ವಿಜಯದಶಮಿ ತಾಯಿ ಚಾಮುಂಡೇಶ್ವರಿ ತನ್ನ ಕಾರ್ಯನಿಮಿತ್ತ ಲೋಕ ರಕ್ಷಣೆಗಾಗಿ ಉಗ್ರರೂಪವನ್ನು ತಾಳಿ ಒಂಬತ್ತು ದಿನಗಳ ಕಾಲ ನಿರಂತರ ಹೋರಾಟದ ಫಲವಾಗಿ ಮಹಿಷ ಎಂಬ ರಾಕ್ಷಸನ ಸಂಹಾರ ಮಾಡಿದ ದಿನ. ರಾಕ್ಷಸನ ಸಂಹಾರ ಮಾಡಿ ಯುಗಗಳೇ ಕಳೆದರೂ ನಮ್ಮ ಮನಸ್ಸಿನೊಳಗಿನ ರಾಕ್ಷಸನನ್ನು ಸಂಹಾರ ಮಾಡಲು ಮನುಜನಿಂದ ಸಾಧ್ಯವಾಗುತ್ತಿಲ್ಲ . ಒಂಬತ್ತು ದಿನಗಳಲ್ಲಿ ಒಂಬತ್ತು ರೂಪಗಳನ್ನು ತಾಳಿ ಪ್ರಕೃತಿಯ ಸಾಮ್ಯತೆಗೆ ಕೈಗನ್ನಡಿ ಹಿಡಿದು ಎಲ್ಲ ದುಷ್ಟಶಕ್ತಿಗಳ ಸಂಹಾರ ಮಾಡಿದ ದಿನವೇ ವಿಜಯದಶಮಿ. ಇಂತಹ ವಿಜಯದಶಮಿಯಂದು ಮನುಷ್ಯ ತನ್ನ ಮೇಲಿನ ವಿಜಯ ಸಾಧಿಸುವಲ್ಲಿ ವಿಫಲನಾಗುತ್ತಿದ್ದನೆ. ವಿಫಲವಾಗಲು ಮೂಲ ಕಾರಣ ಆತನ ಮನಸ್ಸು.
ಮನಸ್ಸು ಚಂಚಲತೆಯ ಮೂಲ ಮನಸ್ಸು ಹುಚ್ಚು ಕುದುರೆಯಂತೆ ಎಂಬ ಮಾತನ್ನು ಸರ್ವೇಸಾಮಾನ್ಯವಾಗಿ ಕೇಳಿರುತ್ತೀರಾ ಅದು ಸತ್ಯವೂ ಹೌದು. ಮನಸ್ಸಿನ ನಿಗ್ರಹವೇ ತಪಸ್ಸು ಎಂಬುವುದು ನಮ್ಮಋಷಿಮುನಿಗಳು ಕಂಡುಕೊಂಡ ಸತ್ಯ.ಮನಸ್ಸಿನ ನಿಗ್ರಹದಿಂದ ಹಲವಾರು ಅಗೋಚರ ವಿದ್ಯೆಗಳನ್ನು ಸಂಪಾದಿಸಿದ್ದರು ನಮ್ಮ ಪೂರ್ವಜರು. ಅದರಲ್ಲಿ ಪ್ರಮುಖವಾಗಿ ಹೇಳುವುದಾದರೆ ಇಂದ್ರಜಾಲ ಮಾಯಜಾಲ ಹಾಗೂ ಇನ್ನಿತರ ವಿದ್ಯೆಗಳು ಅಡಕವಾಗಿವೆ. ಒಂದು ಮಂತ್ರಸಿದ್ಧಿ ಆಗಬೇಕಾದರೂ ಮನಸ್ಸಿನ ನಿಗ್ರಹ ಬೇಕಾಗುತ್ತದೆ ಮನಸ್ಸಿನ ನಿಗ್ರಹವೆಂದರೆ ನಮ್ಮ ಚಿತ್ತವನ್ನು ಏಕಾಗ್ರಗೊಳಿಸಲು ಸಾಧ್ಯವಾಗಿಸುವುದು.
ಮನುಷ್ಯ ಯಾವುದರಲ್ಲಿ ಏಕಾಗ್ರನಾಗಿರುತ್ತಾನೆ ಅದರಲ್ಲಿ ಅವನು ಏನನ್ನಾದರೂ ಸಾಧಿಸಿ ಬಿಡುತ್ತಾನೆ. ಮನಸ್ಸೆಂಬುದು ಹುಟ್ಟಿನಿಂದಲೂ ಸಾಯುವವರೆಗೂ ತನ್ನ ಲಗಾಮಿಲ್ಲದ ಕುದುರೆಯಂತೆ ಓಡುತ್ತಿರುತ್ತದೆ. ಆಧ್ಯಾತ್ಮವಿರಲಿ ಅಥವಾ ಲೋಕರೂಢಿ ಇರಲಿ ಎರಡರಲ್ಲೂ ಮನಸ್ಸಿನ ಏಕಾಗ್ರತೆ ಬಹುಮುಖ್ಯ ಮನಸ್ಸೆಂಬ ಮರ್ಕಟದ ವಿಜಯ ಅಷ್ಟು ಸುಲಭವಲ್ಲ. ಅದೊಂದು ಸುದೀರ್ಘ ಪ್ರಕ್ರಿಯೆ ನಿರಂತರ ಏಕಾಗ್ರತೆಯ ಮೂಲ ಸೆಲೆ......... ಇನ್ನೂ ಮುಂದುವರೆದು ಬರೆಯಬೇಕೆಂದರೆ ಬರೆಯಲು ಸಾಧ್ಯವಾಗುತ್ತಿಲ್ಲ ಅದೇ ಚಂಚಲತೆ........ ನಡೆಯಬೇಕಿದೆ ಮನಸ್ಸೆಂಬ ಮರ್ಕಟದ ಮೇಲೆ ಅಂತರ್ಯುದ್ಧ ವಿಜಯ ಸಾಧಿಸುವವರೆಗೂ.....
No comments:
Post a Comment