ನನ್ನ ಹೆಸರು ಅದಿತಿ ಎಂದು ಪರಿಚಯ ಮಾಡಿಕೊಂಡಳು. ವಿಧುವಿಗೆ ಅವಳನ್ನು ನೋಡುತ್ತಿದ್ದರೆ ಮೊದಲೇ ಅದಿತಿ ಹತ್ತಿರ ಮಾತನಾಡಿಸಿದ್ದೇನೆ ಎನ್ನುವಂತೆ ಭಾಸವಾಗುತ್ತಿತ್ತು . ಅದಿತಿಯ ಕಣ್ಣನ್ನು ನೋಡುತ್ತಿದ್ದರೆ ಯಾವುದೋ ಜನುಮದ ನಂತು ಇರುವಂತೆ ಅನಿಸುತ್ತಿತ್ತು. ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಪ್ರಶಾಂತತೆ ಭಾಷೆಯ ಸಂವಹನ ಸಮಸ್ಯೆ ಇದ್ದರೂ ಕೂಡ ಏನೋ ಒಂದು ರೀತಿಯ ಆತ್ಮೀಯತೆಯ ಭಾವ. ಭಾಷೆಯ ಸಂವಹನದ ಸಮಸ್ಯೆ ಇದ್ದಿದ್ದರಿಂದ ಯಾವುದೇ ವಿಚಾರವಾಗಿ ವಿಧವನ್ನು ಕೇಳುವುದು ಅನಿವಾರ್ಯವಾಯಿತು. ಆದಿತ್ಯನ ತಂದೆ ತಾಯಿಯಾದ ಗಾಯತ್ರಿಯವರಿಗೆ ಅಲ್ಪಸ್ವಲ್ಪ ಹಿಂದಿ ಇಂಗ್ಲಿಷ್ ಬರುತ್ತಿದ್ದರಿಂದ ಸಂವಹನದ ಸಮಸ್ಯೆ ಅದಿತಿ ಕುಟುಂಬದವರಿಗೆ ಅಷ್ಟಾಗಿ ಕಾಡಲಿಲ್ಲ. ಆದಿತ್ಯನ ಕುಟುಂಬ ಏನನ್ನಾದರೂ ಕೇಳುವುದಿದ್ದರೆ ವಿಧುವನ್ನು ಕೇಳಬೇಕಾಗಿತ್ತು. ಸ್ಥಳೀಯರಾದ ಜಾನಕಿ ಅಮ್ಮನವರು ಹಾಗೂ ವಿಧುವಿನ ಸ್ನೇಹಿತನಾದ ಸಾಗರ್ ತಮ್ಮ ಕೆಲಸ ಮುಗಿದ ಮೇಲೆ ಸಂಜೆಯಾಗುತ್ತಲೇ ಮನೆಗೆ ಹೋಗುತ್ತಿದ್ದರು . ಜಾನಕಿ ಅಮ್ಮನವರಿಗೆ ಕನ್ನಡ ಬಿಟ್ಟರೆ ತಮಿಳು ಅಲ್ಪಸ್ವಲ್ಪ ಬರುತ್ತಿತ್ತು ಉಳಿದಂತೆ ಅವರಿಗೆ ಬೇರೆ ಭಾಷೆ ಬರುತ್ತಿರಲಿಲ್ಲ ಹಾಗಾಗಿ ವಿಧು ಇವರಿಬ್ಬರ ಸಂಭಾಷಣೆಯನ್ನು ಅನುವಾದ ಮಾಡಿ ಅವರಿಗೆ ಅವರ ಸಂಭಾಷಣೆಯನ್ನು ಇವರಿಗೆ ಅನುವಾದವನ್ನು ಮಾಡಬೇಕಾಗಿತ್ತು. ಹುಡುಗಿಯರೊಂದಿಗೆ ಮೊದಲಿನಿಂದಲೂ ಅಂತರ ಕಾಯ್ದುಕೊಂಡ ಬಂದ ವಿಧುವಿಗೆ ಹುಡುಗಿಯರ ಹತ್ತಿರ ಮಾತನಾಡುವುದಕ್ಕೂ ಸ್ವಲ್ಪ ಹಿಂಜರಿಕೆ, ಆದರೆ ಆದಿತ್ಯನ ತಂಗಿ ಅದಿತಿ ದಿಟ್ಟತನದ ಹುಡುಗಿ ಏನೇ ಹೇಳುವುದಿದ್ದರೆ ನೇರವಾಗಿ ಹೇಳುವ ಹುಡುಗಿ ಮುಗ್ಧ ಮನಸ್ಸಿನ ಹುಡುಗಿ ಅದಿತಿ ಅವಳ ಕಮಲದ ಕಣ್ಣುಗಳು ವಿಧುವನ್ನು ಸೆಳೆಯಲು ತುಂಬ ದಿನ ಬೇಕಾಗಿರಲಿಲ್ಲ ಕಾಡಿಗೆಯನ್ನು ಹಚ್ಚುತ್ತಿದ್ದ ಕಣ್ಣುಗಳು ಮುಕ್ತ ಮನಸ್ಸಿನ ಮಾತುಗಳು ನೇರನುಡಿಯ ಮಾತುಗಳು. ಅದಿತಿಯ ಕಣ್ಣೋಟ ವಿಧು ಅದಿತಿಯನ್ನು ಪ್ರೀತಿಸುವಂತೆ ಮಾಡಿತ್ತು. ವಿಧು ತನ್ನ ಅರಿವಿಲ್ಲದಂತೆ ಅದಿತಿಯನ್ನು ಪ್ರೀತಿಸಲು ತೊಡಗಿದ್ದನು. ದಿನ ಬೆಳಿಗ್ಗೆ ಎದ್ದ ಕೂಡಲೇ ಅದಿತಿ ಮುಖವನ್ನು ನೋಡುವುದು ವಿಧುವಿಗೆ ಸಂತೋಷವನ್ನು ತರಿಸುತ್ತಿತ್ತು. ಆಕೆಯ ಮುಗ್ಧ ಮುಖ ಆಕೆಯ ಬಗ್ಗೆ ಕಾಳಜಿ ಬರುವಂತೆ ಮಾಡಿತ್ತು .ಅವಳ ನಗು ಚಂದ್ರನು ಭೂಮಿಗೆ ಬೆಳದಿಂಗಳು ಸೂಸುವಂತೆ ಬೆಳದಿಂಗಳ ಕಿರಣಗಳಿಗೆ ಭೂಮಿ ತಂಪೆರೆಯುವ ರೀತಿ ಮನಸ್ಸಿಗೆ ಮುದವನ್ನು ನೀಡುತ್ತಿತ್ತು.
