ಬಹಳ ದಿನಗಳೇ ಆಯಿತು. ಏನನ್ನು ಬರೆಯಲು ಸಾಧ್ಯವಾಗಲಿಲ್ಲವಲ್ಲ ಎಂದು ಯೋಚಿಸಲು ಶುರು ಮಾಡಿದೆ. ಹೌದಲ್ಲವೇ ಬದುಕಿನ ಜಂಜಾಟದಲ್ಲಿ ನಾವು ನಮ್ಮತನವನ್ನೇ ಕಳೆದುಕೊಳ್ಳುತ್ತೇವಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೊರಟಾಗ ಸಿಕ್ಕಿದ್ದು..... ಹಲವಾರು ಮಜಲುಗಳ ಉತ್ತರ ಬದುಕು ಹಲವಾರು ತಿರುವುಗಳನ್ನು ಪಡೆದುಕೊಂಡು ಬಿಟ್ಟಿರುತ್ತದೆ. ಅದು ಕೂಡ ನಮ್ಮ ಗಮನಕ್ಕೆ ಬಾರದೆ. ಓದಬೇಕೆಂದರೆ ದಿನ ಗಟ್ಟಲೆ ಕೂತು ಓದುವ ಬರೆಯಬೇಕೆಂದರೆ ಗಂಟಗಟ್ಟಲೆ ಕುತ್ತು ಬರೆಯುತ್ತಿದ್ದ ವ್ಯಕ್ತಿಗೆ ಇಂದು ನಾಲ್ಕು ಸಾಲುಗಳನ್ನು ಬರೆಯಲು ಆಗುತ್ತಿಲ್ಲ. ದಿನಗಟ್ಟಲೆ ಇರಲಿ ಕೆಲವು ನಿಮಿಷಗಳವರೆಗೆ ನಿರಂತರವಾಗಿ ಕೂತು ಓದಲು ಸಾಧ್ಯವಾಗುತ್ತಿಲ್ಲ. ಏಕೆ ಹೀಗೆ, ಎಲ್ಲವೂ ಕಾಲದ ಮಹಿಮೆ. ಕಾಲ ಕಳೆದಂತೆ ಮನುಷ್ಯನ ಮನಸ್ಸಿಗೆ ಜಡತ್ವ ಆವರಿಸುತ್ತದೆ ಏಕೆಂದರೆ ಅವನು ಒಂದು ಕಡೆ ಸುಖಸಂಪನನ್ನಾಗಿ ನೆಲೆಸಿಬಿಡುತ್ತಾನೆ. ಜೊತೆಗೆ ತನ್ನ ಹವ್ಯಾಸಗಳನ್ನು ಕಳೆದುಕೊಳ್ಳುತ್ತ ಹೋಗುತ್ತಾನೆ. ನಮ್ಮ ಹವ್ಯಾಸಗಳು ಕೂಡ ಹಳಸಿ ಹೋಗುತ್ತವೆ ಎಂದು ಯೋಚಿಸುತ್ತಿರುವಾಗಲೇ ಮತ್ತೊಂದು ಪ್ರಶ್ನೆ ಹೌದು ಯಾರು ನೀನು ವ್ಯಾಸಗಳನ್ನು ತಡೆಯಲು ಸಾಧ್ಯವಿಲ್ಲ ಎಂಬ ದರ್ಶನಿಕ್ಕನ ಮಾತು ನೆನಪಾಗುತ್ತದೆ.
ಇದು ನೆಪ ಮಾತ್ರ ಅಂದುಕೊಳ್ಳುವಷ್ಟರಲ್ಲಿ ಮತ್ತೆ ಗೊಂದಲಗಳ ಸುರಿಮಳೆ. ನಿಮ್ಮ ಹವ್ಯಾಸ ಶುರುವಾಗುವುದು ಏತಕ್ಕಾಗಿ ಎಂಬ ಪ್ರಶ್ನೆ. ನಿಮ್ಮ ಹವ್ಯಾಸ ಮೊದ-ಮೊದಲು ಯಾವುದೋ ಕಾರಣದಿಂದ ಶುರುವಾಗಿ ಆನಂತರ ಯಾವುದೋ ಕಾರಣದಿಂದ ಮುಂದುವರೆಯುತ್ತದೆ ಅನ್ನುವಷ್ಟರಲ್ಲಿ ಮತ್ತೊಂದು ಪ್ರಶ್ನೆ. ಹೌದಲ್ಲವೇ ಕಾರಣಗಳು ಬೇಕಿಲ್ಲ ಬರೆಯಲು ಕಾರಣಗಳು ಹಲವು ಮೊದಮೊದಲು ನೀನು ಬರೆಯಲು ಶುರು ಮಾಡಿದಾಗ ಯಾವುದೋ ಘಟನೆ ಕಾರಣವಾಗಬಹುದು. ಅದನ್ನು ಓದಿದ ವ್ಯಕ್ತಿಗಳಿಂದ ಮತ್ತೆ ಸ್ಪೂರ್ತಿಯ ಚಿಲುಮೆಯಾಗಿ ನಿನ್ನ ಬರವಣಿಗೆ ಮುಂದುವರೆಯಬಹುದು. ಹಾಗಾದರೆ ಆ ಬರವಣಿಗೆಯನ್ನು ನೀನು ಮಾಡಿದ್ದು ವ್ಯಕ್ತಿಗಾಗಿಯೇ. ಆ ವ್ಯಕ್ತಿಗಾಗಿಯೇ ನಿನ್ನ ಬರವಣಿಗೆ ಮಾಡಿದ್ದಾರೆ, ನಿನ್ನವ್ಯಾಸದ ಮಾತಲ್ಲಿ ಅನ್ನಿಸಿತು. ಹೌದು ವ್ಯಕ್ತಿಯ ಗುಣ ಸ್ವಭಾವವನ್ನು ನೋಡುತ್ತಾ ಹೋದರೆ ಜನರು ಅವರ ಅನುಕೂಲತೆಗೆ ತಕ್ಕಂತೆ ಬಣ್ಣವನ್ನು ಬದಲಾಯಿಸುತ್ತ ಹೋಗುತ್ತಾರೆ. ಹಾಗಾದರೆ ನೀನು ಬರೆದಿದ್ದು ಅವರಿಗಾಗಿಯೇ ಎಂಬುವ ಪ್ರಶ್ನೆ. ಹೌದು ಹವ್ಯಾಸಗಳು ಬೆಳೆಯುವುದು ಬೇರೆಯವರಿಂದ ಅಲ್ಲ ನಿನ್ನಿಂದಲೇ ಎಂಬುವ ಸತ್ಯ ನಿನಗೆ ಅರಿವಾಗಲಿಲ್ಲವೇ ಎನ್ನುವ ಪ್ರಶ್ನೆ. ನಿನ್ನ ಬರಹಗಳನ್ನೆಲ್ಲ ಅವರು ಓದಿಯೇ ಪ್ರಾಮಾಣಿಕವಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಎಂದು ತಿಳಿದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ. ಕೆಲವೊಮ್ಮೆ ತಾವು ಇಟ್ಟಿರುವ ನಿರೀಕ್ಷೆಗಾಗಿ ತುಂಬಾ ಚೆನ್ನಾಗಿ ನಿಮ್ಮ ಬರಹ ಮೂಡಿ ಬಂದಿದೆ ಎಂದು ಹೇಳುವುದು ಕೂಡ ಸತ್ಯವಲ್ಲವೇ ಅನ್ನಿಸಿತು. ಬೇರೆಯವರು ನಿನ್ನ ಬರಹವನ್ನು ಓದುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರೆ ನಿನ್ನತನವೆಲ್ಲಿ ಉಳಿದಂತಾಯಿತು. ನಡೆಯಬೇಕಿದೆ ಅಕ್ಷರದ ತೇರು ಪರಿವರ್ತನೆಗಾಗಿ. ನೀನು ಪ್ರೀತಿಸಿದವರಿಗಲ್ಲದಿದ್ದರೂ ನಿನ್ನನ್ನು ಪ್ರೀತಿಸುವವರಿಗಾಗಿ.....
No comments:
Post a Comment