Sunday, December 26, 2021

ಸಂಬಂಧಗಳನ್ನು ಉಳಿಸಿಕೊಳ್ಳಬೇಕೆ ?


            ಹೌದು ನಮಗೆ ಹಲವು ಸರಿ ಅನಿಸಿಬಿಡುತ್ತದೆ ತಾಳ್ಮೆಗೂ ಒಂದು ಮಿತಿ ಇದೆಯೆಂದು, ಆದರೂ ಇಂದಿನ ದಿನಗಳ ಕೃತಕತೆಯ ಮುಲಾಜಿಗೆ ಬಿದ್ದು ಬಿಡುತ್ತೇವೆ ಕೆಲವೊಮ್ಮೆ ಅನಿಸುವುದುಂಟು ಈ ಸಂಬಂಧ ನನಗೆ ಬೇಡ ಎಂದು. ಯೋಚಿಸುತ್ತಿದ್ದೀರಾ ಅಲ್ಲವೇ ? ಹೌದು ನಾನು ಹೇಳಹೊರಟಿರುವುದು ಸಂಬಂಧಗಳನ್ನು ಮುಲಾಜಿಲ್ಲದೆ ಮುರಿದುಕೊಳ್ಳುವ ಬಗ್ಗೆ ನಿಮಗೆ ಆಶ್ಚರ್ಯವಾಗಬಹುದು ಎಲ್ಲರೂ ಸಂಬಂಧಗಳನ್ನು ಉಳಿಸಿಕೊಳ್ಳುವ ಬಗ್ಗೆ ಹೇಳುತ್ತಿದ್ದರೆ ಈ ವ್ಯಕ್ತಿ ಮುರಿದು ಕೊಳ್ಳುವುದರ ಬಗ್ಗೆ ಹೇಳುತ್ತಿದ್ದಾನೆಂದು? ಹೌದು ನಿಮಗೆ ಸಮಸ್ಯೆಯನ್ನು ತಂದೊಡ್ಡುವ ಸಂಬಂಧಗಳನ್ನು ಮುರಿದುಕೊಳ್ಳುವುದು ಮನಸ್ಸಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
            ಸಂಬಂಧಗಳು ಆರಂಭವಾಗುವುದು ಅನಿವಾರ್ಯತೆ ಆಧಾರದ ಮೇಲೆ ಆನಂತರ ಅದರ ಬಾಳಿಕೆ ನಮ್ಮ ಗುಣ ನಡತೆಗಳು ಮೇಲೆ ನಿಲ್ಲುತ್ತದೆ. ಅದನ್ನು ಉಳಿಸಿಕೊಳ್ಳುವುದು ಬಿಡುವುದು ನಮಗೆ ಬಿಟ್ಟ ವಿಚಾರವಾಗಿರುತ್ತದೆ. ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಒಂದು ಮಾತು ಹೇಳುತ್ತಾರೆ ಯಾರ ಸಂಬಂಧವನ್ನು ಹಾಳು ಮಾಡಿಕೊಳ್ಳಬೇಡ ಮುಂದೊಂದು ದಿನ ಉಪಯೋಗಕ್ಕೆ ಬರುತ್ತದೆ ಎಂದು. ಅವರುಗಳು ಉಪಯೋಗಕ್ಕೆ ಬರುತ್ತಾರೆ ಎನ್ನುವುದಾದರೆ ಸಂಬಂಧಗಳಿಗೆ ಏನು ಅರ್ಥ ಕೊಟ್ಟಂತಾಗುತ್ತದೆ? ಉಪಯೋಗಿಸುವುದು ವಸ್ತುಗಳನ್ನು ವ್ಯಕ್ತಿಗಳನ್ನಲ್ಲ ಅಲ್ಲಿಗೆ ಅದು ಲಾಭ ನಷ್ಟದ ಲೆಕ್ಕಾಚಾರ ಸಂಬಂಧ ಎಂದಾಯಿತಲ್ಲವೇ?. ಅಲ್ಲಿಗೆ ಆ ಸಂಬಂಧದಲ್ಲಿ ಸ್ನೇಹಪೂರ್ವಕವಾಗಿ ನಿಮ್ಮಂತೆ ಮಾತನಾಡಿದರು ಕೊನೆಯದಾಗಿ  ಅವರಿಗೆ ಲಾಭ ವಿರುವಂತೆ ನಿಮ್ಮ ಸಂಬಂಧವನ್ನು ತಂದು  ನಿಲ್ಲಿಸುವವರು.
                 ಹೌದು ಇಂದಿನ ದಿನಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರವನ್ನು ನೋಡಿಯೇ ಸಂಬಂಧಗಳನ್ನು ಮಾಡುವುದುಂಟು ಅದು ಹುಡುಗ ಹುಡುಗಿ ಪ್ರೀತಿಯಿಂದ ಹಿಡಿದು ಸ್ನೇಹದ ಹೆಸರಿನಲ್ಲಿ ಮಾಡುವ ವ್ಯವಾರಿಕ ಸಂಬಂಧಗಳು ಇರಬಹುದು. ಯಾವುದೇ ಸಂಬಂಧ ವಾಗಲಿ ಅನಿವಾರ್ಯತೆ ಮುಗಿದ ಮೇಲೆ ನಮ್ಮನ್ನು ತೊರೆಯುತ್ತವೆ. ತನ್ನ ಕಾಮ ತೃಷೆಯನ್ನು ತೀರಿಸಿಕೊಳ್ಳಲು ಮಾಡುವ ಪ್ರೀತಿಯಿಂದ ಹಿಡಿದು  ಅವನಿಂದ ನನಗೆ ಏನಾದರೂ ಲಾಭವಾದೀತು ಎಂದು ಮಾಡಿಕೊಳ್ಳುವ ಸ್ನೇಹ ಎರಡು ದೀರ್ಘಕಾಲದಲ್ಲಿ ಉಳಿಯಲಾರವು ಅವುಗಳಿಂದ ಅವು ತನಗೆ ಬೇಕಾದ ಕಾರ್ಯಸಾಧನೆ ಮಾಡಿದನಂತರ ನಿಷ್ಕಲ್ಮಶವಾದ ಮನಸ್ಸಿಗೆ ಉಳಿಯುವುದು  ಮನೋಕ್ಲೇಶ ಮಾತ್ರ.
                 ಕೃತಕವಾಗುವತ್ತ ದಾಪುಗಾಲಿಡುತ್ತಿರುವ ಜಗತ್ತಿನಲ್ಲಿ ಕೃತಕ ಸಂಬಂಧಗಳಿಗೆ ಬೆಲೆ ಕೊಟ್ಟಷ್ಟು ನಿಮ್ಮ ಬೆಲೆ ಕಡಿಮೆಯಾಗುತ್ತ ಸಾಗುತ್ತದೆ. ಅನಿವಾರ್ಯತೆಗೆ ಮೂಡುವ ಸ್ನೇಹ ಮತ್ತು ಪ್ರೀತಿ ಶಾಶ್ವತವಲ್ಲ ಕಾರ್ಯ ಮುಗಿದ ಮೇಲೆ ಆ ಸಂಬಂಧಗಳ ಅವಧಿಯು ಮುಗಿದಿರುತ್ತದೆ. ಆ ಸ್ನೇಹ ಅಥವಾ ಪ್ರೀತಿಯಿಂದ ನಿಮ್ಮ ಮಾನಸಿಕ ಆರೋಗ್ಯ ಹದಗೆಡುತ್ತದೆ. ಮನಸ್ಸಿನ ಆರೋಗ್ಯವೇ ನಿಮ್ಮ ಬದುಕನ್ನು ಹಸನುಮಾಡುವುದು ಅಂತಹ ಲಾಭ ಲೆಕ್ಕಾಚಾರದ ಮೇಲೆ ನಿಲ್ಲುವ ಸಂಬಂಧಗಳನ್ನು ಕಡಿಯಲು ಹಿಂಜರಿಯಬೇಡಿ ಉತ್ತಮ ಸಂಬಂಧಗಳು ಬದುಕಿನ ಸಕಾರಾತ್ಮಕ ಚಿಂತನೆಯ ಭಾಗ.

2 comments:

Unknown said...

Brother sambandhagala bagge channagi vivarisiddiri

really awesome

Rakesh Bhagiratha said...

dhanyavad