Saturday, July 10, 2021

ಬದಲಾದ ದೇವತೆ - ಭಾಗ-2

..ಒಟ್ಟಿನಲ್ಲಿ ರೌದ್ರ ರೂಪಿಣಿ, ಆಕೆಯ ತಂಗಿಯೂ ನಾಲಿಗೆಯನ್ನು ಹೊರಗೆ ಚಾಚಿದ ರುದ್ರ ರೂಪಿಣಿ. ಅವರು ರಾಕ್ಷಸರನ್ನು ಸಂಹರಿಸಿದವರು. ಮಾಂಸ ಪ್ರಿಯರು ಕೋಳಿ, ಕೋಣ, ಕುರಿಗಳನ್ನು ಬಲಿ ತೆಗೆದುಕೊಂಡು ಬರುತ್ತಿದ್ದವರು.
                 ಕಾಲಚಕ್ರದ ಸುಳಿಗೆ ಸಿಲುಕಿ ಎಲ್ಲರೂ ಬದಲಾಗಬೇಕು ಇಲ್ಲವಾದರೆ ಅಸ್ತಿತ್ವ ಉಳಿಯುವುದು ಕಷ್ಟವಾಗುತ್ತದೆ. ಬದಲಾದರೂ ದೇವತೆಗಳೇ ಬದಲಾದರೂ ಸಾಮಂತರ ಕುಲದೇವತೆಯಾದ ಮೇಲೆ ಆಕೆಗೆ ಕೋಣ, ಕುರಿ, ಕೋಳಿಗಳನ್ನು ಬಲಿಕೊಡುವುದು ನಿಲ್ಲಿಸಲಾಯಿತು. ಆಕೆ ನೆಲೆಸಿದ್ದ ಆಕೆಯ ಸ್ಥಾನದಿಂದ ಆಕೆಯ ಆಚರಣೆಗಳನ್ನು ದೂರ ಮಾಡಲಾಯಿತು. ಬೆಟ್ಟದ ತುದಿಯಲ್ಲಿ ಇದ್ದ ಆಚರಣೆಯನ್ನು ಬೆಟ್ಟದ ಪಾದದ ಕೆಳಗೆ ತರಲಾಯಿತು. ಆಕೆ ಬಲಿ ಪಡೆಯುತ್ತಿದ್ದ ದೇವತೆ ಎನ್ನಲು ಸಾಕ್ಷಿಯೆನ್ನುವಂತೆ ಇಂದಿಗೂ ಬೆಟ್ಟದ ತಪ್ಪಲಿನ ಕೆಳಗೆ ಆಕೆಗೆ ಬಲಿಯನ್ನು ಕೊಡಲಾಗುವುದು.
         ರಾಜಾಶ್ರಯದಲ್ಲಿ ಆಕೆ ಬದಲಾದಳು ಆಕೆಯನ್ನು ರೌದ್ರ ರೂಪದಿಂದ ಸಾತ್ವಿಕತೆ ದೇವತೆ ಎನ್ನುವಂತೆ ಚಿತ್ರಿಸಲಾಯಿತು. ಆಕೆಯು ತಾಯಿ , ಆಕೆ ಮಕ್ಕಳು  ಇಷ್ಟಪಟ್ಟಂತೆ ಇರಲು ಬಯಸಿದಳೆನೋ ಎನ್ನುವಂತೆ ಬದಲಾದಳು, ಒಟ್ಟಿನಲ್ಲಿ ಬದಲಾಗಿದ್ದಳು ಕೊನೆಗೆ ಬರೀ ಕೆಳವರ್ಗದ ತಾಯಿಯಾಗಿದ್ದ ಆಕೆ ಮೇಲ್ವರ್ಗಕ್ಕೆ ಹತ್ತಿರವಾದಳು. ಕೊನೆಗೆ ನಾಡದೇವತೆಯಾಗಿ ಹೋದಳು. ಇಂದು ಆಕೆಯದು ರಾಜಬೀದಿ ಮೆರವಣಿಗೆ ಏಕೆಂದರೆ ಬದಲಾದಳು, ಬದಲಾವಣೆ ಆಕೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದಿತು.
                 ನಾವು ಅಷ್ಟೇ ಬದಲಾಗಬೇಕು ನಮ್ಮ ಉನ್ನತಿಗಾಗಿ ಬದಲಾಗಬೇಕು ನಮ್ಮತನವನ್ನು ಉಳಿಸಿಕೊಂಡು ಧರ್ಮದ ಹಾದಿಯಲ್ಲಿ ನಡೆಯುತ್ತ ಬದಲಾಗಬೇಕು. ಬದಲಾವಣೆ ಜಗದ ನಿಯಮ ನಾವು ಬದಲಾದರೂ ಬದಲಾಗದಿದ್ದರೂ ಸಮಯ ಎಲ್ಲವನ್ನೂ ಬದಲು ಮಾಡುತ್ತದೆ. ಬದಲಾದರೆ ಉಳಿಯುತ್ತೇವೆ ಇಲ್ಲವಾದರೆ ಅಳಿಯುತ್ತೇವೆ .ಆಕೆ ನಮಗೆ ಕಲಿಸುತ್ತಿರುವ ಪಾಠ ಅದು. ಬದಲಾದಳು ತಾಯಿಯೇ ಬದಲಾದಳು ಇನ್ನು ನಾವು ಆಕೆಯ ಮಕ್ಕಳು, ಬದಲಾಗದಿದ್ದರೆ ಜಗದ ನಿಯಮದ ವಿರುದ್ದ ಅಳಿಯುತ್ತೇವೆ ಬದಲಾದರೆ ಉಳಿಯುತ್ತೇವೆ.