವಿಷಯದಲ್ಲಿ ಎರಡು ವಿಷಯಗಳಲ್ಲಿ ಅನುತ್ತೀರ್ಣನಾದ ಕಬ್ಬಿಣದ ಕಡಲೆಯಂತ್ತಿದ್ದ ಗಣಿತವನ್ನು ಶಿಕ್ಷಕರ ಪ್ರೋತ್ಸಾಹದಿಂದ ಪಾಸ್ ಮಾಡಿದ. ಇಷ್ಟು ಸಾಕಾಗಿತ್ತು ಮನೆಯಲ್ಲಿ ವಿಧವನ್ನು ಇನ್ನು ತುಚ್ಚವಾಗಿ ಕಾಣಲು. ತಾಯಿ ಎನಿಸಿಕೊಂಡವರು ಕಠಿಣವಾಗಿ ವರ್ತಿಸುತ್ತಿರಲು ದೇವರೇ ದಿಕ್ಕು ಎನ್ನುವಂತಾಯಿತು. ಆತನ ಪರಿಸ್ಥಿತಿ. ಆತನ ಕೆಲವು ಸ್ನೇಹಿತರು ಅನುತ್ತೀರ್ಣರಾಗಿದ್ದರು. ಅವರ ತಂದೆಯವರು ತಮ್ಮ ಮಕ್ಕಳಿಗೆ ಉಳಿದಿದ್ದ ಒಂದು ಅವಕಾಶ ಹತ್ತನೇ ತರಗತಿಯ ಆಧಾರದ ಮೇಲೆ ತಾಂತ್ರಿಕ ಕೋರ್ಸ್ ಗೆ ಸೇರಿಸುವುದು ಆಗಿತ್ತು.  ಸ್ನೇಹಿತರ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಖಾಸಗಿ ಕಾಲೇಜಿಗೆ ಹೆಚ್ಚಿನ ಪ್ರಮಾಣದ ಶುಲ್ಕವನ್ನು ತುಂಬಿ ಸೇರಿಸಿದರು. ಆದರೆ ವಿಧುವಿಗೆ ಆ ಅವಕಾಶ ಇರಲಿಲ್ಲ. ವಿಧು ಮನೆಯಲ್ಲಿಯೇ ಉಳಿಯಬೇಕಾಯಿತು. ಮನೆಯಲ್ಲಿ ಅನುತ್ತೀರ್ಣನಾದ ತಪ್ಪನ್ನು ತಿದ್ದಿ ಬುದ್ಧಿ ಹೇಳಿ ಮಾರ್ಗದರ್ಶನ ಮಾಡುವುದು ಬಿಟ್ಟು ಇನ್ನು ಮನೆಯಲ್ಲಿ ಮೂದಲಿಕೆಯ ತುಚ್ಛವಾದ ಮಾತನ್ನು ಹೆಚ್ಚು ಮಾಡಿದರು. ಇದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಏನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ಮನೆ ಬಿಟ್ಟು ಹೊರಡುವ ಯೋಚನೆ ಜನ್ಮತಾಳಿತು.
            ಮನೆಯಲ್ಲಿನ ಬೈಗುಳ ಮನಸ್ಸನ್ನು ಘಾಸಿ ಮಾಡುತ್ತಲೇ ಹೋಯಿತು. ಮನೆಯವರ ಬೈಗುಳ ತಪ್ಪಿಸಿಕೊಳ್ಳುವ ಸಲುವಾಗಿ ಹೊರಗಡೆ ಸುತ್ತಲೂ ಶುರುಮಾಡಿದ ಮನೆಯ ವಾತಾವರಣಕ್ಕಿಂತ ಹೊರಗಡೆ ಸಮಾಜದಲ್ಲಿ ನೆಮ್ಮದಿ ಸಿಗುವಂತಾಯಿತು. ಮನೆಯಲ್ಲಿ ಎಲ್ಲರೂ ಇದ್ದರೂ ಇಲ್ಲದಂತಿದ್ದ .ಅನಾಥಪ್ರಜ್ಞೆ ಸಾಮಾಜಿಕ ಜೀವನಕ್ಕೆ ಕಾಲಿಟ್ಟ ಮೇಲೆ ಕಡಿಮೆಯಾಗತೊಡಗಿತ್ತು. ತನ್ನ ಬದುಕನ್ನು ಮುಗಿಸಲು ಯೋಚಿಸಿದ್ದ ವಿಧುವಿಗೆ ಹೇಡಿಯಂತೆ ಸಾಯಬಾರದು. ಬದುಕನ್ನು ಸವಾಲಾಗಿ ಸ್ವೀಕರಿಸಬೇಕು ಎದುರಿಸಬೇಕು ಎಂಬ ಪಾಠವನ್ನು ಸಮಾಜವು ಕಲಿಸಿತು. ಸಮಾಜದಿಂದ ಕಲಿತ ಪಾಠ ಇನ್ನೂ ಅನೇಕ ಸಮಾಜ ಬದುಕಿಗೆ ಬೇಕಾದ ಪಾಠ ಕಲಿಸುತ್ತದೆ ಎಂಬ ಮಾತನ್ನು ಕೇಳಿದ್ದ ಆದರೆ ಅದರ ಅನುಭವ ಬರುವಂತಾಯಿತು. ಸಮಾಜದಲ್ಲಿ ಒಳ್ಳೆಯವರು ಹಾಗೂ ಕೆಟ್ಟವರ ಸಹವಾಸ ಒಳ್ಳೆಯದನ್ನು ಕೆಟ್ಟದ್ದನ್ನು ಗುರುತಿಸುವ ಕಲೆಯನ್ನು ಕಲಿಸಿತು. ಮನೆಯಲ್ಲಿನ ಮೂದಲಿಕೆಯನ್ನು ತಪ್ಪಿಸಿಕೊಳ್ಳಲು ಎಷ್ಟು ಸಾಧ್ಯವೋ ಅಷ್ಟು ಮನೆಯಿಂದ ಹೊರಬರಲು ಪ್ರಯತ್ನಿಸುತ್ತಿದ. ಈ ನಡುವೆ ಹಲವಾರು ರೀತಿಯ ಜನರ ಪರಿಚಯವಾದರು. ಚಿಕ್ಕನಿಂದಲೂ ಅದೇ ಊರಿನಲ್ಲಿ ಹುಟ್ಟಿ ಬೆಳೆದಿದ್ದರಿಂದ ಮುಖ ಪರಿಚಯವಿದ್ದ ಜನರು ಮಾತನಾಡಲು ಶುರು ಮಾಡಿದರು. ಅದೇ ಸಮಯದಲ್ಲಿ ಅಲ್ಲಿನ ವಾರ್ಡ್ ಚುನಾವಣೆ ಸನಿಹವಾಯಿತು.
                               ವಿಧುವಿಗೆ ಮೊದಲಿನಿಂದಲೂ ದಿನಪತ್ರಿಕೆ ಓದುವ ಹುಚ್ಚು ಇದ್ದಿದ್ದರಿಂದ ರಾಜಕೀಯ ವಿಷಯದ ಮೇಲೆ ಸ್ವಲ್ಪ ಓಲವು ಹೆಚ್ಚಾಗಿಯೇ  ಇತ್ತು. ಹಾಗಾಗಿ ರಾಜಕೀಯ ವಿಚಾರಗಳನ್ನು ಕೆಲವು ಜನರೊಟ್ಟಿಗೆ ಚರ್ಚೆ ಮಾಡುತ್ತಿದ್ದನ್ನು ಕಂಡು ಚುನಾವಣೆ ಪ್ರಚಾರ ಕಾರ್ಯ ಮಾಡಲು ಕರೆಯುತ್ತಿದ್ದರು. ಮನೆಯಲ್ಲಿನ ಚುಚ್ಚುಮಾತು ಮೂದಲಿಕೆಯ ಮಾತು ಕೇಳಿ ಕೇಳಿ ಸಾಕಾಗಿ ತಪ್ಪಿಸಿಕೊಳ್ಳಬೇಕೆಂದು ಅವರೊಟ್ಟಿಗೆ ಪ್ರಚಾರಕಾರ್ಯಕ್ಕೆ ಹೋಗುತ್ತಿದ್ದ. ಅಲ್ಲಿ ಎಲ್ಲಾ ಪಕ್ಷಗಳ ಪ್ರಚಾರವನ್ನು ಮಾಡುತ್ತಿದ್ದ ಎಲ್ಲಾ ಪಕ್ಷಗಳ ಅಂತರಾಳ ಹಾಗೂ ಅಂತರಂಗದ ಅರಿವು ಆಗುತ್ತಾ ಹೋಯಿತು. ಪ್ರಚಾರ ಮಾಡುವಾಗ ಕೆಲವು ಹುಡುಗರು ಅಣ್ಣ ನನ್ನ ಪ್ರೀತಿಗೆ ಸಪೋರ್ಟ್ ಮಾಡಿದ್ದಾರೆ ಎಂದು ಬರುತ್ತಿದ್ದರು. ವಿಧುವಿಗೆ ಅದು ವಿಚಿತ್ರವೆನಿಸಿತ್ತು. ಮನಸ್ಸಿನಲ್ಲಿ ಗೊಂದಲ ಇವರೆಲ್ಲ ಏಕೆ ಪ್ರೀತಿಗೆ ಅಣ್ಣ ಸಪೋರ್ಟ್ ಮಾಡುತ್ತಾನೆ ಅಂತ ಬರುತ್ತಾರೆ ಈ ಜಗತ್ತಿನಲ್ಲಿ ಪ್ರೀತಿ ಪ್ರೇಮ.....

No comments: