Sunday, June 28, 2020

ಪ್ರೇಮದ ಅನ್ವೇಷಣೆ. ಭಾಗ-4

      ಈಕೆಯ ಹೆಸರು ಹರ್ಷಿತ. ಎಂದು ಹೇಳುತ್ತಾ ಅವರ ಮಾತು ಮುಂದುವರೆಯಿತು. ಕೆಲವು ವರ್ಷಗಳಿಂದ ಪ್ರಯಾಣದಲ್ಲಿ ಮೌನವಾಗಿ ಪ್ರಯಾಣಿಸುತ್ತಿದ್ದ ,ಆದರೆ ಈ ಬಾರಿ ಮಾತನಾಡುವ ಕುಟುಂಬ ಸಿಕ್ಕಿದೆಯಲ್ಲಾ ಎಂದು ಮನದಲ್ಲೇ ಅಂದುಕೊಂಡ. ಅಷ್ಟರಲ್ಲೇ ಸತ್ಯವತಿಯವರು ನೀನು ಏನು ಕೆಲಸ ಮಾಡಿಕೊಂಡಿದ್ದೀಯ ಎಂದು ಕೇಳಿದರು ಉತ್ತರಿಸಬೇಕು ಅನ್ನುವಷ್ಟರಲ್ಲಿ ಸತ್ಯವತಿಯವರ ಯಜಮಾನರಾದ ಚಿದಾನಂದ ಅವರು ಏನು ಪ್ರಶ್ನೆ ಕೇಳುತ್ತೀಯಾ ! ಆ ಹುಡುಗನ ಕೈಯಲ್ಲಿ ಇರುವ ಪುಸ್ತಕವನ್ನು ನೋಡಿದರೆ ತಿಳಿಯುವುದಿಲ್ಲವೆ ಕಾಲೇಜು ವಿದ್ಯಾರ್ಥಿ ಎಂದು ಹೇಳಿದರು. ಇದನ್ನು ಕೇಳಿ ನಸುನಕ್ಕ ವಿಧು ಇಲ್ಲ ನಾನು ಕಾಲೇಜು ವಿದ್ಯಾರ್ಥಿಯಲ್ಲ ನನ್ನ ಕಾಲೇಜಿನ ದಿನಗಳು ಮುಗಿದು ಒಂದು ವರ್ಷವಾಯಿತು ಇದು ಬೇರೆ ಪುಸ್ತಕ ನನಗೆ ಅನ್ಯ ಪುಸ್ತಕಗಳನ್ನು ಓದುವ ಅಭ್ಯಾಸವಿರುವುದರಿಂದ ಪುಸ್ತಕವನ್ನು ಓದುತ್ತಿದ್ದೇನೆ. ಈ ಪುಸ್ತಕದ ಹೆಸರು " ಎಸ್ ವಿ ಕೆನ್ವಿನ್ " ಎಂದು ರಾಬಿನ್ ಶರ್ಮಾ ಅವರು ರಚಿತಾ ಪುಸ್ತಕಗಳನ್ನು ನಾನು ಬಿಡುವಿನ ಸಮಯದಲ್ಲಿ ಓದುತ್ತೇನೆ ಎಂದು ಹೇಳಿದ. 
            ಅಷ್ಟರಲ್ಲೇ ಸತ್ಯವತಿಯವರು ಮಧ್ಯದಲ್ಲಿ ಮತ್ತೊಂದು ಪ್ರಶ್ನೆಯನ್ನು ಎಸೆದರು. ಈ ಮೊದಲು ನಿನ್ನ ಹತ್ತಿರ ಇದ್ದ ಪುಸ್ತಕ ಯಾವುದು ಎಂದು ಕೇಳಿದರು. ಅದಕ್ಕೆ ವಿಧು ಭಾರತೀಯ ಕ್ಷಾತ್ರ ಪರಂಪರೆ ಎನ್ನುವ ಪುಸ್ತಕ. ಈ ಬಾರಿ ಎರಡು ಪುಸ್ತಕಗಳನ್ನು ತಂದಿದ್ದೇನೆ. ಈ ಮೊದಲು ನೀವು ನೋಡಿದ್ದು ಆ ಪುಸ್ತಕ. ನಾನು ಸ್ವಂತ ಉದ್ಯೋಗವನ್ನು ಮಾಡುತ್ತಿದ್ದೇನೆ ಎಂದ ಕೂಡಲೇ, ಹೌದು ಸ್ವಂತ ಉದ್ಯೋಗವೇ ಕೆಲವೊಮ್ಮೆ ಮೇಲು ಅನಿಸುತ್ತದೆ. ಆದರೆ ಮದುವೆಯಾದ ಮೇಲೆ ಜವಾಬ್ದಾರಿ ಬಂದರೆ ಕಷ್ಟವಾಗುತ್ತದೆ ಎಂದು ಹೇಳಿದರು.  
            ಮದುವೆಯು ವಿಧುವಿಗೆ ಆಸಕ್ತಿ ವಿಷಯ ಅಲ್ಲವಾದ್ದರಿಂದ ಅವರ ಮಾತಿಗೆ ಹೆಚ್ಚಿಗೆ ಗಮನ ಕೊಡದೆ , ಈ ರೀತಿ ಏನು ಇರುವುದಿಲ್ಲ ಅದು ಅವರು ದುಡಿಮೆಗೇ ಹಾಕುವ ಪರಿಶ್ರಮದ ಮೇಲೆ ಇರುತ್ತದೆ. ಎಂದು ಹೇಳಿ ತನ್ನ ಪುಸ್ತಕದ ಕಡೆ ಗಮನ ಹರಿಸತೊಡಗಿದ. ಪುಸ್ತಕದ ಕೆಲವು ಪುಟಗಳನ್ನು ತಿರುವಿ ಹಾಕುವುದರೊಳಗೆ ಆಗಿ ಸತ್ಯವತಿಯವರು ಮತ್ತೆ ಮಾತನಾಡಲು ಶುರು ಮಾಡಿದರು. ಇನ್ನೂ ಮುಂದುವರೆದು ಮಾತನಾಡಿಸುವ ಎಲ್ಲ ಲಕ್ಷಣಗಳನ್ನು ತಿಳಿದ ನಂತರ ಪುಸ್ತಕವನ್ನು ಮುಚ್ಚಿ ತನ್ನ ಬ್ಯಾಗಿನೊಳಗೆ ಇಟ್ಟ. ಸತ್ಯವತಿಯವರೇ ಮಾತು ಮುಂದುವರಿಸಿ ನಿನ್ನ ವಯಸ್ಸು ಎಷ್ಟು ಎಂದು ಕೇಳಿದರು. ವಿಧು ಮನಸ್ಸಿನಲ್ಲೇ ಇವರಿಗೆ ಏಕೆ ಈ ಉಸಾಬರಿ ಎಂದು ಅಂದುಕೊಂಡು ಹೇಳಿದ ಇವಾಗ ನನಗೆ 26 ಎಂದು, ಸತ್ಯವತಿಯವರು ಏನಪ್ಪಾ ಇನ್ನೂ ಮದುವೆಯಾಗಿಲ್ಲ ನೀನು ಎಂದು ಕೇಳಿದರು. ಅವರ ಮಾತಿಗೆ ಅವರ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ನಕ್ಕಳು, ವಿಧುವಿಗೆ ಮನಸ್ಸಿನಲ್ಲೇ ಕಸಿವಿಸಿಯಾಯಿತು. ಈ ಮಹಾತಾಯಿ ಏನು ತೀರಾ ಖಾಸಗಿ ವಿಷಯಗಳನ್ನು ಕೇಳುತ್ತಿದ್ದಾರೆ. ಇವರ ಹತ್ತಿರ ಮಾತನಾಡಿದ್ದೆ ತಪ್ಪಾಯ್ತು ಅನಿಸುತ್ತದೆ, ಎಂದುಕೊಳ್ಳುವಷ್ಟರಲ್ಲಿ ಆ ಮಾತೃ ಹೃದಯದ ತಾಯಿ ಮಾತನ್ನು ಮುಂದುವರೆಸುತ್ತಾ ನೋಡಪ್ಪ ನಿನ್ನದು ಮದುವೆಯಾಗುವ ವಯಸ್ಸು ಮೊದಲು ಮದುವೆಯಾಗು, ಬದುಕಿನಲ್ಲಿ ವಯಸ್ಸಿಗೆ ತಕ್ಕಹಾಗೆ ಏನು ಏನು ಮಾಡಬೇಕು ಎಲ್ಲವನ್ನು ಮಾಡಬೇಕು. ಈಗ ನನ್ನ ನನ್ನನ್ನೇ ನೋಡು ನನ್ನ ತಂದೆ ನಮಗೆ 18 ವಯಸ್ಸು ತುಂಬುವುದರೊಳಗೆ ಮದುವೆ ಮಾಡಿದರು. ಈಗ ನಾನು ಕೂಡ ನನ್ನ ಮಗನಿಗೆ 20 ವರ್ಷಕ್ಕೆ ಮದುವೆ ಮಾಡಿದ್ದೀನಿ, ನೋಡು ಈಕೆ ನನ್ನ ಸೊಸೆ ಹರ್ಷಿತಾ ಡಿಗ್ರಿ ಮುಗಿಸಿ ಈಗ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಳೆ. ಒಳ್ಳೆಯ ಕಡೆ ಕೆಲಸಕ್ಕೆ ಸೇರಿದ್ದಾನೆ .ಇಬ್ಬರೂ ಸುಖವಾಗಿ ಸಂಸಾರ ಮಾಡಿಕೊಂಡು ಹೋಗುತ್ತಿದ್ದಾರೆ. ಈಗ ನಾನು ನನ್ನ ಗಂಡ ಇಬ್ಬರೂ ಬೆಂಗಳೂರಿನಲ್ಲಿ ನನ್ನ ಮಗನ ಮನೆಯಲ್ಲಿದ್ದವೇ ನನ್ನ ಯಜಮಾನರು ಕೆಲಸಕ್ಕೆ ಹೋಗುತ್ತಾರೆ. ನಾನು ನನ್ನ ಮನೆಯ ಕೆಲಸವನ್ನೆಲ್ಲ ಮಾಡಿ ಎಲ್ಲರ ಯೋಗಕ್ಷೇಮವನ್ನು ವಿಚಾರಿಸಿ ಕೊಳ್ಳುತ್ತೇನೆ ಎಂದರು. ಅಯ್ಯೋ ನಾನು ಇವರನ್ನು ಮಾತನಾಡಿಸಿದ್ದೆ ತಪ್ಪಾಯ್ತು ಅನಿಸುತ್ತದೆ ಎಂದು ಮನದಲ್ಲೇ ಅಂದುಕೊಂಡ. ಅಷ್ಟರಲ್ಲೇ ಅವರ ಸೊಸೆ ಹರ್ಷಿತಾ......

Author : Rakesh Bhagiratha.

No comments: