Friday, June 26, 2020

ಗ್ರಾಮ ಪಂಚಾಯಿತಿ ಹಂತದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲು ಇದು ಸಕಾಲ.

ಗ್ರಾಮ ಪಂಚಾಯಿತಿ ಹಂತದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲು ಇದು ಸಕಾಲ.


           ಭಾರತದ ಸಂವಿಧಾನ ಆಶಯವನ್ನು ಹಾಗೂ ಗಾಂಧೀಜಿಯವರ ಗ್ರಾಮ ಪರಿಕಲ್ಪನೆಯನ್ನು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತರಲು ಇದು ಸಕಾಲವಾಗಿದೆ. ಭಾರತದ ಸಂವಿಧಾನದ ಆರ್ಟಿಕಲ್ 40, ಆರ್ಟಿಕಲ್ 243ಎ ಗ್ರಾಮ ಪಂಚಾಯತಿಗಳ ಸ್ವಾವಲಂಬನೆಯ ಮಹತ್ವವನ್ನು ಸ್ಪಷ್ಟವಾಗಿ ಹೇಳುತ್ತದೆ.
(Article 40 of the constitution which enshrines one of the directive principles of the state policy lays down that the state shall take steps to organize village Panchayath and endow them such powers and authority as may be necessary to enable them to functions as units of self government)
(Article 243 A says can excise powers and perform such)
        ಕಳೆದ ತಿಂಗಳು 24/4/2020 ರಂದು ಪಂಚಾಯತ್ ರಾಜ್ ದಿನವನ್ನು ಆಚರಿಸಿದೆವು. ಪಂಚಾಯತ್ ರಾಜ್ ಪರಿಕಲ್ಪನೆ ಹುಟ್ಟಿದ್ದು 1957 ರಲ್ಲಿ. ಅಂದಿನ ಕೇಂದ್ರ ಸರ್ಕಾರವು ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿ ಅನುಭವವಿದ್ದ ಹಾಗೂ ಸಂಸದರಾಗಿದ್ದ ಬಲವಂತರಾಯ್ ಮೆಹ್ತಾ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. ಆ ಸಮಿತಿಯು ಮೂರು ಹಂತಗಳ ಚುನಾವಣೆ ವ್ಯವಸ್ಥೆಯ ಪ್ರಸ್ತಾವನೆಯನ್ನು ಮಾಡಿದ್ದು, ಮೊದಲನೇ ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಜಿಲ್ಲಾ ಪಂಚಾಯಿತಿ,ಎರಡನೇ ಹಂತದಲ್ಲಿ ( ಬ್ಲಾಕ್ ) ತಾಲೂಕ್ ಪಂಚಾಯಿತಿ,ಮೂರನೇ ಹಂತದಲ್ಲಿ ಗ್ರಾಮ ಪಂಚಾಯಿತಿ ಮಾಡಬೇಕೆಂದು ಶಿಫಾರಸು ಮಾಡಿತು. ಆನಂತರ ಹಲವಾರು ಸಮಿತಿಗಳು ಬಂದವು. ಶಾಂತ ನಾಮ್ ಸಮಿತಿ (1963), ಜನತಾ ಸರ್ಕಾರ ನೇಮಿಸಿದ ಅಶೋಕ ಮೆಹತಾ ಸಮಿತಿ (1977)ರಲ್ಲಿ ಜಿ.ವಿ.ಕೆ ರಾವ್ ಸಮಿತಿ (1985), ಎಲ್.ಎಂ. ಸಿಂಗ್ವಿ ಸಮಿತಿ (1986 ), ಹೀಗೆ ಹಲವಾರು ಸಮಿತಿಗಳ ಶಿಫಾರಸ್ಸಿನ ನಂತರ ಇಂದಿನ ಚುನಾವಣೆ ಹಾಗೂ ಆಡಳಿತ ವ್ಯವಸ್ಥೆಯನ್ನು ನಾವು ಗ್ರಾಮಪಂಚಾಯಿತಿಯಲ್ಲಿ ಕಾಣುವಂತಾಯಿತು. ಗ್ರಾಮಪಂಚಾಯಿತಿ ವ್ಯವಸ್ಥೆಯು ಗ್ರಾಮಗಳ ಸಬಲೀಕರಣ ದೃಷ್ಟಿಕೋನದಿಂದ ಹುಟ್ಟಿದ ವ್ಯವಸ್ಥೆ.ಗ್ರಾಮಗಳ ಅಭಿವೃದ್ಧಿ ಹಾಗೂ ಗ್ರಾಮಗಳು ಸ್ವಾವಲಂಬಿ ಪಥದತ್ತ ಸಾಗಬೇಕು ಎಂಬ ಆಶಯದಿಂದ ಗ್ರಾಮ ಪಂಚಾಯತ್ ಕಾನೂನಿನ ಮೂಲಕ ಗ್ರಾಮಪಂಚಾಯಿತಿಗಳಿಗೆ ಚಾಲನೆ ನೀಡಲಾಯಿತು.
        ಗ್ರಾಮ ಪಂಚಾಯಿತಿಯು ತನ್ನದೇ ಆದ ವ್ಯಾಪ್ತಿಯಲ್ಲಿ ಕೆಲಸವನ್ನು ಮಾಡಬೇಕಾಗುತ್ತದೆ. ಅದಕ್ಕೆ ತನ್ನದೇ ಆದ ಹಲವಾರು ಕರ್ತವ್ಯಗಳಿವೆ. ಗ್ರಾಮ ಪಂಚಾಯಿತಿಯು ಗ್ರಾಮ ಕಂದಾಯವನ್ನು ವಸೂಲಿ ಮಾಡುತ್ತದೆ.ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನ ಅದರ ಮಹತ್ವದ ಜವಾಬ್ದಾರಿ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರಾವರಿ ಯೋಜನೆ, ರಸ್ತೆಗಳು, ಚರಂಡಿ ವ್ಯವಸ್ಥೆ, ಶಾಲೆ ಕಟ್ಟಡಗಳ ಕಾಮಗಾರಿ ಮತ್ತು ಸಿ.ಪಿ.ರ್ ನ್ನು ನೋಡಿಕೊಳ್ಳುತ್ತದೆ. ಎಲ್ಲ ಗ್ರಾಮಮಟ್ಟದ ಜಾತಿಗಣತಿ, ಬೆಳೆಯ ಗಣತಿ, ಜಾನುವಾರಗಳ ಗಣತಿ ಜೊತೆಗೆ ಸ್ಥಳೀಯ ಮಟ್ಟದ ಗ್ರಾಮ ದಾಖಲಾತಿಗಳನ್ನು ಕ್ರೋಢೀಕರಿಸಿಕೊಳ್ಳುತ್ತದೆ. ಆ ಮಾಹಿತಿಯ ಆಧಾರದ ಮೇಲೆ ಅಲ್ಲಿನ ಅಭಿವೃದ್ಧಿಯ ರೂಪರೇಷೆಯನ್ನು ಸಿದ್ಧಪಡಿಸಿಕೊಂಡು ಉನ್ನತ ಹಂತಕ್ಕೆ ಹಣಕಾಸಿನ ನೆರವು ಕುರಿತು ಪತ್ರ ಬರೆಯುತ್ತದೆ. ಆದರೆ ಹಣಕಾಸನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಗ್ರಾಮಪಂಚಾಯಿತಿಗಳು ವಿಫಲವಾಗುತ್ತಿವೆ.
       ಗ್ರಾಮ ಪಂಚಾಯಿತಿ ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಗ್ರಾಮಾಭಿವೃದ್ಧಿ ಕಂಡಂತಹ ಹಲವಾರು ಗ್ರಾಮಗಳು ಇವೆ. ಉದಾಹರಣೆಗೆ ಹೇಳುವುದಾದರೆ ಗುಜರಾತ್ ಇಂದ 90 ಕಿಲೋಮೀಟರ್ ದೂರದಲ್ಲಿರುವ ಆಕೋದರ ಎಂಬ ಗ್ರಾಮವು ಕ್ಯಾಶ್ಲೆಸ್ ಗ್ರಾಮವೆಂದು ಪ್ರಸಿದ್ಧಿಪಡೆದಿದೆ. ಭಾರತದಲ್ಲಿ ಅತಿ ಸಣ್ಣ ವಯಸ್ಸಿನ ಹೆಣ್ಣು ಮಗಳು ಜಯಪುರದಿಂದ 60 ಕಿಲೋಮೀಟರ್ ದೂರದಲ್ಲಿರುವ ಸೋಡಾ ಎಂಬ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಆಕೆಯ ಹೆಸರು ಚಾವಿ ರಾಜ್ವತ್. ಇಂತಹ ಸಾಧನೆಗಳು ಉತ್ತರ ಭಾರತದ ಹಲವಾರು ಗ್ರಾಮಪಂಚಾಯಿತಿಗಳಿಗೆ ಸಾಧ್ಯವಾಗಿದೆ. ಆದರೆ ದಕ್ಷಿಣ ಭಾರತದ ಯಾವುದೇ ಗ್ರಾಮಪಂಚಾಯಿತಿಗಳು ಕ್ಯಾಶ್ಲೆಸ್ ಅಥವಾ ಹೆಣ್ಣುಮಗಳೊಬ್ಬಳ ಸ್ವಾತಂತ್ರ್ಯ ಆಯ್ಕೆ ಮಾಡುವಲ್ಲಿ ವಿಫಲವಾಗಿವೆ. ದಕ್ಷಿಣ ಭಾರತದ ಗ್ರಾಮ ಪಂಚಾಯಿತಿಗಳಲ್ಲಿ ಹೆಣ್ಣುಮಗಳೊಬ್ಬಳು ಆಯ್ಕೆಯಾಗಿದ್ದರೂ ಆಕೆ ನಾಮಕಾವಸ್ಥೆಯ ಅಧ್ಯಕ್ಷೆಯಾಗಿ ಮುಂದುವರೆಯುತ್ತಾಳೆ .ಆದರೆ ಆಡಳಿತವೆಲ್ಲವು ಗಂಡನದೇ ಆಗಿರುತ್ತದೆ .ಅದರಲ್ಲೂ ಕರ್ನಾಟಕದ ಚುನಾವಣೆ ವ್ಯವಸ್ಥೆಯು ಜಾತಿ ಕೇಂದ್ರೀಕೃತವಾಗಿರುವುದರಿಂದ ಒಳ್ಳೆಯ ಅಭಿವೃದ್ಧಿ ದೃಷ್ಟಿಕೋನದಿಂದ ಅಭ್ಯರ್ಥಿಯ ಆಯ್ಕೆಯಾಗುವುದು ಬಹಳ ಕಷ್ಟಸಾಧ್ಯ .ವಿದ್ಯಾವಂತರ ಕೊರತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎದ್ದು ಕಾಣುತ್ತದೆ.
        ಗ್ರಾಮ ಪಂಚಾಯಿತಿಯನ್ನು ಶಕ್ತಿಯುತವಾಗಿ ಪರಿವರ್ತಿಸಲು ಇದು ಸಕಾಲ. ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ಐದು ವರ್ಷಗಳು ತುಂಬುತ್ತ ಬಂದಿರುವ ಈ ಸಂದರ್ಭದಲ್ಲಿ ಕೋವಿಡ್ – 19 ಇರುವ ಕಾರಣ ಚುನಾವಣೆ ನಡೆಸುವುದು ಕಷ್ಟಸಾಧ್ಯವಾಗುತ್ತದೆ. ಗ್ರಾಮ ಪಂಚಾಯಿತಿಗೆ ರೋಸ್ಟರ್ ಪದ್ಧತಿಯ ಮುಖಾಂತರ ಆಯ್ಕೆ ಮಾಡುವ ಸ್ವಾತಂತ್ರ್ಯ ಸರ್ಕಾರಕ್ಕೆ ಇರುತ್ತದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸರ್ಕಾರವು ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಂಡು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಾಜ ಸೇವೆ ಮಾಡಿದವರನ್ನು ಗುರುತಿಸಿ ನೇಮಿಸಬಹುದು. ಹೀಗೆ ಮಾಡುವುದರಿಂದ ಹಣ ಇಲ್ಲದಿದ್ದರೂ ಸಾಮಾಜಿಕ ಕೆಲಸ ಮಾಡುವವರನ್ನು ಗುರುತಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ.ಇನ್ನು ಸಾಮಾಜಿಕ ನ್ಯಾಯ ಕಾಪಾಡಿಕೊಂಡು ರೋಸ್ಟರ್ ಪದ್ಧತಿಯಲ್ಲಿ ಆಯ್ಕೆ ಮಾಡುವುದರಿಂದ ಗೊಂದಲಗಳು ಆಗುವುದಿಲ್ಲ .ಇನ್ನು ಲಿಂಗ ತಾರತಮ್ಯಕ್ಕೆ ಅವಕಾಶ ಮಾಡಿಕೊಡದೆ 70:30 ಅನುಪಾತದಲ್ಲಿ ಲಿಂಗ ಸಮಾನತೆಯನ್ನು ಕಾಪಾಡುವುದರಿಂದ ಸರ್ಕಾರದ ಮೇಲಿನ ಸಾರ್ವಜನಿಕ ನಂಬಿಕೆ ಬಲವಾಗುತ್ತದೆ. 50% ಯುವಕರಿಗೆ ಅವಕಾಶ ಕೊಡುವುದರಿಂದ ಹಳ್ಳಿಗಳನ್ನು ಡಿಜಿಟಲೀಕರಣ ಮಾಡಲು ದಾರಿ ಮಾಡಿಕೊಟ್ಟಂತಾಗುತ್ತದೆ. ವಿದ್ಯಾವಂತ ಯುವಕರನ್ನು ಆಯ್ಕೆ ಮಾಡುವುದರಿಂದ ಹಳ್ಳಿಗಳಲ್ಲಿನ ಸಣ್ಣ ಮನಸ್ಥಿತಿಯ ಜಾತಿ ರಾಜಕಾರಣಕ್ಕೆ ಕೊಡಲಿ ಪೆಟ್ಟು ಕೊಟ್ಟಂತಾಗುತ್ತದೆ .ಇನ್ನು 30% ಮಹಿಳೆಯರಿಗೆ ಕೊಟ್ಟರೆ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದಂತೆ ಆಗುತ್ತದೆ. ಇನ್ನು 20% ಗ್ರಾಮಗಳಲ್ಲಿ ವಿಶೇಷ ಸಾಧನೆ ಮಾಡಿ ಸಾಮಾಜಿಕ ಬದಲಾವಣೆ ತಂದವರನ್ನು ಗುರುತಿಸಿ ಅವರನ್ನು ರೋಸ್ಟರ್ ಪದ್ಧತಿಯ ಮುಖಾಂತರ ಆಯ್ಕೆ ಮಾಡಿದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ.
         ಗ್ರಾಮಮಟ್ಟದಲ್ಲಿ ಹೊಸ ರಾಜಕೀಯ, ಅಭಿವೃದ್ಧಿಯ ಕೇಂದ್ರೀಕೃತ ರಾಜಕಾರಣಕ್ಕೆ ನಾಂದಿ ಹಾಡಿ ಹಳ್ಳಿಗಳಲ್ಲಿನ ಹಳೆಯ ಜಡ್ಡುಗಟ್ಟಿದ ಜಾತಿ ರಾಜಕೀಯ ವ್ಯವಸ್ಥೆಗೆ ಅಂತ್ಯ ಹಾಡಲು ಇದು ಸಕಾಲವಾಗಿದೆ. ಗಾಂಧೀಜಿಯವರ ರಾಮರಾಜ್ಯದ ಕಲ್ಪನೆಗೆ ಹಾಗೂ ಭಾರತದ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬದಲಾವಣೆ ತರಲು ಈ ರೋಸ್ಟರ್ ಪದ್ಧತಿ ಕಾರಣವಾಗಬಲ್ಲದು. ರೋಸ್ಟರ್ ಪದ್ಧತಿ ಆಯ್ಕೆಯು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ, ಹಳ್ಳಿಗಳಲ್ಲಿನ ಬದಲಾವಣೆಗೆ ನಾಂದಿ ಹಾಡುವುದು ಸಾಧ್ಯವಾಗಲಿದೆ.
          ಗ್ರಾಮಮಟ್ಟದಲ್ಲಿ ಹೊಸ ರಾಜಕೀಯ, ಅಭಿವೃದ್ಧಿಯ ಕೇಂದ್ರೀಕೃತ ರಾಜಕಾರಣಕ್ಕೆ ನಾಂದಿ ಹಾಡಿ ಹಳ್ಳಿಗಳಲ್ಲಿನ ಹಳೆಯ ಜಡ್ಡುಗಟ್ಟಿದ ಜಾತಿ ರಾಜಕೀಯ ವ್ಯವಸ್ಥೆಗೆ ಅಂತ್ಯ ಹಾಡಲು ಇದು ಸಕಾಲವಾಗಿದೆ. ಗಾಂಧೀಜಿಯವರ ರಾಮರಾಜ್ಯದ ಕಲ್ಪನೆಗೆ ಹಾಗೂ ಭಾರತದ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬದಲಾವಣೆ ತರಲು ಈ ರೋಸ್ಟರ್ ಪದ್ಧತಿ ಕಾರಣವಾಗಬಲ್ಲದು. ರೋಸ್ಟರ್ ಪದ್ಧತಿ ಆಯ್ಕೆಯು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ, ಹಳ್ಳಿಗಳಲ್ಲಿನ ಬದಲಾವಣೆಗೆ ನಾಂದಿ ಹಾಡುವುದು ಸಾಧ್ಯವಾಗಲಿದೆ.
          ಗ್ರಾಮಮಟ್ಟದಲ್ಲಿ ಹೊಸ ರಾಜಕೀಯ, ಅಭಿವೃದ್ಧಿಯ ಕೇಂದ್ರೀಕೃತ ರಾಜಕಾರಣಕ್ಕೆ ನಾಂದಿ ಹಾಡಿ ಹಳ್ಳಿಗಳಲ್ಲಿನ ಹಳೆಯ ಜಡ್ಡುಗಟ್ಟಿದ ಜಾತಿ ರಾಜಕೀಯ ವ್ಯವಸ್ಥೆಗೆ ಅಂತ್ಯ ಹಾಡಲು ಇದು ಸಕಾಲವಾಗಿದೆ. ಗಾಂಧೀಜಿಯವರ ರಾಮರಾಜ್ಯದ ಕಲ್ಪನೆಗೆ ಹಾಗೂ ಭಾರತದ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಬದಲಾವಣೆ ತರಲು ಈ ರೋಸ್ಟರ್ ಪದ್ಧತಿ ಕಾರಣವಾಗಬಲ್ಲದು. ರೋಸ್ಟರ್ ಪದ್ಧತಿ ಆಯ್ಕೆಯು ಸೂಕ್ತ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ, ಹಳ್ಳಿಗಳಲ್ಲಿನ ಬದಲಾವಣೆಗೆ ನಾಂದಿ ಹಾಡುವುದು ಸಾಧ್ಯವಾಗಲಿದೆ.