Sunday, September 13, 2020

ಪ್ರೇಮದ ಅನ್ವೇಷಣೆ ಭಾಗ-10


ಇನ್ನು ಈ ಮನುಷ್ಯ ಹಲವಾರು ಜನರ ಮುಂದೆ ಕೇವಲವಾಗಿ ಕಾಣುವಂತೆ ಮಾಡುತ್ತಾನೆ .ಈ ಮನುಷ್ಯನ ಎದುರು ನಿಲ್ಲದೆ ಹೊರತು ಬೇರೆ ದಾರಿಯಿಲ್ಲವೆಂದು ತಿಳಿದು ಮೊದಲ ಬಾರಿ ತನ್ನ ತಂದೆಯ ವಿರುದ್ಧ ಮಾತನಾಡಲು ಶುರುಮಾಡಿದ. ಇದು ಅವನ ತಾಯಿಗೆ ಅಪಮಾನ್ಯ ವಾಯಿತು. ಅವನ ತಾಳ್ಮೆಯ ಕಟ್ಟೆ ಒಡೆದು ತಂದೆ ಎಂಬ ಮುಲಾಜನ್ನು ನೋಡದೆ ತನ್ನ ತಂದೆ ಬಳಸುತ್ತಿದ್ದ ಅವಾಚ್ಯ ಶಬ್ದಗಳನ್ನು ತಿರುಗಿಸಿ ಅವರ ವಿರುದ್ಧ ಬಳಸಲು ಆರಂಭಿಸಿದ. ಆಗ ಅವನ ತಾಯಿಯು ತನ್ನ ಗಂಡನ ಪರವಾಗಿ ನಿಂತದ್ದು ನೋಡಿ ಮತ್ತೆ ಅವನಿಗೆ ಕಾಡಿದ ಪ್ರಶ್ನೆ ನಿಜವಾಗಿಯೂ ಈಕೆ ನನ್ನ ತಾಯಿಯೇ ! ತಂದೆಯ ದೌರ್ಜನ್ಯ ಪ್ರಶ್ನೆ ಮಾಡಿದ್ದೆ ಮುಳುವಾಯಿತು. ಆನಂತರದ ದಿನಗಳಲ್ಲಿ ತಾಯಿ ಎನಿಸಿಕೊಂಡವರಿಂದ ಚುಚ್ಚು ಮಾತುಗಳು ಪ್ರಾರಂಭವಾದವು. ಮನೆಯಲ್ಲಿನ ಸಂಘರ್ಷ ಹೆಚ್ಚಾಯಿತು. ಚುಚ್ಚು ಮಾತುಗಳನ್ನು ಕೇಳುವುದು ಇವನಿಗೆ ಅಭ್ಯಾಸವಾಯಿತು. ತಾಯಿಯೆಂದರೆ ಮಮತೆಯ, ಪ್ರೀತಿಯ ರೂಪ, ತ್ಯಾಗಮಹಿ ಎಂದು ಬಣ್ಣಿಸುವ ಈ ಜಗತ್ತು ನೋಡಿ ವಿಚಿತ್ರವೆನ್ನಿಸಿತು. ತಾಯೆಂದರೆ ಬರಿ ಒಳ್ಳೆಯವರಿರುತ್ತರ ? ಕೆಟ್ಟವರು ಇರುವುದಿಲ್ಲವಾ ? ಇಲ್ಲಿ ನನ್ನದೇನು ತಪ್ಪು ತಂದೆ ಎನಿಸಿಕೊಂಡವನ ದೌರ್ಜನ್ಯವನ್ನು ಪ್ರಶ್ನೆ  ಮಾಡಿದ್ದೆ ತಪ್ಪು ಎಂದು ಅನಿಸಿದ್ದು ಉಂಟು. ವಿಧು ಏನನ್ನು ಕೇಳಿದರೂ ಸಿಗದ ವಸ್ತುಗಳು ತೇಜಸ್ ಕೇಳಿದ ಕೂಡಲೇ ಸಿಗುತ್ತಿದ್ದವು ಏಕೆಂದರೆ ಅವನು ಅವರಿಗೆ ಅದೃಷ್ಟದ ಮಗನಾಗಿದ್ದನು. ಹೀಗಾಗಿ ಯಾವುದೇ ವಸ್ತುವಿನ ಮೇಲೆ ವಿಧುವಿಗೆ ವ್ಯಾಮೋಹ ಉಂಟಾಗದಂತೆ ಆಯಿತು. ಯಾವುದು ಅವನಿಗೆ ಸಿಗದೆ ಹೋದದ್ದು ಅವನು ವಸ್ತುಗಳ ಮೇಲಿನ ಆಸೆಯನ್ನು ಬಿಡಲು ನೆರವಾಯಿತು. ಆದರೆ ಮನೆಗೆ ಬಂದು ಹೋಗುವವರ ಮುಂದೆ ಅವಮಾನ ಅಪಮಾನ ಕಡಿಮೆಯಾಗಲಿಲ್ಲ .ಅವನಿಗೆ ಅವನ ಸ್ವಾಭಿಮಾನ ಬಡಿದು ಬಡಿದು ಹೇಳುತ್ತಿತ್ತು.
            ಒಂದು ತುತ್ತು ಅನ್ನಕ್ಕಾಗಿ ಇವರಿಂದ ಇನ್ನೂ ಎಷ್ಟು ಎಂದು ದೌರ್ಜನ್ಯವನ್ನು ಸಹಿಸುವುದು. ಹಲವಾರು ಬಾರಿ ಮನೆಬಿಟ್ಟು ಹೊರಡಲು ಯೋಚಿಸಿದ್ದರು ಎಲ್ಲಿಗೆ ಹೋಗುವುದು ಎಂಬ ಪ್ರಶ್ನೆಯೊಂದಿಗೆ ಸುಮ್ಮನಾಗುತ್ತಿದ್ದ. ಬದುಕು ಒಂದು ಹೋರಾಟ ಅದು ಮನೆಯಲ್ಲೇ ಇರಬಹುದು ಅಥವಾ ಸಮಾಜದಲ್ಲಿ ಇರಬಹುದು ಹೋರಾಟ ಮಾಡಬೇಕಾದದ್ದು ಅನಿವಾರ್ಯ ಅದಕ್ಕೆ ನಾನು ಸಿದ್ಧವಾಗಬೇಕು ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳಬೇಕು. ಆತ್ಮಹತ್ಯೆಯ ಯೋಚನೆ ಅವನ ತಲೆಯಲ್ಲಿ ಹೊಳೆದರು. ಆತ್ಮಹತ್ಯೆಯ ಹಾದಿ ತುಳಿಯುವವರು ಹೇಡಿಗಳು ಎಂದು ಓದಿದ್ದ ವಿಧು ನಾನು ಹೇಡಿಯಲ್ಲ ಹೋರಾಡುತ್ತೇನೆ. ಆ ವಿಧಿ ತನ್ನ ಸಾವನ್ನು ಪಡೆಯುವವರೆಗೂ ಹೋರಾಡುತ್ತೇನೆ ಎಂದು ಮನಸ್ಸಿನಲ್ಲಿ ಅಂದುಕೊಂಡು ತನ್ನ ಬದುಕಿನ ಹೋರಾಟವನ್ನು ಮುಂದುವರೆಸಿದ್ದ. ನನ್ನನ್ನು ಇವರು ಇಷ್ಟು ಕೇವಲವಾಗಿ ಕಾಣುತ್ತಿರುವುದು ಇವರ ಹಂಗಿನಲ್ಲಿ ಇರುವುದರಿಂದಲೇ ಎಂದು ನಿರ್ಧರಿಸಿ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲು ಮುಂದಾದ, ಬಟ್ಟೆಗಳನ್ನು ತೊಳೆದುಕೊಳ್ಳುತ್ತಿದ್ದ ಜೊತೆಗೆ ತಾನೇ ಅಡಿಗೆಯನ್ನು ಮಾಡಿಕೊಳ್ಳಲು ಶುರು ಮಾಡಿದ. ಅವರ ತಾಯಿಯ ಮೇಲಿನ ಅವಲಂಬನೆಯಿಂದ ಸಂಪೂರ್ಣವಾಗಿ ಹೊರಬಂದ. ತನ್ನ ಕಾಲೇಜಿನಲ್ಲಿ 11ನೇ ತರಗತಿ ಉತ್ತೀರ್ಣನಾದ ವಿಧು, 12ನೇ ತರಗತಿ ಪ್ರವೇಶ ಪಡೆಯುವ ಹೊತ್ತಿಗೆ ಅವನ ಮನಸ್ಸಿನಲ್ಲಿ ತೊಳಲಾಟ ಹದಿಹರಿಯದ ಹೊಯ್ದಾಟ ತನ್ನ ನೋವು ನಲಿವನ್ನು ಯಾರಲ್ಲಿ ಹೇಳಿಕೊಳ್ಳಲಿ ಎಂಬ ಜಿಜ್ಞಾಸೆ. ನೋವನ್ನು ಯಾರಿಗಾದರೂ ಹೇಳಿಕೊಂಡರು ಯಾರು ಕೂಡ ಅದಕ್ಕೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂಬ ಸತ್ಯದ ಅರಿವು ಅವನಿಗಿತ್ತು .ಸ್ನೇಹಿತರು ಮನೆಗೆ ಬಂದರು ಅವರನ್ನು ಮನೆಯ ಒಳಗೆ ಕರೆಯಲು ಹಿಂದುಮುಂದು ನೋಡುತ್ತಿದ. ಒಳಗೆ ಕರೆದರೆ ಎಲ್ಲಿ ಆಥಿತ್ಯ ನಾನೇ ಕೊಡಬೇಕಾಗಿ ಬರುವುದು ಅವರು ಕೇಳಿದರೆ ಏನು ಹೇಳುವುದು ಎಂಬ ಅಂಜಿಕೆ ಇನ್ನು ಅವರ ತಂದೆ ತಾಯಿಯನ್ನು ಪರಿಚಯ ಮಾಡಿ ಕೊಡುವಂತಿರಲಿಲ್ಲ ಬಿಡುವಂತೆಯೂ ಇರಲಿಲ್ಲ ಪರಿಚಯ ಮಾಡಿಕೊಟ್ಟರೆ ಎಲ್ಲಿ ಸ್ನೇಹಿತರ ಮುಂದೆ ಅವಮಾನ ಮಾಡುತ್ತಾರೆ ಎಂಬ ಯೋಚನೆ....

No comments: