ಕುಶಾಲ್ ತನ್ನ ಪ್ರೀತಿಯ ಸಮಸ್ಯೆಗಳನ್ನು ಹೇಳಿಕೊಳ್ಳಲು ಶುರುಮಾಡಿದ. ವಿಧುವಿಗೆ ಹದಿಹರೆಯದ ಪ್ರೀತಿಯ ಮೇಲೆ ನಂಬಿಕೆ ಇಲ್ಲದ ಕಾರಣ ಕುಶಾಲ್ ನ ಕಥೆಯನ್ನು ಕೇಳಲು ಮೊದಲು ನಿರಾಸಕ್ತಿ ತೋರಿದರು ಪ್ರೀತಿಸಿದ ಹುಡುಗಿಯ ಬಗ್ಗೆ ಕಣ್ಣೀರು ಹಾಕುತ್ತ ಹೇಳಿದಾಗ ಅಯ್ಯೋಪಾಪ ಕೇಳಬೇಕು ಅನಿಸಿತು. ಇದುವರೆಗೂ ಹುಡುಗರು ಹುಡುಗಿಯರಿಗೆ ಮೋಸ ಮಾಡುತ್ತಾರೆ ಎಂದು ಬಲವಾಗಿ ನಂಬಿದ್ದ ವಿಧುವಿಗೆ ಹುಡುಗಿಯರು ಹುಡುಗರಿಗೆ ಮೋಸ ಮಾಡುತ್ತಾರೆ ಎಂಬುದನ್ನು ಮನಗಂಡನು. ಹುಡುಗಿಯರು ಎಂದರೆ ಬರಿ ಒಳ್ಳೆಯವರು ಇರುತ್ತಾರೆ ಎಂದು ತಿಳಿದವನಿಗೆ ಮೊದಲ ಬಾರಿಗೆ ಕೆಟ್ಟವರು ಇರುತ್ತಾರೆ ಎಂಬ ಸತ್ಯದ ಅರಿವಾಯಿತು. ಒಬ್ಬ ನಿಜ ಸ್ನೇಹಿತನಾಗಿ ಅವನಿಗೆ ಸಮಾಧಾನ ಹೇಳುತ್ತಿದ್ದ. ರಾತ್ರಿ 2:00 3:00ರ ಸಮಯದಲ್ಲಿ ವಿಧುವಿಗೆ ಫೋನ್ ಮಾಡಿ ಅತ್ತಿದ್ದೂ ಉಂಟು. ಸ್ನೇಹಿತನ ನೋವನ್ನು ತನ್ನದೆಂದು ಭಾವಿಸಿದವನು ಪ್ರತಿಬಾರಿ ಸಮಾಧಾನ ಹೇಳುವುದು ಸಾಮಾನ್ಯವಾಗಿಬಿಟ್ಟಿತು. ರಾತ್ರಿ ಹೊತ್ತು ಮಾತನಾಡುತ್ತಿದ್ದ ವಿಧುವಿನ ಮೇಲೆ ಅವನ ತಂದೆ-ತಾಯಿ ಅನುಮಾನಿಸಿದ್ದು ಉಂಟು. ಅವರಿಂದ ಚುಚ್ಚು ಮಾತುಗಳನ್ನು ಕೇಳುತ್ತಿದ್ದ ಆದರೂ ಸ್ನೇಹಿತನ ಕಣ್ಣಿನಿಂದ ಬರುವ ನೀರನ್ನು ತಡೆಯುವ ಉದ್ದೇಶದಿಂದ ಆ ನೋವನ್ನು ಅನುಭವಿಸಿದನು. ನಿಧಾನವಾಗಿ ಅವರಿಬ್ಬರ ಸ್ನೇಹ ಬಲವಾಗುತ್ತ ಹೋಯಿತು.
