ಸೃಷ್ಟಿಯ ರಹಸ್ಯ ಏನೆಂದು ತಿಳಿಯುವ ಪ್ರಯತ್ನ ಮನುಷ್ಯ ಮಾಡುತ್ತಲೇ ಇರುತ್ತಾನೆ. ಆದರೆ ಅವನಿಗೆ ಅದು ನಿಲುಕದ ಹೋದ ವಿಷಯವಾಗಿಯೇ ಉಳಿದಿದೆ ಏಕೆಂದರೆ ಈ ಜಗತ್ತಿನಲ್ಲಿ ಯಾವುದೂ ಸ್ಥಿರವಲ್ಲ .ಸ್ಥಿರವಲ್ಲದಿದ್ದರೆ ಇಲ್ಲದಿದ್ದರೆ ಮತ್ತೇನು ಎಂದು ಪ್ರಶ್ನೆ ಏಳುವುದು ಸಹಜ.
ಆಕೆ ಒಬ್ಬಳು ದೇವತೆ ಲೋಕದೃಷ್ಟಿಯಲ್ಲಿ .ಆದರೆ ಆಕೆ ಸಾಮಾನ್ಯ ಹೆಣ್ಣು ಅಸಾಮಾನ್ಯ ವಿದ್ಯೆಯನ್ನು ಕರಗತ ಮಾಡಿಕೊಂಡ ಸಂಪನ್ನೆ. ತ್ರಿಲೋಕ ಅಂದರೆ ತ್ರಿಪುರ ಸುಂದರಿಯ ಅಕ್ಕ. ತ್ರಿ ಎಂದರೆ ಮೂರು ಪುರ ಎಂದರೆ ಊರು ಆಕೆ ತ್ರಿಪುರ ಸುಂದರಿ ಅಂದರೆ ಮೂರು ಊರು ಅಥವಾ ಲೋಕದ ಸುಂದರಿ .ಈಕೆ ಹುಟ್ಟಿಗೆ ಕಾರಣ, ಅಕ್ಕ ಮಾಡಲಾಗದ್ದನ್ನು ತಂಗಿ ಮಾಡಲು ಹುಟ್ಟಿದ್ದಳು. ಇನ್ನು ಅಕ್ಕ ರಾಕ್ಷಸ ಕುಲವನ್ನೇ ನಾಶಮಾಡಲು ಹುಟ್ಟಿ ಬಂದಿದ್ದವಳು.
ರಾಕ್ಷಸರ ಜೊತೆ ಕಾದಾಡಬೇಕಾದರೂ ಅಪರಿಮಿತ ಶಕ್ತಿ ಬೇಕಾಗುತ್ತದೆ. ಅಂತಹ ಶಕ್ತಿ ಸಂಪನ್ನೆ ಯಾಗುವುದು ಸುಲಭವಲ್ಲ ಅನುಭವ ಬೇಕಾಗುತ್ತದೆ, ಅನುಭವ ಪಡೆಯಬೇಕಾದದ್ದು ಕಾರ್ಯಗಳಿಂದ ರಕ್ತವನ್ನು ಚೆಲ್ಲಾಡಲು ಮೊದಲು ಸಣ್ಣಪುಟ್ಟ ಪ್ರಾಣಿಗಳ ವಧೆ ಮಾಡುತ್ತಾ ಅನುಭವ ಪಡೆಯಬೇಕು ಅದಕ್ಕೆ ಆಕೆ ಆಯ್ಕೆ ಮಾಡಿಕೊಂಡಿದ್ದು ಕೋಳಿ-ಕುರಿ ಕೋಣಗಳನ್ನು. ಅದನ್ನು ಕಡಿಯುತ್ತಾ ಕಡಿಯುತ್ತಾ ರಾಕ್ಷಸರ ವಧೆಗೆ ಸಿದ್ಧವಾದಳು.
ಅವನೊ ಕೇಳಿದ ತಕ್ಷಣ ವರವನ್ನು ಕೊಡುವ ಶಿವನಿಂದ ವರಪಡೆದು ಶಕ್ತಿ ಸಂಪಾದಿಸಿಕೊಂಡಿದ್ದ ರಾಕ್ಷಸ. ಹೆಣ್ಣಿನ ಹೊರತಾಗಿ ಯಾರಿಂದಲೂ ಸಾವು ಬರಬಾರದು ಎಂದು ಬಯಸಿದ್ದ ವ್ಯಕ್ತಿ ಸಾಮಾನ್ಯ ಹೆಣ್ಣು ಏನು ಮಾಡಬಲ್ಲಳು ಎಂಬ ಬಲವಾದ ನಂಬಿಕೆ .ಅದಕ್ಕೆ ನನ್ನ ಸಾವು ಅಷ್ಟು ಸುಲಭವಲ್ಲ ಹೆಣ್ಣುನನ್ನು ಮಣಿಸುವದವನಷ್ಟು ಶಕ್ತಿಹೀನ ನಾನಲ್ಲ ಎಂಬ ಭ್ರಮೆ .ಇನ್ನು ಆತನ ತಮ್ಮನೋ ಅವನು ರಕ್ತದ ಕಣಕಣದಲ್ಲೂ ರಾಕ್ಷಸರನ್ನು ಸೃಷ್ಟಿ ಮಾಡುವ ವರಪಡೆದ ಬಲಶಾಲಿ .ಅಣ್ಣ ತಮ್ಮ ಇಬ್ಬರೂ ಶಿವಭಕ್ತರು, ಅವರ ನಿತ್ಯಪೂಜೆ ಏನಿದ್ದರೂ ಮಹಾ ಶಕ್ತಿಶಾಲಿಯಾದ ಮಹಾಬಲನಿಗೆ.
ಆಕೆಯನ್ನು ರೌದ್ರ ರೂಪಿಣಿಯಾಗಿ ಬೆಳೆಸಲಾಯಿತು ಏಕೆಂದರೆ ಅವಳು ಹೋರಾಡಬೇಕಾಗಿತ್ತು. ಅಸುರ ಸಂಹಾರವೇ ಆಕೆಯ ಜನ್ಮಕ್ಕೆ ಕಾರಣವೆಂಬ ನಿರೀಕ್ಷೆಯಿತ್ತು .ರಾಕ್ಷಸರನ್ನು ಕೊಲ್ಲಲೆಂದೇ ಹುಟ್ಟಿದವಳು ಎಂಬಂತೆ ಅಗೋಚರ ವಿದ್ಯೆಗಳನ್ನು ಕಲಿಸಲಾಯಿತು. ಆಕೆಯ ವೇಷಭೂಷಣವೇ ರುದ್ರಭಯಂಕರ ಹಣೆಯಲ್ಲಿ ದೊಡ್ಡದಾದ ಕುಂಕುಮ ಮುಡಿ ಕಟ್ಟದ ಜಡೆ ಕಣ್ಣಲ್ಲಿ ಕಾಂತಿಯುತವಾದ ಹೊಳಪು, ಆಕೆಗೆ ಅಷ್ಟ ವಿದ್ಯೆಯನ್ನು ಕಳಿಸಲಾಯಿತು. ಅಷ್ಟ ಕೈಗಳಲ್ಲಿ ಅಷ್ಟ ಆಯುಧಗಳು ಒಂದು ಕೈಯಲ್ಲಿ ಹಾವುನ್ನು ಹಿಡಿದಿದ್ದರೆ ಮತ್ತೊಂದು ಕೈಯಲ್ಲಿ ಡಮರುಗ ಮಗದೊಂದು ಕೈಯಲ್ಲಿ ಬೆಂಕಿ ಜ್ವಾಲೆಯಿಂದ ಪ್ರಜ್ವಲಿಸುವ ಪಾತ್ರೆ ಮಗದೊಂದು ಕೈಯಲ್ಲಿ ರುಂಡಗಳನ್ನು ಚೆಂಡಾಡುವ ಕತ್ತಿ.....
2 comments:
Waiting for part 2 anna
published
Post a Comment