ಅದು ನನ್ನ ಹುಡುಗಿ ನನಗೆ ಸಿಗದವಳು ನಿಮಗೆ ಸಿಕ್ಕಿದ್ದಾಳೆ. ತಮಾಷೆ ಮಾಡಿದ ಕೂಡಲೇ ಅವರು, ಅದಿತಿ ನನ್ನ ಕೈರುಚಿಯನ್ನು ವಿಧು ನೋಡಲಿ ನಾನು ಇವತ್ತು ಅಡುಗೆಯನ್ನು ಮಾಡುತ್ತೇನೆ ಬಿಡಿ ಎಂದು ಹೇಳಿ ಅಡಿಗೆಯನ್ನು ಮಾಡಿ ಇಟ್ಟಿದ್ದಾಳೆ . ನಸುನಕ್ಕ ವಿಧು ಅದಕ್ಕೆ ಊಟದಲ್ಲಿ ಉಪ್ಪು ಖಾರ ಇಲ್ಲದ ಈ ರಸಂ ಅನ್ನು ಆ ದೇವರೇ ಮೆಚ್ಚಬೇಕು ಎಂದು ತಮಾಷೆ ಮಾಡುತ್ತ ಊಟವನ್ನು ಮಾಡಿದ. ದಿನವು ಹತ್ತಿರದಲ್ಲೇ ಇದ್ದ ಶಿವನ ಆಲಯಕ್ಕೆ ಹೋಗುವ ಅಭ್ಯಾಸವಿದ್ದ ವಿಧು ದೇವಸ್ಥಾನಕ್ಕೆ ಹೋಗಿ ಬರುವ ಸಮಯದಲ್ಲಿ ರೂಮಿನ ಹೊರಭಾಗದಲ್ಲಿ ಇದ್ದ ಅದಿತಿ ನೀವು ಬೆಳಗ್ಗೆ ಎಷ್ಟೊತ್ತಿಗೆ ಎದ್ದು ವ್ಯಾಯಾಮ ಮಾಡಲು ಹೋಗುತ್ತೀರಿ ಎಂದು ಕೇಳಿದಾಗ ನಗು ತಾಳಲಾರದೆ ನಕ್ಕು ನುಡಿದಿದ್ದ ವಿಧು ಹೌದು ದೇವಸ್ಥಾನದಲ್ಲಿ ಜಿಮ್ ಮಾಡುತ್ತೇನೆ ಎಂದು. ಶುಬ್ರ ವಸ್ತ್ರದಲ್ಲಿ ಯಾರುತಾನೇ ವ್ಯಾಯಾಮ ಮಾಡಲು ಹೋಗುತ್ತಾರೆ ಅಷ್ಟು ತಿಳಿಯದೆ ಈ ಹುಡುಗಿಗೆ ! ಮುಗ್ಧ ಪ್ರಶ್ನೆಗಳು ಅವಳ ಮುಗ್ದಮನಸ್ಸಿನ ಸೂಚಕ ವಾಗಿರುವಂತೆ ಇರುತ್ತಿದ್ದವು ಅದಿತಿಯ ಪ್ರಶ್ನೆಗಳು. ಕಲ್ಲಿನಂತಿದ್ದ ವಿಧುವಿನ ಮನಸ್ಸು ಮಗುವಿನಂತೆ ಮೃದುವಾಗುತ್ತ ಹೋಯಿತು. ಅದಿತಿಯ ಮುಗ್ಧ ಮಾತುಗಳು ಅವಳ ಹತ್ತಿರ ಮಾತನಾಡಲು ತವಕಿಸುತ್ತಿತ್ತು. ಮೊದಲ ಬಾರಿ ಬೇರೆ ಒಂದು ಜೀವಕ್ಕಾಗಿ ವಿಧುವಿನ ಮನಸ್ಸು ಚಡಪಡಿಸುತ್ತಿತ್ತು. ಅದಿತಿಯನ್ನು ಬೆಳಿಗ್ಗೆ ಸಂಜೆ ನೋಡಲಿಲ್ಲ ವೆಂದರೆ ಏನೋ ಕಳೆದುಕೊಂಡ ಅನುಭವ ಆದಂತೆಯೇ ! ವಿಧು ತನ್ನ ಜೀವನದಲ್ಲಿ ಬೇರೆ ಹುಡುಗಿ ಹತ್ತಿರ ಮುಕ್ತವಾಗಿ ಮಾತನಾಡಿದನೆಂದರೆ ಅದು ಅದಿತಿಯ ಹತ್ತಿರ ಮಾತ್ರ. ಆದಿತ್ಯ ಹಂತಹಂತವಾಗಿ ಸುಧಾರಿಸುತ್ತಾ ಗುಣವಾಗುತ್ತ ಹೋದ.
ಅದಿತಿಯ ಪ್ರೀತಿಯಲ್ಲಿ ಬಿದ್ದ ವಿಧುವಿಗೆ ದಿನಗಳು ಕಳೆದಿದ್ದು ಅವನ ಅರಿವಿಗೆ ಬರಲಿಲ್ಲ . ಆದಿತ್ಯ ಸುಧಾರಿಸುತ್ತಿದ್ದಂತೆ ವೈದ್ಯರು ಅವನಿಗೆ ಕರೆದುಕೊಂಡು ಹೋಗಬಹುದು ಎಂದು ಹೇಳಿದರು. ಅದಿತಿ ಕುಟುಂಬದವರು ಇನ್ನು ಮೂರು ದಿನಗಳಲ್ಲಿ ಅವರು ಕರ್ನಾಟಕವನ್ನು ಬಿಟ್ಟು ಹೊರಡುವವರಲ್ಲಿದ್ದರು. ಅದು ವಿಧುವಿಗೆ ತಿಳಿದ ಕೂಡಲೇ ಹೇಗಾದರೂ ಧೈರ್ಯಮಾಡಿ ತನ್ನ ಪ್ರೀತಿಯನ್ನು ಅದಿತಿಯಲ್ಲಿ ಹೇಳಿಬಿಡಬೇಕು ಎಂದು ನಿಶ್ಚಯಿಸಿ ಅದಿತಿಯ ಹತ್ತಿರ ಹೋದ. ಆದರೆ ಅವನಿಗೆ ಧೈರ್ಯ ಸಾಲದೆ ಹೋಯಿತು. ಆದರೂ ಧೈರ್ಯ ಮಾಡಿ ಇನ್ನೇನು ಅವಳಿಗೆ ತನ್ನ ಪ್ರೀತಿಯ ಬಗ್ಗೆ ಹೇಳಬೇಕೆನ್ನುವಷ್ಟರಲ್ಲಿ ಅದಿತಿಗೆ ಫೋನ್ ಬಂತು, ಕರೆಯನ್ನು ಸ್ವೀಕಾರ ಮಾಡಿ ನಾನು ನಿಮಗೆ ಆಮೇಲೆ ಸಿಗುತ್ತೇನೆ ಎಂದು ಹೇಳಿ ಹೋದಳು. ಓಹೋ ನನಗೆ ಧೈರ್ಯವಾಗಿ ನೇರವಾಗಿ ಹೇಳಲು ಆಗುತ್ತಿಲ್ಲವಲ್ಲ ಸರಿ ಆಗದಿದ್ದರೆ ಹೇಗೆ ಹೇಳುವುದು ಎಂದು ಯೋಚಿಸುತ್ತಿರುವಾಗಲೇ ಅದಿತಿ ಜಾನಕಿ ಅಮ್ಮನವರ ಜೊತೆ ಅಡುಗೆ ಮಾಡಿ ತರಲು ಹೋಗಿರುವುದು ತಿಳಿಯಿತು. ಹೇಗಿದ್ದರೂ ಜಾನಕಿ ಅಮ್ಮನವರಿಗೆ ವಿಧು ಅದಿತಿ ಮಾತನಾಡುವುದು ತಿಳಿದ ವಿಚಾರವೇ ಎಂದು ತಿಳಿದಿದ್ದ ವಿಧು ಜಾನಕಿ ಅಮ್ಮನವರಿಗೆ ಫೋನ್ ಮಾಡಿ ಅದಿತಿಗೆ ಕೊಡಲು ಹೇಳಿದರೆ ಕೊಡುತ್ತಾರೆ ಎಂದು ಜಾನಕಿ ಅಮ್ಮನವರಿಗೆ ಫೋನ್ ಮಾಡಿದ ಆ ಕಡೆಯಿಂದ ಇಂಗ್ಲಿಷ್ನಲ್ಲಿ ಮಾತು ನಾನು ಅದಿತಿ ಮಾತನಾಡುತ್ತಿರುವುದು ಎಂದು ಓಹೋ ಅದಿತಿ ಫೋನ್ ತೆಗೆದುಕೊಂಡಿರುವುದರಿಂದ ನೇರವಾಗಿ ಹೇಳಿ ಬಿಡಬೇಕೆಂದು, ಅದಿತಿಯವರೇ ಎಂದ ವಿಧು ಅದಿತಿ ಏನು ಹೇಳಿ ಎಂದಳು ನಾನು ನಿಮಗೆ ಒಂದು ಮಾತನ್ನು ಹೇಳಬೇಕೆಂದಿದ್ದನೇ ಎಂದ ಇನ್ನೇನು ಧೈರ್ಯವಾಗಿ ಹೇಳಬೇಕು ಅನ್ನುವಷ್ಟರಲ್ಲಿ ಫೋನ್ ನಿಶಬ್ದವಾಯಿತು.
ಹಲೋ ಹಲೋ ಎಂದು ವಿಧು, ಆ ಕಡೆಯಿಂದ ಯಾರು ಮಾತನಾಡದಂತಾಯಿತು. ಕೆಲವು ಸಮಯದ ನಂತರ ಜಾನಕಿ ಅಮ್ಮನವರು ಹಾಗೂ ಅದಿತಿ ಅಡುಗೆಯನ್ನು ತಯಾರಿಸಿಕೊಂಡು ಬಂದರು. ಬಂದವರೇ ಅದಿತಿ ವಿಧುವಿಗೆ ಊಟವನ್ನು ಕೊಟ್ಟು ಕೇಳಿದಳು. ನೀವು ಫೋನಿನಲ್ಲಿ ಏನೋ ಹೇಳಲು ಬಂದಿರಿ. ಆದರೆ ಫೋನಿನಲ್ಲಿ ಬ್ಯಾಟರಿ ಕಡಿಮೆ ಇದ್ದ ಕಾರಣ ಫೋನ್ ಸ್ವಿಚ್ ಆಫ್ ಆಯಿತು, ಏನು ಹೇಳಿ ಎಂದಳು. ಅದಿತಿಯ ಪಕ್ಕ ಜಾನಕಿ ಅಮ್ಮನವರು ಇದ್ದಿದ್ದರಿಂದ ವಿಧು ಏನು ಇಲ್ಲ ಸ್ವಲ್ಪ ಊಟವನ್ನು ಕಡಿಮೆ ತರಲು ಹೇಳೋಣವೆಂದು ಫೋನ್ ಮಾಡಿದೆ ಎಂದು ಸುಮ್ಮನಾದ. ಅವರು ಹೋಗುವ ಮೂರು ದಿನಗಳ ಒಳಗಾಗಿ ಹೇಳಲು ವಿಧುವಿಗೆ ಕೊನೆಗೂ ಸಾಧ್ಯವಾಗಲಿಲ್ಲ. ಅದಿತಿ ಹಾಗೂ ಅವರ ಕುಟುಂಬ ಹೋಗುವ ದಿನ ಬಂದೇ ಬಿಟ್ಟಿತು ಅವರು ಹೋಗುವವರಿದ್ದರು. ಜಾನಕಿ ಅಮ್ಮನವರು ನಾನು ಇನ್ನು ಹೇಗೆ ಅವರನ್ನು ನೋಡಲಿ ಮಾತನಾಡಿಸಲಿ ಇಲ್ಲಿ ಅವರನ್ನು ಮನೆಯ ಮಕ್ಕಳಂತೆ ನೋಡಿಕೊಂಡಿದ್ದೇನೆ. ಇನ್ನು ಹೇಗೆ ಎಂಬ ಚಿಂತೆಯನ್ನು ಹೊರಹಾಕಿದರು. ಈಗ ಫೋನಿನಲ್ಲೇ ನೋಡಿ ನೇರವಾಗಿ ಮಾತನಾಡಬಹುದು ಅಂತಹ ಅವಕಾಶವಿದೆ ಎಂದು ಹೇಳಿದ ವಿಧು. ಅದಿತಿಯನ್ನು ಕರೆದು ವಿಧುವಿನ ಫೋನ್ ಮೂಲಕ ನಿಮ್ಮನ್ನು ಸಂಪರ್ಕಿಸುತ್ತೇನೆ ಎಂದು ಹೇಳಿದರು. ಅದಕ್ಕೆ ಅದಿತಿ ಒಪ್ಪಿದಳು. ಆಕೆಯ ಫೋನ್ ನಂಬರನ್ನು ವಿಧುವಿಗೆ ನೀಡಿದಳು. ಮರುದಿನ ಬೆಳಗಿನ ಜಾವ ಐದು ಮೂವತ್ತರ ಸಮಯದಲ್ಲಿ ಅವರಿಗೆ ಹೋಗಲು ವಾಹನದ ವ್ಯವಸ್ಥೆ ಮಾಡಲಾಯಿತು. ಅದಿತಿಯನ್ನು ಅವರ ಕುಟುಂಬವನ್ನು ಕಳುಹಿಸಿಕೊಡುವಾಗ.......
2 comments:
Pada varnane adbhutha👏
dhanyavadagalu
Post a Comment