ಕುಶಾಲ್ ಪ್ರೀತಿಸಿದ ಹುಡುಗಿಯ ಸಂಬಂಧವು ಮುರಿದುಬಿತ್ತು. ಆ ಸಂಬಂಧ ಮುರಿದು ಬಿದ್ದ ಕೆಲವೇ ದಿನಗಳಲ್ ಕುಶಾಲ್ ಬೇರೆ ಹುಡುಗಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾನೆ ಎಂದು ಬೇರೆಯವರಿಂದ ತಿಳಿದು ಆಶ್ಚರ್ಯವಾಯಿತು. ನೇರನುಡಿಯ ವಿಧು ಕುಶಾಲ್ ನನ್ನು ನೇರವಾಗಿಯೇ ಕೇಳಿಬಿಟ್ಟ. ನೀನು ಇತ್ತೀಚಿನ ದಿನಗಳಲ್ಲಿ ಯಾರನ್ನಾದರೂ ಪ್ರೀತಿಸುತ್ತಿದ್ದೀಯ ? ಬೇರೆಯವರಿಂದ ಮಾಹಿತಿ ಸಿಕ್ಕಿದೆ. ಅದು ನಿಜವೂ ಸುಳ್ಳೆಂದು ಹೇಳು ಎಂದ, ಕುಶಾಲ್ ಅದು ನಿಜವೆಂದ ವಿಧು ಅವಕ್ಕಾಗಿ ಬಿಟ್ಟ. ವಿಧು ಕುಶಾಲ್ ನಿನ್ನ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಸೃಷ್ಟಿಸಿ ಮಾತನಾಡುತ್ತಿದ್ದಾನೆ ಎಂದು ಅನ್ಯ ಸ್ನೇಹಿತರು ಹೇಳಿದಾಗ ನಂಬದವನು. ಈಗ ನಮ್ಮ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರೀತಿ ಎಂದರೆ ಅದೊಂದು ನಿರೀಕ್ಷೆಯಿಲ್ಲದ ಕಾಳಜಿ ,ಪರಸ್ಪರ ಗೌರವಯುತವಾಗಿ ನಡೆದುಕೊಳ್ಳುವುದು, ಪರಸ್ಪರ ಅರ್ಥಮಾಡಿಕೊಂಡು ಬದುಕನ್ನು ಪರಿಪೂರ್ಣ ಮಾಡಿಕೊಳ್ಳುವುದು ಎಂದು ನಂಬಿದ್ದ ವಿಧುಗೆ ಕುಶಾಲಿನ ನಡೆ ಇಷ್ಟವಾಗಲಿಲ್ಲ . ಮೊದಲಿನಿಂದಲೂ ಕುಶಾಲ್ ಮೇಲೆ ಬೇರೆ ಸ್ನೇಹಿತರ ಆರೋಪವಿದ್ದರೂ ನಂಬದ ವಿಧು ಕಣ್ಣಮುಂದಿನ ಸತ್ಯವನ್ನು ನಂಬಲೇಬೇಕಾದ ಸ್ಥಿತಿ. ಬಟ್ಟೆ ಬದಲಿಸುವ ರೀತಿ ಸುಲಭವಾಗಿ ಪ್ರೀತಿಯನ್ನು ಬದಲಾಯಿಸುತ್ತಿದ್ದಾನಲ್ಲ. ಇವನು ನಿಜವಾಗಿಯೂ ಪ್ರೀತಿಸಿದ್ದನ್ನ ಎಂಬ ಪ್ರಶ್ನೆ ? ಅದು ಪ್ರೀತಿ ಮುರಿದು ಬಿದ್ದ ಕೇವಲ ಒಂದು ತಿಂಗಳ ಒಳಗಾಗಿ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂದರೆ ಏನರ್ಥ ? ಇವನಿಗೂ ನನ್ನ 11ನೇ ತರಗತಿಯ ಸಹಪಾಠಿಯಾದ ಹುಡುಗಿಯನ್ನು ಪ್ರೀತಿಸಿ ಮೋಸ ಮಾಡಿದವನಿಗೂ ವ್ಯತ್ಯಾಸವಿಲ್ಲ. ಇವನದು ಏನಿದ್ದರೂ ದೈಹಿಕ ಆಕರ್ಷಣೆಯ ಪ್ರೀತಿ ಎಂಬುದು ಅರಿವಾಯಿತು. ಅವನಿಂದ ಅಂತರವನ್ನು ಕಾಯ್ದುಕೊಳ್ಳಲು ನಿಶ್ಚಯಿಸಿ ಇವನಿಂದ ದೂರಸರಿಯುವುದು ಲೇಸೆಂದು ನಿಧಾನವಾಗಿ ಅವನಿಂದ ದೂರ ಇರಲು ಪ್ರಯತ್ನಿಸಿದ. ಆದರೆ ಅದಾಗಲೇ ಅವರಿಬ್ಬರ ಸ್ನೇಹ ಗಾಢವಾಗಿತ್ತು. ಕುಶಾಲ್ ಅಷ್ಟು ಸುಲಭವಾಗಿ ವಿಧುವನ್ನು ಬಿಡಲು ಸಿದ್ಧ ಇರುವವನಂತೆ ಕಾಣುತ್ತಿರಲಿಲ್ಲ. ಏಕೆಂದರೆ ಅವನದು ಪಕ್ಕಾ ಲೆಕ್ಕಾಚಾರದ ಸಂಬಂಧ ಎನ್ನುವುದು ತಿಳಿಯಲು ತುಂಬಾ ಸಮಯ ಹಿಡಯಿತು. ಕುಶಾಲ್ ಮಾತನ್ನು ನಂಬುತ್ತಿದ್ದ ವಿಧುವನ್ನು ಕುಶಾಲ್ ಮಾತಿನ ಮೂಲಕ ಕಟ್ಟಿ ಹಾಕುತ್ತಿದ್ದ .ಕುಶಾಲ್ ನಾಯವಾದ ಮಾತಿನ ಹಿಂದಿರುವ ಲೆಕ್ಕಚಾರದ ಮೋಸವನ್ನು ಅರಿಯಲು ಯಾವಾಗಲೂ ವಿಫಲನಾಗುತ್ತಿದ ಏಕೆಂದರೆ ಅವನದು ನಿಷ್ಕಲ್ಮಶ ಸ್ನೇಹ....