12ನೇ ತರಗತಿ ಅನುತ್ತೀರ್ಣನಾದ ಅವನಿಗೆ ಡಿಪ್ಲೊಮಾದಲ್ಲಿ ಆಯ್ಕೆಯಾಗಿದ್ದು ಬದುಕಿನಲ್ಲಿ ಅಮೃತ ಸಿಕ್ಕಿದ ಅನುಭವವಾಯಿತು. ಹೌದು, ಹೊಸ ಕಾಲೇಜು ಹೊಸ ಸ್ನೇಹಿತರ ಬಳಗ ಬದುಕಿನಲ್ಲಿ ಹೊಸ ಬುಗ್ಗೆ , ಹೊಸಬೆಳಕು. ನೇರ ನಿಷ್ಠುರಿವಾದಿಯಾದವನು ಯಾವುದಕ್ಕೂ ಹೆದರುವ ಜಾಯಮಾನ ಅವನದಲ್ಲ ,ತಪ್ಪನ್ನು ನೇರವಾಗಿ ಖಂಡಿಸುವ ಧೈರ್ಯ, ಚಾತಿ ಅವನಲ್ಲಿತ್ತು .ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯುವುದು ಶತಸಿದ್ಧ. ಇರುವುದರ ಒಳಗಾಗಿ ಏನನ್ನಾದರೂ ಸಾಧಿಸಬೇಕು ಎಂಬ ದೃಢ ಸಂಕಲ್ಪ ಅವನದು. ಬದುಕಿನಲ್ಲಿ ಯಾವತ್ತು ಹೇಡಿಯಂತೆ ಸಾಯಬಾರದು ಎಂದು ನಿಶ್ಚಯಿಸಿದ ಅವನಿಗೆ ಉಳಿದಿದ್ದು ಒಂದೇ ಮಾರ್ಗ ಚೆನ್ನಾಗಿ ಓದಬೇಕು ಉತ್ತಮ ಅಂಕ ಪಡೆದು ಬದುಕು ಕಟ್ಟಿಕೊಳ್ಳಬೇಕು. ಪುಸ್ತಕದ ಜ್ಞಾನ ಅವನ ಮಸ್ತಕವನ್ನು ತುಂಬಿತ್ತು .ಅವನ ಬದುಕನ್ನು ಸಮಾಜದ ಸೇವೆಗೆ ಮೀಸಲಿಡಬೇಕು ಎಂದು ನಿಶ್ಚಯಿಸಿದ. ಅವನು ಅವನಂತೆ ಮಾನಸಿಕ ಹಿಂಸೆ ಅನುಭವಿಸುವವರ ನೋವಿಗೆ ಸ್ಪಂದಿಸಬೇಕು. ಅವರನ್ನು ಸಮಾಜಕ್ಕೆ ಉತ್ತಮ ವ್ಯಕ್ತಿಗಳನ್ನಾಗಿ ಮಾಡಬೇಕು. ಕೆಲವರಿಗೆ ತಂದೆ ತಾಯಿ ಇರುತ್ತಾರೆ ಮಕ್ಕಳು ಇರುವುದಿಲ್ಲ ಮತ್ತೆ ಕೆಲವರಿಗೆ ತಂದೆ-ತಾಯಿಯೇ ಇರುವುದಿಲ್ಲ ಮಕ್ಕಳು ಅನಾಥರು ಇರುತ್ತಾರೆ. ಅಂತವರನ್ನು ಸೇರಿಸಿ ಒಂದು ಸೂರಿನಡಿ ಬದುಕುವಂತೆ ಮಾಡಬೇಕು ಒಟ್ಟಿನಲ್ಲಿ ನಾನು ಬದುಕು ಕಟ್ಟಿಕೊಂಡು ಇತರರ ಬದುಕಿಗೆ ಬೆಳಕಾಗಿ ಬಾಳಬೇಕು. ಇನ್ನು ಮುಂದೆ ನನಗಾಗಿ ಅಲ್ಲದಿದ್ದರೂ ಸಮಾಜದ ಒಳಿತಿಗಾಗಿ ಜೀವಿಸಬೇಕು ಎಂಬ ಆಲೋಚನೆಯಲ್ಲಿ ವಿದ್ಯಾಭ್ಯಾಸ ಮುಂದುವರೆಯಲು ಪ್ರಾರಂಭವಾಯಿತು. ಅವನಿಗೆ ತಾಯಿ ಸರಸ್ವತಿಯ ಕೃಪೆ ಬಿಟ್ಟರೆ ಮತ್ತೆ ಏನು ಬೇಡವಾಯಿತು. ನಾಟಕೀಯತೆ, ಸ್ವಾರ್ಥ, ಪ್ರೀತಿಯ ಬಗ್ಗೆ ನಂಬಿಕೆ ಇಲ್ಲದಂತಾಯಿತು. ಹೊಸ ಬದುಕಿನೊಂದಿಗೆ ಹೊಸ ಆಲೋಚನೆಯೊಂದಿಗೆ ಮತ್ತೆ ಬದುಕನ್ನು ಶುರುಮಾಡಿದ.