ಬದುಕಿನಲ್ಲಿ ಮೊದಲ ಬಾರಿ ಪ್ರೀತಿಯ ಸೆಲೆಯನ್ನು ಕಂಡ ವಿಧು ಪ್ರೀತಿಯಲ್ಲಿ ಬಿದ್ದ ನಂತರ ತನ್ನನ್ನು ತಾನೇ ಮರೆತವನಂತೆ ಇದ್ದನು. ಇದನ್ನೆಲ್ಲ ಗಮನಿಸುತ್ತಿದ್ದ ಜಾನಕಿ ಅಮ್ಮನವರು ವಿಧು ಹಾಗೂ ಅದಿತಿಯ ಮೇಲೆ ಅನುಮಾನ ಪಡಲು ಆರಂಭಿಸಿದರು. ಇಬ್ಬರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಜಾನಕಿ ಅಮ್ಮನವರು ವಿಧುವನ್ನು ನೇರವಾಗಿ ಕೇಳಿಯೇ ಬಿಟ್ಟರು. ನಿನ್ನನ್ನು ನೋಡಿದರೆ ಯಾಕೋ ಅದಿತಿಯನ್ನು ಇಷ್ಟಪಟ್ಟಂತೆ ಕಾಣುತ್ತಿದೆ ಎಂದರು . ಅದಕ್ಕೆ ಹಾಗೇನು ಇಲ್ಲ ಪರಸ್ಪರ ಚೆನ್ನಾಗಿ ಮಾತನಾಡಿದ ಮಾತ್ರಕ್ಕೆ ಹೇಗೆ ಪ್ರೀತಿಸಿದಂತೆ ಆಗುತ್ತದೆ ಎಂದು ಜಾನಕಿ ಅಮ್ಮನವರನ್ನು ಕೇಳಿದ. ಅಷ್ಟಕ್ಕೆ ಸುಮ್ಮನಾಗದ ಜಾನಕಿಮ್ಮನವರು ಅದಿತಿಯನ್ನು ನೀನು ಯಾರನ್ನಾದರೂ ಮದುವೆಯಾಗಬೇಕೆಂದು ನಿಶ್ಚಯ ಮಾಡಿದ್ದೀಯಾ ಎಂದು ಕೇಳಿಯೇ ಬಿಟ್ಟರು. ಅದಕ್ಕೆ ಅದಿತಿ ಇಲ್ಲ ನಾನು ಯಾರನ್ನು ಮದುವೆಯಾಗಬಾರದೆಂದು ನಿರ್ಧರಿಸಿದ್ದೇನೆ ಎಂದು ಹೇಳಿದಳು. ವಿಧು ಅದಿತಿ ಮಾತನಾಡಿದರೆ ಸಾಕು ಜಾನಕಿ ಅಮ್ಮನವರಿಗೆ ಅನುಮಾನದ ಭೂತ ಬಂದುಬಿಡುವುದು. ದಿನವೂ ಮನೆಯಿಂದ ಅಡಿಗೆಯನ್ನು ಮಾಡಿ ತರುತ್ತಿದ್ದ ಜಾನಕಿ ಅಮ್ಮನವರು ಅದಿತಿ ಕುಟುಂಬಕ್ಕೂ ಅಡಿಗೆಯನ್ನು ಮಾಡಿ ತರುತ್ತಿದ್ದರು. ಆದರೆ ಅಂದು ಅಡಿಗೆಯಲ್ಲಿ ಏನು ವ್ಯತ್ಯಾಸ ಕಂಡಂತೆ ಆಯ್ತು ವಿಧು ಜಾನಕಿ ಅಮ್ಮನವರಿಗೆ ಕೇಳಿದ ಅಡುಗೆ ರುಚಿಯಲ್ಲಿ ವ್ಯತ್ಯಾಸವಿದೆಯಲ್ಲ ಎಂದ ಅದಕ್ಕೆ ಅವರು ನಿನ್ನ ಹುಡುಗಿ ಮಾಡಿದ್ದು ಎಂದು ಹೇಳಿದರು. ಅದು ನನ್ನ ಹುಡುಗಿ ನನಗೆ ಸಿಗದವಳು ನಿಮಗೆ ಸಿಕ್ಕಿದ್ದಾಳೆ ಯಾರವಳು......
1 comment:
👌👏👏👏💐💐
Post a Comment