Sunday, September 20, 2020

ಪ್ರೇಮದ ಅನ್ವೇಷಣೆ ಭಾಗ-12


ಈ ಜಗತ್ತಿನಲ್ಲಿ ಪ್ರೀತಿ ಪ್ರೇಮ ಅಂತ ಏನು ಇಲ್ಲ ಯಾರೇ ಕೆಟ್ಟವರು ಆದರೂ ತಾಯಿ ಕೆಟ್ಟವಳು ಆಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಆದರೆ ವಿಧುವಿನ ತಾಯಿ ಈಗಾಗಲೇ ವಿಧುವಿನ ಹತ್ತಿರ ಮಾತುಬಿಟ್ಟು ಹಲವು ವರ್ಷಗಳೇ ಕಳೆದು ಹೋಗಿವೆ .ತಾಯಿ ಪ್ರೀತಿ ಎನ್ನುತ್ತಾರೆ ಆದರೆ ಅವನಿಗೆ ತಿಳುವಳಿಕೆ ಬುದ್ಧಿ ಬಂದಾಗಿನಿಂದಲೂ ತಾಯಿ ಪ್ರೀತಿ ಕಂಡಿಲ್ಲ ತಂದೆಯದು ಕೇಳುವುದೇ ಬೇಡ ಪ್ರತಿ ಬಾರಿ ತೀರಾ ಅವಶ್ಯಕವೆಂದು ಹಣ ಕೇಳುವಾಗ ದೊಡ್ಡ ಜಗಳವೇ ನಡೆದುಹೋಗುತ್ತಿತ್ತು. ಇನ್ನೂ ಹದಿಹರೆಯದ  ಪ್ರೀತಿ ತನ್ನ ಕಾಮದ ಬಾಹ್ಯ ಸೌಂದರ್ಯದ ಆಕರ್ಷಿತವಾಗುವ ವಿಚಾರವೇ ಪ್ರೀತಿ ಎಂದುಕೊಳ್ಳುವಂತೆ ಬದುಕು ತೋರಿಸಿ ಕೊಟ್ಟಿತ್ತು. ಅದೇನೆಂದರೆ ಅವನ ಜೀವನದಲ್ಲಿ ನಡೆದ ಒಂದು ಘಟನೆ, ಸಹಪಾಠಿಯಾದ ಹುಡುಗಿ ಕಾಲೇಜಿನಲ್ಲಿ ಹಾಗೂ ಸ್ಕೂಲ್ನಲ್ಲಿಯು ಹಲವಾರು ವಿಚಾರಗಳಲ್ಲಿ ಅವನಿಗೆ ಸಹಾಯ ಮಾಡುತ್ತಿದ್ದ ಸಹಪಾಠಿಯಾದ ಅಕ್ಷತಾ ಗೌಡ ಒಬ್ಬ ಶ್ರೀಮಂತ ಮನೆಯ ಹುಡುಗನನ್ನು ಪ್ರೀತಿಸಿದಳು. ಅಕ್ಷತ ಗೌಡ ಅವರ ಮನೆಯ ಶ್ರೀಮಂತಿಕೆಗೆ ಏನು ಕಡಿಮೆ ಇರಲಿಲ್ಲ ತಂದೆ-ತಾಯಿ ಇಬ್ಬರು ಸರ್ಕಾರಿ ನೌಕರಿಯಲ್ಲಿ ಉನ್ನತ ಸ್ಥಾನದಲ್ಲಿ ಇದ್ದವರು ಇಬ್ಬರಿಗೂ ಒಬ್ಬಳೇ ಮುದ್ದಿನ ಮಗಳು ಅಕ್ಷತಾ ಗೌಡ.
            ಸ್ನೇಹಿತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುತ್ತಿದ್ದ ಹುಡುಗಿ ಯಾವುದನ್ನು ವಿಚಾರ ಮಾಡಿ ಒಪ್ಪಿಕೊಳ್ಳುತ್ತಿದ್ದ ಹುಡುಗಿ ಅದ್ಯಾವ ಸಮಯದಲ್ಲಿ ಪ್ರೀತಿಯ ಬಲೆಯಲ್ಲಿ ಬಿದ್ದಳು ಎನ್ನುವುದನ್ನು ತಿಳಿಯುವುದರ ಒಳಗಾಗಿ ಆತ್ಮಹತ್ಯೆಗೆ ಶರಣಾದಳು.  ಅವರಿಬ್ಬರ ನಡುವೆ ಏನು ನಡೆದಿತ್ತು ಗೊತ್ತಿಲ್ಲ.  ಅವಳನ್ನು ಪ್ರೀತಿಸಿದ ಹುಡುಗ ಹೇಮಂತ್ ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡ ಮಾರನೇ ದಿನವೇ ಬೇರೆ ಹುಡುಗಿಯೊಂದಿಗೆ ಚೆಲ್ಲಾಟ ವನ್ನು ಆಡಿಕೊಂಡು ತುಂಬಾ ಬೆಲೆಬಾಳುವ ಬೈಕಿನಲ್ಲಿ ಹೋಗುತ್ತಿರುವುದನ್ನು ನೋಡಿ ವಿಧು ದಿಗ್ಭ್ರಮೆಗೆ ಒಳಗಾದ.  ಅವರ ವಿಚಾರವಾಗಿ ಕಾಲೇಜಿನ ಇನ್ನಿತರೆ ಸಹಪಾಠಿಗಳನ್ನು ಕೇಳಿದಾಗ ಅವರು ಉತ್ತರವನ್ನು ಕೇಳಿ ಆಶ್ಚರ್ಯಚಕಿತನಾಗಿ ನಿಂತ. ಸಹಪಾಠಿಗಳು, ಅವನಿಗೆ ಅಕ್ಷತ ಗೌಡ ಅಂತವರು ಹಲವಾರು ಜನರೇಂದು ತಿಳಿದು ಬೇಸರವಾಯಿತು. ಈ ಹುಡುಗಿ ತನ್ನ ಪ್ರೀತಿಗಾಗಿ ಪ್ರಾಣವನ್ನೇ ಬಿಟ್ಟಿದ್ದು ಇವನ್ನು ನೋಡಿದರೆ ಈ ರೀತಿ ಮಾಡಿ ಬಿಟ್ಟನಲ್ಲ.
             ಓ ಈ ಜಗತ್ತಿನಲ್ಲಿ ಪ್ರೀತಿ ಎಂಬುದು ಬರಿ ಆಕರ್ಷಣೀಯ ವಿಷಯವಷ್ಟೇ ಎಂಬ ತೀರ್ಮಾನಕ್ಕೆ ಬಂದಿದ್ದ .ಆದರೆ ಇಲ್ಲಿ ಎಲ್ಲಾ ಉಲ್ಟಾ ಹುಡುಗರು ಅಣ್ಣನು ಪ್ರೀತಿಗೆ ಸಪೋರ್ಟ್ ಮಾಡಿದ ಎಂದು ಬಂದು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗುತ್ತಾರೆ .ಇದು ಒಂದು ರೀತಿಯ ಸೋಜಿಗವೆನಿಸಿತು ಅಂತು-ಇಂತು ಚುನಾವಣೆಯನ್ನು ಮುಗಿಸಿದ ವಿಧು ಚುನಾವಣೆ ಮುಗಿದ ಮೇಲೆ ಮತ್ತೆ ರಾಜಕಾರಣಿಗಳು ತಕ್ಷಣಕ್ಕೆ ತಮ್ಮನ್ನು ತಿರುಗಿ ನೋಡಲ್ಲ ಎಂಬ ಅರಿವು ಅನುಭವದ ಮೂಲಕ ಬಂದಿತ್ತು .ಇಷ್ಟು ದಿನ ಹೇಗೋ ಮನೆಯಲ್ಲಿ ಇರುವುದು ತಪ್ಪಿಸಿಕೊಳ್ಳುತ್ತಿದ್ದ ಈಗ ಹೇಗೆ ತಪ್ಪಿಸಿಕೊಳ್ಳುವುದು ಎಂದು ಚಿಂತಿಸುತ್ತಿರಬೇಕಾದರೆ ಅವನ ಅದೃಷ್ಟವನ್ನುವಂತೆ, ಅವನ ಮನೆಯ ಅನತಿ ದೂರದಲ್ಲಿ ಒಂದು ಗ್ರಂಥಾಲಯದ ಉದ್ಘಾಟನೆ ಸುದ್ದಿ ಬಂದಿತು. ಪತ್ರಿಕೆ ಓದುವ ಗೀಳನ್ನು ಹಿಡಿಸಿಕೊಂಡಿದ್ದ ಅವನು ಗ್ರಂಥಾಲಯಕ್ಕೆ ಹೋಗಲು ಶುರು ಮಾಡಿದ. ದಿನ ಗ್ರಂಥಾಲಯಕ್ಕೆ ಹೋಗುತ್ತಿದ್ದ ಪತ್ರಿಕೆಯನ್ನು ಕೆಲವು ಗಂಟೆಗಳವರೆಗೆ ಓದುವುದು ಅವನ ಅಭ್ಯಾಸವಾಗಿತ್ತು .ಆನಂತರ ಏನು ಮಾಡುವುದು ಮನೆಗೆ ಹೋದರೆ ಬೈಯ್ಯುತ್ತಾರೆ. ಮನೆಯಲ್ಲಿ ನರಕಯಾತನೆ ಅನುಭವಿಸುವುದಕ್ಕಿಂತ ಗ್ರಂಥಾಲಯದಲ್ಲಿ ಸಮಯ ಕಳೆಯುವುದು ಲೇಸು ಎಂದುಕೊಂಡು ತಿಂಗಳಿಗೊಮ್ಮೆ ವಾರಕ್ಕೊಮ್ಮೆ ಬರುವ ಲೇಖನಗಳನ್ನು ಪುಸ್ತಕಗಳನ್ನು ಓದಲು ಶುರು ಮಾಡಿದ. ಕ್ರಮೇಣ ದೊಡ್ಡ ದೊಡ್ಡ ಪುಸ್ತಕಗಳನ್ನು ಕೇವಲ ಎರಡು-ಮೂರು ದಿನಗಳಲ್ಲಿ ಮುಗಿಸುವಷ್ಟು ಕಾದಂಬರಿಗಳನ್ನು ಮೂರರಿಂದ ಐದು ದಿನಗಳಲ್ಲಿ ಮುಗಿಸುವ ಸಂಕಲ್ಪದೊಂದಿಗೆ ತೆಗೆದುಕೊಂಡು ಅವುಗಳನ್ನು ಮುಗಿಸುತ್ತಿದ್ದ . ಓದಿನ ಹುಚ್ಚು ವಿಪರೀತವಾಯಿತು. ಅದು ಅವನನ್ನು ಜ್ಞಾನದ ಕಾಶಿ ಯನ್ನಾಗಿ ಮಾಡಿತು. ಒಂದು ದೇಶ ಸುತ್ತಬೇಕು ಇಲ್ಲ ಕೋಶ ಓದಬೇಕು ಎಂಬ ನಾಣ್ಣುಡಿಯನ್ನು ಕೇಳಿದ್ದ ವಿಧುವಿಗೆ.....

No comments: