Friday, May 10, 2024

ಅಕ್ಷಯವಾಗಬೇಕಿರುವುದು.........

            ಅಕ್ಷಯ ತೃತೀಯ ಸನಾತನ ಪರಂಪರೆ ಶ್ರೇಷ್ಠ ದಿನ. ಈ ದಿನ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ವಿಶೇಷಣವನ್ನು ಮರೆತ ಅಥವಾ ಮರೆಸುತ್ತಾ ಇತ್ತೀಚಿನ ದಿನಗಳಲ್ಲಿ ಅಕ್ಷಯ ತೃತೀಯ ವೆಂದರೆ ಬಂಗಾರ ಕರೆದಿ ಎನ್ನುವಂತೆ ಬಿಂಬಿಸಲಾಗುತ್ತಿದೆ. ಹಬ್ಬ ಅಥವಾ ವಿಶೇಷವಾದ ದಿನದ ಅರ್ಥ ಗೊತ್ತಿಲ್ಲದ ಆಚರಣೆಗಳು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಸತ್ಯದ ಬೆಳಕಿನೆಡೆಗೆ ಒಂದು ದಾರಿ.
           ಅಕ್ಷಯ ತೃತೀಯ ಎಂದರೆ ಶಾಶ್ವತ ಸಮೃದ್ಧಿ ಹೊಸ ಆರಂಭ ಮತ್ತು ಅದೃಷ್ಟ ಅಕ್ಷಯ್ ಎಂದರೆ ಎಂದಿಗೂ ಕಡಿಮೆಯಾಗುವುದಿಲ್ಲ ಎಂದರ್ಥ. ಈ ದಿನ ತುಂಬಾ ವಿಶೇಷ ಅತ್ಯಗಳನ್ನು ಇತಿಹಾಸದಲ್ಲಿ ಹೊಂದಿದೆ. ಈ ದಿನ ತ್ರೇತಾಯುಗದ ಆರಂಭವನ್ನು ಸೂಚಿಸುತ್ತದೆ. ಭಗೀರಥನು ಗಂಗೆಯನ್ನು ಭೂಮಿಗೆ ತಂದ ದಿನವೂ ಹೌದು. ಈ ದಿನ ಕುಬೇರನು ಸಂಪತ್ತಿನ ದೇವನಾದ. ಗಣೇಶನ ಮಹಾಭಾರತವನ್ನು ಬರೆಯಲು ಪ್ರಾರಂಭಿಸಿದ ದಿನ, ಈ ದಿನ ಕೃಷ್ಣ ದ್ರೌಪದಿಗೆ ಅಕ್ಷಯಪಾತ್ರೆಯನ್ನು ಕೊಟ್ಟು ದೂರ್ವಸಮುನಿಗಳ ಕೋಪಕ್ಕೆ ಈಡಾಗದಂತೆ ನೋಡಿಕೊಂಡ ದಿನ. ಮಧುರೈ ಮೀನಾಕ್ಷಿ ಅಮ್ಮ ಮದುವೆಯಾದ ದಿನವೂ ಹೌದು. ವಿಷ್ಣು ಪರಶುರಾಮನಾಗಿ ಹುಟ್ಟಿದ ದಿನ. ಈಶ್ವರ ನಾದ ನಂದಿ ಹುಟ್ಟಿದ ದಿನವೂ ಹೌದು. ಇಂಥ ಅಕ್ಷಯ ತೃತೀಯವೂ ಹಲವಾರು ಮಹತ್ವದ ಘಟನೆಗಳಿಗೆ ಸಾಕ್ಷಿಯಾದ ದಿನ.
           ಇಂತಹ ಅಕ್ಷಯ ತೃತೀಯ ವನ್ನು ಇತ್ತೀಚಿನ ದಿನಗಳಲ್ಲಿ ಚಿನ್ನ ಖರೀದಿಯ ದಿನವನ್ನಾಗಿ ಪರಿವರ್ತಿಸಿರುವುದು ವ್ಯಾಪಾರಿಗಳ ಲಾಭದ ದೃಷ್ಟಿಯಿಂದ ಹೊರತು ಮತ್ತೇನು ಅಲ್ಲ. ಯಾವ ಉಪನಿಷತ್ತುಗಳಲ್ಲಿ ವೇದಗಳಲ್ಲಿ ಪುರಾಣಗಳಲ್ಲಿ ಇನ್ನ ಖರೀದಿಯ ಬಗ್ಗೆ ಹೇಳಿಲ್ಲ. ಈ ದಿನ ಯಾವುದೇ ಕೆಲಸವನ್ನು ಮಾಡಿದರೂ ಅದು ಅಕ್ಷಯವಾಗುತ್ತದೆ ಎಂಬುದು ನಂಬಿಕೆ. ಈ ದಿನ ಮಾಡುವ ಪುಣ್ಯದ ಕೆಲಸಗಳು ಅಕ್ಷಯವಾಗುತ್ತವೆ. ನೀವು ಸತ್ತನಂತರ ಬರುವುದು ನೀವು ಮಾಡಿದ ಪಾಪ ಪುಣ್ಯವೋ ಹೊರತು ಚಿನ್ನವಲ್ಲ. ಈ ದಿನ ಆದಷ್ಟು ದಾನ ಧರ್ಮಗಳನ್ನು ಮಾಡುತ್ತಾ ಒಳ್ಳೆಯ ಕಾರ್ಯಗಳನ್ನು ಮಾಡುತ್ತ ಪುಣ್ಯ ಸಂಪಾದಿಸಬೇಕು. ಅಕ್ಷಯವಾಗಬೇಕಾಗಿರುವುದು ನಿಮ್ಮ ಇಹಲೋಕ ಮತ್ತು ಪರಲೋಕದಲ್ಲೂ ನಿಮ್ಮ ಜೊತೆಗೆ ಇರುವ ಪುಣ್ಯವೋ ಹೊರತು ಚಿನ್ನವಲ್ಲ.

No comments: