ಭಾರತ ಹೆಸರೇ ಹೇಳುವಂತೆ ತನ್ನ ಇತಿಹಾಸದಲ್ಲಿ ವಿಶ್ವದ ಮಾರ್ಗದರ್ಶನದ ಭಾರವನ್ನು ತನ್ನ ಮೇಲೆ ಹಾಕಿಕೊಂಡು ವಿಶ್ವಕ್ಕೆ ಮಾರ್ಗದರ್ಶನ ಮಾಡಿದ ದೇಶ. ಆದರೆ ಇಂದು ತನ್ನತನದ ಉಳಿವಿಗಾಗಿ ಹೋರಾಟ ಮಾಡುವಂತಹ ಹಂತಕ್ಕೆ ಬಂದು ತಲುಪಿದೆ. ಅದಕ್ಕೆ ಕಾರಣ ಭಾರತ ತನ್ನ ಸಂಸ್ಕೃತಿ-ಪರಂಪರೆಯನ್ನು ಕಳೆದುಕೊಂಡಿದ್ದು ಎಂದರೆ ಅತಿಶಯೋಕ್ತಿಯೇನಲ್ಲ. ಅದರ ಪರಿಣಾಮವೇ ಇಂದು ತನ್ನ ಭೂಭಾಗವನ್ನು ಕಳೆದುಕೊಳ್ಳುತ್ತಾ ಕಿರಿದಾಗುತ್ತಾ ವಿಶ್ವದಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡು ವಿಶ್ವಕ್ಕೆ ಬೆಳಕಿನ ದೀವಟಿಗೆ ಹಿಡಿದ ದೇಶ ಇಂದು ತಾನೇ ಕತ್ತಲಲ್ಲಿ ಮುಳುಗಿರುವುದು.
ಭಾರತ ದೇಶವು ಮತ್ತೆ ಮೇಲೇಳಲು ತನ್ನ ಸ್ವಂತಿಕೆಯನ್ನು ಮತ್ತೆ ಪ್ರತಿಬಿಂಬಿಸಬೇಕು ಇಲ್ಲದಿದ್ದರೆ ಮಾರ್ಗದರ್ಶನ ಮಾಡಲು ಹೇಗೆ ಸಾಧ್ಯವಾದೀತು ? ಅದು ತನ್ನ ಸ್ವಂತಿಕೆಯನ್ನು ಕಳೆದುಕೊಂಡ ಫಲವೇ ಹಲವಾರು ಭೂಪ್ರದೇಶಗಳನ್ನು ಕಳೆದುಕೊಳ್ಳುತ್ತಾ ಕಿರಿದಾಗಿದ್ದು. ಹಲವಾರು ಶತಮಾನಗಳ ನಂತರ ಇಂದು ಅದು ತನ್ನ ಸ್ವಂತಿಕೆಯನ್ನು ಮತ್ತೆ ಜಾಗೃತಗೊಳಿಸಹೊರಟಿದೆ. ಅದರಿಂದ ವಿಚಲಿತಗೊಂಡ ಅನ್ಯ ದೇಶದಿಂದ ಬಂದು ನಮ್ಮ ದೇಶವನ್ನು ಆಳಿದವರು ಇಂದು ದೇಶಿಯ ಆಡಳಿತದ ವಿರುದ್ಧವಾದ ನಿಲುವನ್ನು ಬಹಿರಂಗವಾಗಿ ತೋರಿಸಿಕೊಳ್ಳುತ್ತಿರುವುದು.
ಭಾರತವನ್ನು ಆರ್ಯವ್ರತ ಎಂದು ಕರೆಯಲಾಗುತ್ತಿತ್ತು. ಆರ್ಯ ಎಂದರೆ ಜ್ಞಾನಿ ಎಂಬರ್ಥ ಬರುತ್ತದೆ. ಹಿಂದಿನ ದಿನಮಾನಗಳಲ್ಲಿ ಜ್ಞಾನಿಯನ್ನು ಆರ್ಯನೆoದು ಕರೆಯಲಾಗುತ್ತಿತು. ಆದರೆ ತಕ್ಕಮಿದಿತ ಇತಿಹಾಸಕಾರರು ಆರ್ಯ-ದ್ರಾವಿಡ ಎಂಬ ಅವರ ದೂರ ಆಲೋಚನೆಯ ( ದುರಾಲೋಚನೆಯ ) ಕಲ್ಪನೆಯನ್ನು ಕೊಟ್ಟು ( ಅವರ ಉದ್ದೇಶ ಸ್ಪಷ್ಟ ಭಾರತದಲ್ಲಿ ಒಗ್ಗಟ್ಟು ಇದ್ದರೆ ತಾವು ಭಾರತೀಯರನ್ನು ಆಳುವುದು ಕಷ್ಟವೆಂಬುದು ಅವರಿಗೆ ಗೊತ್ತು ) ಅದೇ ಸತ್ಯವೆಂದು ನಂಬಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವುದು. ಇಂತಹ ದುಷ್ಟರ ಕರಾಮತ್ತಿನ ಫಲವೇ ಇಂದು ನಮ್ಮ ಸೈನಿಕರು ದೇಶ ರಕ್ಷಣೆಯಲ್ಲಿ ಸಾವಿಗೀಡಾಗುತ್ತಿದ್ದರು. ಅದಕ್ಕೂ ನಮಗೂ ಸಂಬಂಧವಿಲ್ಲವೆಂಬಂತೆ ಬದುಕುತ್ತಿರುವ ಕಾಕಾಗಳು ( ಕಾ - Congress ಕಾ - Communist ) ಬುದ್ಧಿಜೀವಿಗಳು ಪ್ರಗತಿಪರರು ಎನಿಸಿಕೊಂಡವರು ಬಾಯಿಗೆ ಬಂದಂತೆ ಹರಟೆ ಹೊಡೆಯುತ್ತಾ ಬಾಯಿ ಚಪಲಕ್ಕೆ ದೇಶದ ಸೈನಿಕರ ಮನೋಸ್ಥೈರ್ಯವನ್ನು ಕುಗ್ಗಿಸುತ್ತಾ ಸುಖವಾಗಿ ನಮ್ಮ ದೇಶದಲ್ಲಿ ಬದುಕುತ್ತಿರುವುದು ಈ ದೇಶದ ದುರಂತ. ಈ ದೇಶಭ್ರಷ್ಟ ಜನರಿಂದ ಈಗಾಗಲೇ ನಾವು ಭಾರತದ ಹಲವಾರು ಪ್ರದೇಶಗಳನ್ನು ಕಳೆದುಕೊಂಡಿದ್ದೇವೆ. ಅವರು ನೇರವಾಗಿ ಅಲ್ಲದಿದ್ದರೂ ದೇಶ ವಿರೋಧಿಗಳ್ಗೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಸೃಷ್ಟಿಸುವುದರಲ್ಲಿ ನಿರತರಾಗಿರುತ್ತಾರೆ.
ಇನ್ನು ನಾವು ಕಾಲಕ್ರಮದಲ್ಲಿ ಕಳೆದುಕೊಂಡ ಭೂಪ್ರದೇಶಗಳು ಇಂದು ಹಲವಾರು ದೇಶಗಳಾಗಿ ನಮ್ಮ ದೇಶಕ್ಕೆ ಕಂಟಕವಾಗಿ ಕಾಡುತ್ತಿವೆ. ಆ ದೇಶಗಳಲ್ಲಿ ಈ ಪರಿಯ ಬದಲಾವಣೆ ಏಕಾಯಿತು ಎಂದು ವಿಮರ್ಶಿಸುತ್ತ ಹೋದರೆ ನಮಗೆ ತಿಳಿಯುವುದು ನಮ್ಮ ಸಂಸ್ಕೃತಿಯನ್ನು ಮರೆತು ಅನ್ಯರ ಕ್ರೌರ್ಯ ಪರಂಪರೆಯನ್ನು ರೂಢಿಸಿಕೊಂಡಿದ್ದರ ಫಲವಾಗಿ ಆ ದೇಶಗಳು ನೆಮ್ಮದಿಯಿಂದ ಇರಲು ಸಾಧ್ಯವಾಗಿಲ್ಲ. ಹೀಗೆ ಹಲವಾರು ದೇಶಗಳನ್ನು ನಾವು ಕಾಣಬಹುದು. ಭಾರತದ ಭೂ ಪ್ರದೇಶದಿಂದ ಉದಯಿಸಿದ ದೇಶಗಳು ಈ ಕೆಳಗಿನಂತಿವೆ ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಕಾಂಬೋಡಿಯಾ, ಶ್ರೀಲಂಕಾ ಟಿಬೆಟ್, ಥೈಲ್ಯಾಂಡ್, ವಿಯೆಟ್ನಾಮ್, ಮಯನ್ಮಾರ್ ಲಾವೊಸ್, ಭೂತಾನ್ ಮಾಲ್ಟ್ ಮಲ್ದವಿಸ್. ಹೀಗೆ ಹಲವಾರು ದೇಶಗಳಾಗಿ ಹಂತಹಂತವಾಗಿ ಭೂ ಪ್ರದೇಶವನ್ನು ಕಳೆದುಕೊಂಡಿತು ಭಾರತ. 1739 ರಲ್ಲಿ ಅಫ್ಘಾನಿಸ್ತಾನ ಬೇರ್ಪಟ್ಟಿತು. 1936 ರವರೆಗೆ ಮಯನ್ಮಾರ್ ಭಾರತದ ಅವಿಭಾಜ್ಯ ಅಂಗವೇ ಆಗಿತ್ತು. ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು.1948 ಫೆಬ್ರವರಿ ನಾಲ್ಕರಂದು ಶ್ರೀಲಂಕಾ ಬೇರೆ ದೇಶವಾಯಿತು. 1947 ರ ಆಗಸ್ಟ್ 14ರಂದು ಪಾಕಿಸ್ತಾನವೆಂಬ ಧರ್ಮಾಧಾರಿತ ದೇಶದ ಉಗಮವಾಯಿತು. ಪಶ್ಚಿಮ ಪಾಕಿಸ್ತಾನವು 1971 ರ ಬಾಂಗ್ಲಾದೇಶ ಲಿಬೇರೇಷನ್ ವಾರ್ ಇಂದ ಬಾಂಗ್ಲಾದೇಶ ಅಧಿಕೃತವಾಗಿ ಸ್ವಾತಂತ್ರ್ಯ ದೇಶವಾಯಿತು. ಹೀಗೆ ನಮ್ಮ ಭೂಭಾಗವು ಹಲವು ದೇಶಗಳಾಗಿ ಹರಿದುಹಂಚಿ ಹೋಯಿತು. ಅದರ ಮುಂದುವರೆದ ಭಾಗವೇ ಕಾಶ್ಮೀರದ ವಿಚಾರ, ಕಾಶ್ಮೀರ ಭಾರತದ ಆಯಕಟ್ಟಿನ ಪ್ರದೇಶ. 1947 ರ ಭಾರತ-ಪಾಕ್ ವಿಭಜನೆಯ ನಂತರ ಕಾಶ್ಮೀರದಲ್ಲಿನ ರಾಜ ಹರಿಸಿಂಗ್ ಭಾರತದ ಒಕ್ಕೂಟಕ್ಕೆ ಸೇರುವುದೂ ಅಥವಾ ಪಾಕಿಸ್ತಾನಕ್ಕೆ ಸೇರುವುದೂ ಎಂಬ ಜಿಜ್ಞಾಸೆ ಉಂಟಾಯಿತು. ಮೊದಲು ಸ್ವಾತಂತ್ರವಾಗಿ ಉಳಿಯಲು ನಿರ್ಧರಿಸಿದ ರಾಜ. ಪಾಕ್ ಆಕ್ರಮಣಕ್ಕೆ ಹೆದರಿ ಭಾರತದ ಒಕ್ಕೂಟದ ಒಳಗೆ ಸೇರಲು ಒಪ್ಪಿಗೆ ಪತ್ರವನ್ನು ಭಾರತ ಸರ್ಕಾರಕ್ಕೆ ಕಳಿಸಿದ. ಅಷ್ಟರಲ್ಲಾಗಲೇ ರಾಜ ಹರಿಸಿಂಗ್ ಸೈನ್ಯದಲ್ಲಿದ್ದ ಹೆಚ್ಚಿನ ಮುಸಲ್ಮಾನರು ಪಾಕಿಸ್ತಾನದ ಪರವಾಗಿ ನಿಂತು ಪಾಕಿಸ್ತಾನದ ಸೇನೆಯೊಂದಿಗೆ ಕೈಜೋಡಿಸಿದರು. ಆದರೆ ಅದಾಗಲೇ ಕಾಶ್ಮೀರವು ಭಾರತದ ಒಕ್ಕೂಟಕ್ಕೆ ಸೇರಿಯಾಗಿತ್ತು.ಆದರೂ ಪಾಕ್ ತನ್ನ ಸೇನೆಯನ್ನು ಕಾಶ್ಮೀರಕ್ಕೆ ನುಗ್ಗಿಸಿ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡು ತನ್ನದೆಂದು ಹೇಳಲಾರಂಭಿಸಿತ್ತು. ಅದನ್ನೇ ಇಂದು ನಾವು ಪಿಓಕೆ ಎಂದು ಕರೆಯುವುದು. ಭಾರತದ ಅಂದಿನ ದುರ್ಬಲ ನಾಯಕತ್ವ ಪಾಕ್ ಸೈನ್ಯವನ್ನು ಹಿಮ್ಮೆಟ್ಟಿಸಲು ವಿಫಲವಾಯಿತು. ಅದರಲ್ಲಿ ಗಾಂಧೀಜಿಯವರ ಕೊಡುಗೆಯೂ ಇದೆ ಎಂಬ ಶಂಕೆ, ಸಾರ್ವಜನಿಕ ಅಭಿಪ್ರಾಯ ವಲಯದಲ್ಲಿ ಇಂದಿಗೂ ಕೇಳಿಬರುತ್ತಿದೆ. ಅದೇ ಕಾರಣ ಹಾಗೂ ಧರ್ಮದ ಆಧಾರದ ಮೇಲೆ ದೇಶ ಒಡೆದಿದ್ದರು ಗಾಂಧೀಜಿ ಅವರ ಮುಸಲ್ಮಾನ ಪರವಾದ ಧೋರಣೆ ಅವರ ಸಾವಿಗೆ ಕಾರಣವಾಗಿದ್ದು ಎಂಬ ನಿಲುವನ್ನು ಇಂದಿಗೂ ಹಲವಾರು ಸಂಘಟನೆಗಳು ಹೇಳಿಕೊಂಡು ಬರುತ್ತಿವೆ. ಇದೆಲ್ಲ ಗೊತ್ತಾಗಬೇಕಾದರೆ ಗಾಂಧೀಜಿ ಅವರ ಸಾವಿನ ರಹಸ್ಯ ಹೊರಬರಬೇಕು ಆದರೆ ಅದು ಸಾಧ್ಯವಾಗಲಿಲ್ಲ.
ಇನ್ನು ನಮ್ಮ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು ಹೊಸ ರಾಷ್ಟ್ರವಾಗಿ ಹೊರಹೊಮ್ಮುವ ಸಮಯದಲ್ಲಿ ಸಿಗದ ಬಲಿಷ್ಠ ನಾಯಕತ್ವ ಸ್ವಾತಂತ್ರ್ಯ ಬಂದ ನಂತರವೂ ಕೂಡ ಹಲವಾರು ಭೂಪ್ರದೇಶಗಳನ್ನು ಕಳೆದುಕೊಳ್ಳಲು ಕಾರಣವಾಯಿತು. 1962 ರಲ್ಲಿ ಭಾರತದ ಬೆನ್ನಿಗೆ ಚೂರಿ ಇರಿಯುವಂತಹ ಕೆಲಸವನ್ನು ಕಮ್ಯುನಿಸ್ಟ್ ಚೀನಾ ಮಾಡಿತು. 1962 ರಲ್ಲಿ ಭಾರತದ ಮೇಲೆ ಯುದ್ಧ ಸಾರಿದ ಚೀನಾ ಹಲವಾರು ಭಾರತದ ಪ್ರದೇಶಗಳನ್ನು ವಶಪಡಿಸಿಕೊಂಡಿತು. ಅದು ಇಂದಿಗೂ ಕೂಡ ಚೀನಾ ವಶದಲ್ಲಿದೆ ಅದನ್ನೇ ನಾವು COK-1 ಎಂದು ಕರೆಯುತ್ತೇವೆ. ಮತ್ತೆ ಮುಂದುವರೆದ ಚೀನಾ ತನ್ನ ಸಿಲ್ಕ್ ರೋಡ್ ಯೋಜನೆಗೆ ಅಕ್ರಮವಾಗಿ ಪಾಕಿಸ್ತಾನ ಭಾರತದಿಂದ ವಶಪಡಿಸಿಕೊಂಡ ಜಾಗವನ್ನು 99 ವರ್ಷಗಳಿಗೆ ಲೀಸ್ ಗೆ ತೆಗೆದುಕೊಂಡಿದೆ, ಹೀಗೆ ಹಲವಾರು ಭೂ ಭಾಗಗಳನ್ನು ಕಳೆದುಕೊಳ್ಳುತ್ತ ಭಾರತ ಕ್ಷೀಣಿಸುತ್ತಿದೆ. ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವ ಮಂದಿ ಭಾರತದ ಅನ್ನ ತಿಂದು ದೇಶದ್ರೋಹಿಗಳಾದ ಕಮ್ಯುನಿಸ್ಟರನ್ನು ಆಲಂಗಿಸುತ್ತಿದ್ದಾರೆ. "ಇಷ್ಟೆಲ್ಲ ಆದ್ರೂ ನಾವು ಏನೂ ಮಾಡದೇ ಹೋದ್ರೆ ಇನ್ನೂ ಅದೆಸ್ಟೋ ಕಳಕೊಂಡು... ಕೊನೆಗೆ ಉಳಿದ್ದಿದು ಇಷ್ಟೇ ಅಂತ ಕೊರಗೋ ಪರಿಸ್ಗಿತಿ ಬೇಕಾ...?" ನೀವೇ ಯೋಚಿಸಿ, ದೇಶದ ಏಕತೆಗೆ ಕಾರ್ಯಪ್ರವೃತ್ತರಾಗಿ. ದೇಶದ ಅಖಂಡತೆ ಎತ್ತಿ ಹಿಡಿಯುವುದು ನಮ್ಮೆಲ್ಲರ ಕರ್ತವ್ಯವಾಗಲಿ. ಭಾರತಮಾತೆ ವಿಶ್ವವನ್ನು ಬೆಳಗಲಿ.
ಭಾರತದ ಈಗಿನ ಆಡಳಿತದ ನಕ್ಷೆ.