ಶಿಸ್ತುಬದ್ಧವಾದ ಜೀವನ ಮಿತಾಹಾರ ವ್ಯಾಯಾಮ, ಓದು ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವ ಶಿಸ್ತುಬದ್ಧವಾದ ಜೀವನಕ್ಕೆ ಹೊಂದಿಕೊಂಡು ಬಿಟ್ಟಿದ್ದ .ಬದುಕನ್ನು ಸಮಾಜಕ್ಕೆ ಮೀಸಲಿಡುವ ಸಂಕಲ್ಪಕ್ಕೆ ಅವನು ಸಿದ್ಧನಾದ. ಕಾಲೇಜು ದಿನಗಳು ಪ್ರಾರಂಭವಾದವು ಎಲ್ಲರನ್ನೂ ಸಮಾನವಾಗಿ ಕಾಣುವ ವಿಧು ಎಲ್ಲಾ ವಿಭಾಗದ ಸ್ನೇಹಿತರನ್ನು ಸಂಪಾದಿಸುವಲ್ಲಿ ಸಫಲನಾದ. ಕೆಲವೇ ದಿನಗಳಲ್ಲಿ ಉತ್ತಮ ಸ್ನೇಹಿತ ವರ್ಗವನ್ನು ಸಂಪಾದಿಸಿದ. ಕೆಲವು ದಿನಗಳ ನಂತರ ಇಬ್ಬರು ಹೊಸ ವ್ಯಕ್ತಿಗಳ ಆಗಮನವಾಯಿತು. ಮೊದಲು ಆಯ್ಕೆಯಾದವರು ಕಾಲೇಜಿಗೆ ಬರದಿರುವ ಕಾರಣ ಎರಡನೇ ಪಟ್ಟಿಯಲ್ಲಿ ಬಂದಿದ್ದವರು ಅವರಾಗಿದ್ದರು. ಅವರಲ್ಲಿ ಒಬ್ಬ ವ್ಯಕ್ತಿ ವಿಧುವನ್ನು ಪರಿಚಯ ಮಾಡಿಕೊಂಡ ಅವನ ಹೆಸರು ಕುಶಾಲ್ ಮತ್ತೊಬ್ಬ ಸಂಜಯ್. ಆಟೋಮೊಬೈಲ್ ವಿಭಾಗಕ್ಕೆ ಅವರು ಬಂದಿದ್ದರಿಂದ ಸಹಜವಾಗಿ ಉತ್ತಮ ಸಹಪಾಠಿಗಳದರು.ದಿನಕಳೆದಂತೆ ಕುಶಾಲ್ ವಿಧುವಿಗೆ ಆತ್ಮೀಯನಾಗುತ್ತಾ ಹೋದ, ಬೇರೆ ಸಹಪಾಠಿಗಳು ಎಂತಹ ಸ್ನೇಹ ಇವರದು ಒಂದೇ ಜೀವ ಎರಡು ಆತ್ಮ ಎಂದು ಕಾಲೇಜಿನ ಇತರ ಸಹಪಾಠಿಗಳು ಮಾತನಾಡಲು ಆರಂಭಿಸಿದರು. ವಿಧು ಆ ವಿಚಾರವಾಗಿ ಯಾರೇ ಏನೇ ಅಂದರು ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ ಏಕೆಂದರೆ ಅವನು ಸರ್ವರನ್ನೂ ಸಮಾನವಾಗಿ ಕಾಣುತ್ತಿದ್ದ ವ್ಯಕ್ತಿ. ಎಲ್ಲರೂ ಸಮಾನರು ಎಂಬ ಭಾವ ಅವನದು. ಅವನಿಗೆ ಓದುವುದು ಮಾತ್ರ ಮುಖ್ಯವಾಗಿತ್ತು. ಸಹಪಾಠಿಯಾಗಿದ್ದ ಕುಶಾಲ್ ಮೊದಲಿಗನಾಗಿ ಫೋನ್ ಮಾಡುವುದು ಮನೆಗೆ ಬರುವುದು ವಿಧುವಿನ ಜೊತೆಗೆ ಹೆಚ್ಚಿನ ಸಮಯವನ್ನು ಕಳೆಯುವುದು. ತನ್ನ ವೈಯಕ್ತಿಕ ವಿಚಾರಗಳನ್ನು ಹೇಳಿಕೊಳ್ಳುವುದನ್ನು ಶುರುಮಾಡಿದ. ವಿಧುವಿಗೆ ಕೇಳಲು ಇರುಸು ಮುರುಸಾಗುತ್ತಿತ್ತು. ತನ್ನ ಮನೆಯ ಒಳಗೆ ಕರೆಯಲು ಹತ್ತು ಇಪ್ಪತ್ತು ಬಾರಿ ಯೋಚನೆ ಮಾಡಿ ಕರೆಯುವಂತಹ ಪರಿಸ್ಥಿತಿಯಲ್ಲಿ ಇದ್ದ ಅವನಿಗೆ ಮನೆಯ ಹತ್ತಿರ ಬರುತ್ತಿದ್ದ ಕುಶಾಲ್ ಅನ್ನು ಹೇಗೆ ಸಂಭಾಳಿಸುವುದು ಎಂಬ ಯೋಚನೆ.ಕುಶಾಲ್ ತನ್ನ ಪ್ರೀತಿಯ.....
No comments:
Post a Comment