Sunday, November 21, 2021

ಮತ್ತದೆ ಮೌನ

                     ಅಂದು ಬೆಳಿಗ್ಗೆ ಆಕಾಶ್ ಫೋನ್ ಮಾಡಿದ್ದ ನಿನ್ನ ಕಥೆಯನ್ನು ನನ್ನ ಸ್ನೇಹಿತೆ ಓದಿದ್ದಾಳೆ ಎಂದು ಫೋನ್ ರಿಸೀವ್ ಮಾಡಿದ ಅನ್ವಿಕ್ ಹೌದಾ ನಿರೀಕ್ಷೆಯಿರಲಿಲ್ಲ ನನ್ನ ಕಥೆಯನ್ನು ಯಾರಾದರೂ ಓದುತ್ತಾರೆ ಎಂದು ! ಯಾರು ಓದಿದ್ದು ? ನಾನು ಬರೆದ ಕಥೆಯನ್ನು ನಾನು ನಿನಗೆ ಕೊಟ್ಟಿದ್ದೇನೆ ಅಲ್ಲವೇ ? ಅದಕ್ಕೆ ಆಕಾಶ್ ನನಗೆ ಈ ಕಥೆ ಕಾದಂಬರಿಗಳನ್ನು ಓದಲು ಸಮಯವಿಲ್ಲ ನೀನು ಬರೆದುಕೊಟ್ಟ ಕಥೆಯನ್ನು ನಾನು ನನ್ನ ಸ್ನೇಹಿತೆಗೆ ಕೊಟ್ಟಿದ್ದೇನೆ ಎಂದು ಹೇಳಿದ್ದೇನು ನಿನಗೆ ಅದು ನೆನಪಿಲ್ಲವೇ ಎಂದು ಕೇಳಿದ. ಹೌದಲ್ಲವೇ ನನ್ನ ಕತೆಯನ್ನು ಓದಲು ಒಬ್ಬರು ಸಿಕ್ಕರು ಎಂಬ ಖುಷಿ ಹನ್ವಿಕ್ ಗೆ ಸರಿ ಹಾಗಿದ್ದರೆ ಅಭಿಪ್ರಾಯ ಹೇಳು ನಿಮ್ಮ ಸ್ನೇಹಿತೆ ಏನೆಂದು ಹೇಳಿದರೆಂದು, ಮತ್ತೆ ಅದನ್ನು ಸಂಕ್ಷಿಪ್ತವಾಗಿ ಹೇಳಲು ಸಾಧ್ಯವಾಗದ ಆಕಾಶ್ ಕಾಟಾಚಾರಕ್ಕೆ ಹೇಳಿದವನಂತೆ ಹೇಳಲಾರಂಭಿಸಿದ ಸಮರ್ಪಕವಾಗಿ ಹೇಳಲು ವಿಫಲನಾದ ಆಕಾಶ್ ಕೊನೆಹಂತದಲ್ಲಿ ನನ್ನ ಸ್ನೇಹಿತೆ ನಿನ್ನ ಇಮೇಲ್ ವಿಳಾಸವನ್ನು ಕೇಳುತ್ತಿದ್ದಾರೆ ಎಂದು ಇಮೇಲ್ ವಿಳಾಸವನ್ನು ಪಡೆದು ಅದನ್ನು ಆಕೆಯ ಸ್ನೇಹಿತೆಗೆ ಕಳಿಸಿದ.ಆನಂತರದಲ್ಲಿ ಆಕೆಯಿಂದ ಕಡೆಯಿಂದ ಒಂದು ಮೇಲ್ ಬಂದಿತು ತೆಗೆದು ನೋಡಿದ ಅನ್ವಿಕ್ ಹಲವಾರು ಪ್ರಶ್ನೆಗಳು ಕಾಡಲಾರಂಭಿಸಿದವು. ಇಂದಿನ ಫೋನ್ , ವಾಟ್ಸಪ್ , ಇನ್ಸ್ಟಾಗ್ರಾಮ್ , ಫೇಸ್ಬುಕ್ ಕಾಲದಲ್ಲಿ ಇವನು ಆಕೆಯ ಫೋನ್ ನಂಬರನ್ನು ಕೊಡಬಹುದಿತ್ತಲ್ಲ ಏಕೆ ಹೀಗೆ ಮಾಡಿದ್ದ ಎಂದು ತಿಳಿಯದಾಯಿತು ಅನ್ವಿಕ್ ಗೆ ಆಕೆಯ ಫೋನ್ ನಂಬರ್ ತಿಳಿಯುವುದು ಸೂಕ್ತವಲ್ಲ . ಕೊಡುವುದಿದ್ದರೆ ಸ್ನೇಹಿತನೇ ಕೊಡುತ್ತಿದ್ದ ಎಂದು ಭಾವಿಸಿ ಸುಮ್ಮನಾದ.ಯಾವ ಹುಡುಗಿಯರ ಸ್ನೇಹವಿಲ್ಲದ ವನು ಅನ್ವಿಕ್ ಆಕೆಯ ಫೋನ್ ನಂಬರ್ ಕೇಳಲು ಮುಜುಗರ, ಕೊನೆಗೆ ಒಂದು ದಿನ ಆಕೆಯೇ ಫೋನ್ ನಂಬರ್ ಕೇಳಿದರು. ತನ್ನ ಗೆಳೆಯನ ಸ್ನೇಹಿತೆಯ ಹತ್ತಿರ ಹೇಗೆ ಮಾತನಾಡಬೇಕೆಂದು ತಿಳಿಯದು ಮೇಲಾಗಿ ಅನ್ವಿಕ್ ಹೆಣ್ಣುಮಗಳೊಬ್ಬಳ ಸ್ನೇಹವು ಇದೇ ಮೊದಲು, ಮೊದಮೊದಲು ಮಾತನಾಡಲು ಹಿಂಜರಿದರು ಅವರ ಸ್ನೇಹದಲ್ಲಿ ದಿನಕಳೆದಂತೆ ನಿಧಾನವಾಗಿ ಮುಕ್ತವಾಗಿ ಮಾತನಾಡಲಾರಂಭಿಸಿದ.
                    ಆಕೆ ಮಾತಿನೊಂದಿಗೆ ಆಕೆಯ ಪರಿಚಯವಾಯಿತು. ಆಕೆಯ ಹೆಸರು ಅನನ್ಯ ವಿದ್ಯಾವಂತೆ, ಬುದ್ಧಿವಂತೆ ಎಲ್ಲದಕ್ಕಿಂತ ಹೆಚ್ಚಾಗಿ ಓದುವ ಹವ್ಯಾಸ ಉಳ್ಳವಳು ಅನ್ವಿಕ್ ಓದುವ ಹವ್ಯಾಸ ಇದ್ದಿದ್ದರಿಂದ ಇಬ್ಬರ ಅಭಿರುಚಿಗಳಿಗೆ ಸಾಮ್ಯತೆ ಇದ್ದಿದ್ದರಿಂದ ಸ್ನೇಹ ಸಾಂಗವಾಗಿ ಮುನ್ನಡೆಯಿತು, ಆಕೆಯು ಅವನ ಕಥೆಗಳಿಗೆ ಮತ್ತು ಸಣ್ಣಕಥೆಗಳನ್ನು ತಿದ್ದಿ ಸರಿಪಡಿಸುವ ಹುಮ್ಮಸ್ಸು ತನ್ನ ಕಥೆಗಳನ್ನು ಓದುವವರಿದ್ದಾರೆ ಎಂದು ನಿರಂತರವಾಗಿ ಏನನ್ನಾದರೂ ಬರೆಯುವ ಹವ್ಯಾಸ ಹೆಚ್ಚಾಯಿತು. ಅವರ ಮಾತುಗಳು ವೈಯಕ್ತಿಕ ಬದುಕಿನೆಡೆಗೆ ತಿರುಗಿತು. ಸ್ನೇಹವು ಮುಂದುವರೆಯಿತು ಸ್ನೇಹ ಗಟ್ಟಿಯಾಯಿತು ಎನ್ನುವಷ್ಟರಲ್ಲಿ ಆಕಾಶ್ ಗೆ ಇವರಿಬ್ಬರ ಸ್ನೇಹ ಸಹ್ಯವಾಗಲಿಲ್ಲ ಎನ್ನುವಂತೆ ಅನನ್ಯ ವಿಚಾರವಾಗಿ ಎಚ್ಚರಿಕೆಯಿಂದ ಇರುವಂತೆ ಹೇಳಿದ.ಆಕೆಯ ಸ್ನೇಹ ನಿನಗೆ ಸೂಕ್ತವಾದುದಲ್ಲ ಆಕೆ ಬದುಕಿನಲ್ಲಿ ಹಲವಾರು ಹುಡುಗರು ಬಂದು ಹೋಗಿದ್ದಾರೆ. ಅವರ ಕುಟುಂಬದಲ್ಲೂ ಅವರ ತಂದೆಗೆ ಉತ್ತಮ ಚಾರಿತ್ರವಿಲ್ಲ ಅವರ ಮನೆಯಲ್ಲಿ ನೀನು ಅಂದುಕೊಂಡಂತೆ ಇಲ್ಲ ಎಂದು ಹೇಳಿದ ಅದನ್ನು ನಂಬದ ಅನ್ವಿಕ್ ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು ಎನ್ನುವಂತೆ ಅನನ್ಯ ನ ಜೊತೆ ವಿಚಾರಗಳನ್ನು ಚರ್ಚಿಸಿದ. ಆದರೆ ಆಕೆಯ ಹೇಳಿಕೆಗಳು ಎಲ್ಲಾ ತದ್ವಿರುದ್ಧವಾಗಿದ್ದವು. ಕೊನೆಯಲ್ಲಿ ಆಕಾಶ್ ಹೇಳಿಕೆಗಳು ಸತ್ಯ ಎನ್ನುವಂತೆ ಕಾಣತೊಡಗಿದವು ಅವನ ಮಾತಿನಲ್ಲಿ ಅನನ್ಯ ನ ಕೃತಿಯಲ್ಲಿ ಸಾಮ್ಯತೆಗಳಿದ್ದವು. ತನ್ನ ತಂದೆಯ ಚಾರಿತ್ರದ ಬಗ್ಗೆ ಮಾತನಾಡಿದ ಆಕಾಶ್ ಬಗ್ಗೆ ಗೊತ್ತಿದ್ದರೂ ಅವಳು ಅವನೊಂದಿಗೆ ಅತಿಯಾದ ಆತ್ಮೀಯತೆಯಲ್ಲಿ ಇದ್ದಳು. ಆತ್ಮೀಯತೆಗೆ ಅಂಕೆ ಇಲ್ಲ ಸ್ನೇಹದ ಹೆಸರಲ್ಲಿ ಎಲ್ಲೆ ಮೀರಿದ ಸಂಬಂಧ.
                  ಆಕಾಶ್ ಮಾತಿನಲ್ಲಿ ಸತ್ಯವಿರುವುದು ಸ್ಪಷ್ಟವಾಗತೊಡಗಿತ್ತು ಜನರು ಮಾತಿನಲ್ಲಿ ಮತ್ತು ಕೃತಿಯಲ್ಲಿ ಭಿನ್ನವಾಗಿರುತ್ತಾರೆ ಎಂಬ ನಿದರ್ಶನ ಕಣ್ಣ ಮುಂದೆ ಒಂದು ಉದಾಹರಣೆಯಾಗಿ ಹೋಯಿತು. ಅನ್ವಿಕ್ ಗೆ ಮತ್ತದೇ ಪ್ರಶ್ನೆ ನಾನು ಮಾಡಿದ ಸ್ನೇಹ ಸರಿಯೋ-ತಪ್ಪೋ ಎಂದು. ಮಾತಿನಲ್ಲಿ ಮೋಸ ಮಾಡುವ ಜನರ ನಡುವೆ ಮತ್ತೆ ಮೋಸ ಹೋದನೆಂಬ ಬೇಸರ ಅವನ ಬದುಕಿನಲ್ಲಿ ಮತ್ತದೆ ಮೌನ.

No comments: