ಪೂರ್ಣಚಂದ್ರ ತನ್ನ ಹುಟ್ಟೂರನ್ನು ತೊರೆದು ಓದಲು ಮೈಸೂರಿಗೆ ಹೊರಡುತ್ತಾನೆ. ಸಣ್ಣ ವಯಸ್ಸಿನಲ್ಲಿ ತನ್ನ ತಂದೆ ತಾಯಿಯನ್ನು ಕಳೆದುಕೊಂಡು ಚಿಕ್ಕಪ್ಪ ಚಿಕ್ಕಮ್ಮನ ಮತ್ತು ಅವನ ಅಜ್ಜನ ಆಶ್ರಯದಲ್ಲಿ ಬೆಳೆದ ಹುಡುಗ. ಅವನಿಗೆ ಪ್ರೇಮದ ಕೊರತೆ ಸಣ್ಣ ವಯಸ್ಸಿನಿಂದಲೂ ಕಾಡುತಿತ್ತು. ತನ್ನ ಬದುಕಿನ ಎಲ್ಲಾ ಘಟನಾವಳಿಗಳನ್ನು ಮೆಲಕು ಹಾಕುವುದರ ಒಳಗಾಗಿ ಮೈಸೂರು ನಿಲ್ದಾಣವು ಬಂದಿತ್ತು. ಮೈಸೂರನ್ನು ಸೇರಿದ ಪೂರ್ಣಚಂದ್ರ ತನ್ನ ಬದುಕಿನ ಹೊಸ ಭರವಸೆಯೊಂದಿಗೆ ಮೈಸೂರಿನಲ್ಲಿ ಇಳಿದ.
ಮೈಸೂರಿನಲ್ಲಿ ಇಳಿದ ನಂತರ ತನ್ನ ಸ್ನೇಹಿತನಿಗೆ ಕರೆ ಮಾಡಿ ತನ್ನ ಸ್ನೇಹಿತನ ಕೊಠಡಿಗೆ ಹೋದ. ಹೊಸ ವಾತಾವರಣ ಅವನನ್ನು ಉಲ್ಲಾಸಗೊಳಿಸಿತ್ತು. ಅರಮನೆಯ ನಗರಿ, ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ, ತನ್ನ ಸ್ನೇಹಿತನ ಜೊತೆ ಸಂಜೆ ವಾಯು ವಿಹಾರಕ್ಕೆ ಹೋಗಿ ಕಾಲೇಜಿನ ದೂರವನ್ನು ತಿಳಿದು ಬಂದ. ಮರುದಿನ ಬೆಳಿಗ್ಗೆ ಬೇಗನೆ ಎದ್ದವನೇ ಗಣಪತಿಗೆ ವಂದಿಸುತ್ತಾ ತನ ದಿನ ನಿತ್ಯದ ವ್ಯಾಯಾಮ ಹಾಗೂ ಯೋಗವನ್ನು ಮುಗಿಸಿ ಕಾಲೇಜಿಗೆ ಹೊರಡಲು ಸಿದ್ದನಾದ. ದ್ವಿತೀಯ ಪಿಯುಸಿ ಯನ್ನು ಉತ್ತಮ ಅಂಕಗಳೊಂದಿಗೆ ಮುಗಿಸಿದ ಪೂರ್ಣಚಂದ್ರ ತನ್ನ ಕಾಲೇಜಿನ ಮೊದಲನೇ ದಿನದ ಅನುಭವ ಅವನಿಗೆ ನಾನು ದೊಡ್ಡವನಾಗಿದ್ದೇನೆ ಎನ್ನುವ ಭಾವವನ್ನು ಮೂಡಿಸುತ್ತಿತ್ತು.
ಹೆಸರಿಗೆ ತಕ್ಕಂತೆ ಅವನದು ಪೂರ್ಣ ಪ್ರಮಾಣದ ನೈಜ ವ್ಯಕ್ತಿತ್ವ. ಅವನ ವ್ಯಕ್ತಿತ್ವದಿಂದಲೇ ಅವನಿಗೆ ಹಲವಾರು ಸಹಪಾಠಿಗಳು, ಸ್ನೇಹಿತರಾದರು. ಪರ ಊರಿಗೆ ಬಂದರು ಸ್ನೇಹಿತರ ವಿಷಯದಲ್ಲಿ ಕೊರತೆ ಇರಲಿಲ್ಲ ಎಂದಿನಂತೆ ಕಾಲೇಜಿನ ದಿನಗಳು ಅವನಿಗೆ ಖುಷಿಯನ್ನು ನೀಡುತ್ತಿದ್ದವು.
ಅಂದು ಅವನಿಗೆ ಕಣ್ಣ ಎದುರಿನಲ್ಲಿ ಯಾರೂ ಹೋದಂತಾಯಿತು ಹೌದು ಸುಂದರ ಕಮಲದಳಗಳ ದಂತಿರುವ ಆಕೆಯ ಕಣ್ಣು, ನೀಲ ಮೂಗು, ದಾಳಿಂಬೆ ಬಣ್ಣದ ತುಟಿಗಳು ಸುಂದರ ಚೆಲುವೆ. ಮೊದಲ ನೋಟದಲ್ಲಿ ಮನಸೋತ. ಈಕೆ ಯಾರು ಇರಬಹುದು ಎನ್ನುವಷ್ಟರಲ್ಲಿ ಕಣ್ಣಿಂದ ಮರೆಯಾಗಿ ಹೋಗಿದ್ದಳು.
ಮರುದಿನ ಕಾಲೇಜಿನ ಕೊಠಡಿಯಲ್ಲಿ ಯಾರೋ ಮೇ ಐ ಕಮಿಂನ್ ಎಂದು ಕೇಳಿದಂತಾಯ್ತು ಎಸ್ ಕಮಿಂನ್ ಅಂದರು ಉಪನ್ಯಾಸಕರು ಪೂರ್ಣಚಂದ್ರನಿಗೆ ಆಶ್ಚರ್ಯ. ಇವನು ಮೊದಲ ನೋಟದಲ್ಲಿ ಮನಸೋತ ಹುಡುಗಿ ಉಪನ್ಯಾಸಕರ ಒಪ್ಪಿಗೆಯ ಮೇರೆಗೆ ಒಳಬಂದು ಅಸಿನಳಾಗಿದ್ದಾಳೆ. ಉಪನ್ಯಾಸಕರು ಪರಿಚಯ ಕೇಳಿದರು ಅದಕ್ಕೆ ಆಕೆ ತನ್ನ ಹೆಸರು ಪ್ರಜ್ಞ ಇಂದು ಕಾಲೇಜಿಗೆ ಸೇರಿದ್ದೇನೆ ಎಂದಳು. ಪೂರ್ಣಚಂದ್ರ ಮತ್ತು ಪ್ರಜ್ಞ ದಿನ ಕಳೆದಂತೆ ಸ್ನೇಹಿತರಾದರು. ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆಯಿತು. ಪೂರ್ಣಚಂದ್ರ ಅವಳ ಗುಣ ವಿಶೇಷಗಳಿಂದ ಪ್ರಭಾವಿತನಾದ. ಅವನಿಗೆ ಅವಳ ಮೇಲೆ ಪ್ರೇಮಾಂಕರವಾಯಿತು.
ತನ್ನ ಪ್ರೀತಿಯನ್ನು ಒಂದು ದಿನ ಹೇಳಬೇಕೆಂದು ನಿರ್ಧರಿಸಿ ಅವಳಿಗೆ ಹೇಳಲು ಸಿದ್ದನಾದ. ಪ್ರೀತಿಯನ್ನು ಹೇಳಲು ದಿನವನ್ನು ಕೂಡ ನಿಶ್ಚಯ ಮಾಡಿದ.
ಪ್ರಜ್ಞಾ ಪೂರ್ಣ ಚಂದ್ರನಿಗೆ ಕರೆ ಮಾಡಿದಳು ಒಬ್ಬ ವಿಶೇಷ ವ್ಯಕ್ತಿಗೆ ಉಡುಗೊರೆ ಕೊಡುವುದಿದೆ ಯಾವುದನ್ನು ಉಡುಗೊರೆಯಾಗಿ ಕೊಡಬೇಕೆಂದು ತಿಳಿಯುತ್ತಿಲ್ಲ. ಅದನ್ನು ಆಯ್ಕೆ ಮಾಡಲು ನೀನೆ ಸೂಕ್ತವಾದ ವ್ಯಕ್ತಿ ನನ್ನ ಜೊತೆ ಬಾ ಉಡುಗೊರೆಯನ್ನು ತರಲು ಎಂದು ಹೇಳಿದಳು. ಅವನು ಅವಳು ಹೇಳಿದ ಸ್ಥಳಕ್ಕೆ ಕರೆದುಕೊಂಡು ಹೋದನು ಪ್ರಜ್ಞ ಪೂರ್ಣ ಚಂದ್ರನಿಗೆ ನಿನ್ನ ಹತ್ತಿರ ಏನು ಹೇಳಬೇಕೆಂದು ಬಹಳ ದಿನದಿಂದ ಅಂದುಕೊಳ್ಳುತ್ತಿದ್ದೆ. ಇಂದು ಆ ಸಮಯ ಕೂಡಿಬಂದಿದೆ ನಾನು ಒಂದು ಹುಡುಗನನ್ನು ಪ್ರೀತಿಸುತ್ತಿದ್ದೇನೆ ಅವನಿಗಾಗಿ ಈ ಉಡುಗೊರೆ ಎಂದಳು ಪೂರ್ಣಚಂದ್ರನ ಮನಸ್ಸು ನುಚ್ಚುನೂರಾಯಿತು ಆದರೂ ಅದನ್ನು ಅವಳ ಮುಂದೆ ತೋರಿಸಿಕೊಳ್ಳಲಿಲ್ಲ ಪ್ರಜ್ಞ ಪ್ರೀತಿಸಿದ ಹುಡುಗನಿಗೆ ಉತ್ತಮವಾದ ಹುಡುಗರೆಯನ್ನು ತೆಗೆದುಕೊಟ್ಟು ಭಾರವಾದ ಮನಸ್ಸಿನಿಂದ ಹೆಜ್ಜೆಗಳನ್ನು ಹಾಕಿದ. ತನ್ನ ಪ್ರೀತಿ ತನಗೆ ಸಿಗುವುದಿಲ್ಲವೆಂದು ಪ್ರಜ್ಞನನ್ನು ಮನಸ್ಸಿನಿಂದ ಹರಸಿದ ಮತ್ತೆ ಎಂದಿನಂತೆ ಅವರಿಬ್ಬರೂ ಕಾಲೇಜಿನಲ್ಲಿ ಭೇಟಿಯಾದರು. ಪೂರ್ಣಚಂದ್ರನಿಗೆ ಯಾವುದರಲ್ಲೂ ಆಸಕ್ತಿ ಇಲ್ಲದನ್ನು ಪ್ರಜ್ಞ ಗಮನಿಸಿದ್ದಳು. ಸೂಕ್ಷ್ಮ ಮನಸ್ಸಿನ ಅವಳಿಗೆ ಅವನ ಮನಸ್ಥಿತಿ ಅರ್ಥವಾಗಿತ್ತು. ಅಂದು ಪೂರ್ಣ ಚಂದ್ರನ ಹುಟ್ಟುಹಬ್ಬ ಕಾಲೇಜಿನ ಸಹಪಾಠಿಗಳೆಲ್ಲ ಅವನಿಗೆ ಹಾರೈಸಿದರು. ಪ್ರಜ್ಞಳ ಸುಳಿವಿಲ್ಲ ಸಂಜೆ ಕಾಲೇಜು ಬಿಡುವ ಸಮಯಕ್ಕೆ ಯಾರೋ ಕರೆದಂತಾಯಿತು ನೋಡಿದರೆ ಪ್ರಜ್ಞ ಪೂರ್ಣಚಂದ್ರನಿಗೆ ಹುಟ್ಟು ಹಬ್ಬದ ಉಡುಗೊರೆ ಕೊಟ್ಟಳು ಅದನ್ನು ಸ್ವೀಕರಿಸಿ ಧನ್ಯವಾದ ಹೇಳಿದ. ಹುಟ್ಟುಹಬ್ಬದ ಖುಷಿ ಮನಸ್ಸಿನಲ್ಲಿ ಇರಲಿಲ್ಲ. ಅವಳು ಕೊಟ್ಟ ಉಡೂಗರೆಯನ್ನು ಭಾರವಾದ ಮನಸ್ಸಿನಿಂದ ಬಿಚ್ಚಿ ನೋಡಿದ, ಹೌದು ಪ್ರಜ್ಞ ಪ್ರೀತಿಸಿದ ಹುಡುಗನಿಗೆ ಕೊಂಡ ಉಡುಗೊರೆ ಇದು. ಅಂದರೆ ಪ್ರಜ್ಞ ಪ್ರೀತಿಸಿದ್ದು ನನ್ನನ್ನೇ.
No comments:
Post a Comment