ಅವರ ಕುಟುಂಬವನ್ನು ಕಳುಹಿಸಿಕೊಡುವಾಗ ಮೊದಲಬಾರಿ ಮನಸ್ಸಿಗೆ ತುಂಬಾ ಬೆಲೆ ಬಾಳುವುದನ್ನು ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಭಾವ ವಿಧುವನ್ನು ಬಹಳವಾಗಿ ಕಾಡಿತು. ಜಾನಕಿ ಅಮ್ಮನವರು ಅತ್ತುಬಿಟ್ಟರು ಅಷ್ಟು ಅನನ್ಯವಾಗಿತ್ತು ಅವರ ಸಂಬಂಧ ಅವರನ್ನು ಕಳುಹಿಸಿದ ದಿನ ತುಂಬಾ ದುಃಖದ ದಿನವಾಗಿತ್ತು .ಆದರೂ ವಿಧುವಿಗೆ ಒಂದು ಸಮಾಧಾನಕರ ವಿಷಯ, ಏನೆಂದರೆ ಅದಿತಿಯ ಫೋನ್ ನಂಬರ್ ಸಿಕ್ಕಿದ್ದು ಇಂದು ಸಂಜೆಯಾದರೂ ನಾನು ನನ್ನ ಪ್ರೀತಿಯ ವಿಷಯವನ್ನು ಹೇಳಿಬಿಡಬೇಕು ಎಂದು ನಿರ್ಧರಿಸಿದ ವಿಧು.
ಅಂದು ವಿಧು ತನ್ನ ಸ್ನೇಹಿತನಾದ ಸಾಗರ್ ಒಟ್ಟಿಗೆ ಏಂದಿನಂತೆ ಸಂಜೆ ವಾಯು ವಿಹಾರಕ್ಕೆ ಹೋದನು ದಿನ ನಿತ್ಯದ ವಾಯುವಿಹಾರಕ್ಕೆ ಮತ್ತುರಿನಿಂದ ಹೊಸಳ್ಳಿಗೆ ಕಾಲು ಸೇತುವೆ ಮೇಲೆ ಹೋಗಿ ಹೊಸಳ್ಳಿ ದಡವನ್ನು ಮುಟ್ಟಿ ಬರುತ್ತಿದ್ದರು. ಅಂದು ಎಂದಿನಂತೆ ಕಾಲು ಸೇತುವೆ ಮೇಲೆ ಸಣ್ಣದಾಗಿ ಹರಿಯುವ ನೀರಿನ ಮೇಲೆ ನಡೆದು ಹೋಗುವಾಗ ವಿಧುವಿನ ಫೋನ್ ರಿಂಗಣಿಸಿತು. ಫೋನನ್ನು ತೆಗೆದುಕೊಳ್ಳವ ಸಮಯದಲ್ಲಿ ಕಾಲುಜಾರಿದ ವಿಧು. ಸಾಗರ್ ವಿಧುವಿನ ಕೈಯನ್ನು ಹಿಡಿದ, ಜಾರಿದ ರಭಸಕ್ಕೆ ಫೋನ್ ನೀರಿನ ಅಂತರಾಳವನ್ನು ಸೇರಿತು. ಸಾಗರ್ ತಕ್ಷಣ ನೀರಿಗೆ ಜಿಗಿದ ಫೋನ್ ತರಲೆಂದು. ಆದರೆ ಫೋನ್ ಸಿಗಲಿಲ್ಲ ಅದಾಗಲೇ ನೀರಿನ ಅಂತರಾಳದಲ್ಲಿ ಫೋನ್ ಮುಳುಗಿಹೋಯಿತು. ವಿಧು ಹಾಗೂ ಅದಿತಿಯ ನಡುವೆ ಇದ್ದ ಏಕಮಾತ್ರ ಕೊಂಡಿ ಅಂತಿದ್ದ ಫೋನ್ ನೀರಿಗೆ ಜಾರಿದ ಕೂಡಲೇ ವಿಧುವಿನ ಮನವು ನೀರಿನಲ್ಲಿ ಜಾರಿತು ವಿಧು ಮೌನವಾದ.
* * *
ಕೃತಜ್ಞತೆಗಳು
ನನ್ನ ಮೊಟ್ಟ ಮೊದಲ ಕೃತಜ್ಞತೆ ನಿಮಗೆ ಓದುಗರಿಗೆ ಸಲ್ಲುತ್ತದೆ. ಈ ಕಥೆಯು ನಿಮ್ಮಲ್ಲಿ ಆಸಕ್ತಿಯನ್ನು ಕೆರಳಿಸಿತು ಎನ್ನುವುದು ನನಗೆ ತುಂಬಾ ಪ್ರಿಯವಾದ ಸಂಗತಿಯಾಗಿದೆ. ಒಂದು ಕಥೆ ತುಂಬಾ ಅಮೋಘವಾಗಿ ಬರಬೇಕಾದರೆ ಅದರ ಹಿಂದೆ ಹಲವಾರು ಕಾಣದ ಕೈಗಳು ತಮ್ಮ ಕೆಲಸಗಳನ್ನು ಮಾಡಿರುತ್ತವೆ. ಈ ಕಥೆಯನ್ನು ಮೊದಲ ಬಾರಿ ಓದಿದ ಸಾಹಿತ್ಯ ಪ್ರಿಯರಾದ ಪುಟ್ಟಮಾರರಶೆಟ್ಟಿ ಅಣ್ಣನವರು ಕಥೆಯಲ್ಲಿ ಇದ್ದ ಹಲವಾರು ಪುನರಾವರ್ತಿತ ಪದಗಳನ್ನು ತೆಗೆಯಲು ಹೇಳಿ ಅದಕ್ಕೆ ಸ್ಪಷ್ಟ ರೂಪವನ್ನು ಕೊಟ್ಟರು.
ಇನ್ನು ನನ್ನ ಕಥೆಯನ್ನು ಮೆಚ್ಚಿ ನ್ಯೂಸ್ ಮೈಸೂರ್ ವೆಬ್ಸೈಟ್ನಲ್ಲಿ ಪ್ರಕಟ ಮಾಡುತ್ತಿದ್ದ ಹೊಸದಿಗಂತ ಪತ್ರಿಕೆಯ ಅಂಕಣಕಾರ ಹಾಗೂ ಲೇಖಕರಾದ ಪ್ರವೀಣ್ ಕುಮಾರ್ ಮಾವಿನಕಾಡು ಅಣ್ಣನವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ.
ಅಂತಿಮ ರೂಪದಲ್ಲಿ ಈ ಕಥೆಯನ್ನು ನೀವು ಓದುವಂತೆ ಮಾಡಿದ ಕಥೆಯ ಅಭಿಮಾನಿಗಳಿಗೆ ಅನಂತ ಅನಂತ ಧನ್ಯವಾದಗಳು.
No comments:
Post a Comment