Tuesday, July 13, 2021

ಕೇಳಿದ ವರವ ಕೊಡುವ ಬಲಮುರಿ ಗಣಪ

                            ಆದಿನಾಥ ಕೈಲಾಸವಾಸ ಶಿವನ ಹಾಗೂ ಪಾರ್ವತಿಯ ಮುದ್ದು ಕಂದ ಗಣಪತಿಯು ಸರ್ವ ಪೂಜೆಯಲ್ಲಿಯೂ ಮೊದಲು ಪೂಜೆ ಒಳಗಾಗುವ ದೇವರು. ಅವನು ಮೊದಲು ಪೂಜೆ ಸ್ವೀಕರಿಸಲು ಅರ್ಹ ಆಗಿದ್ದಕ್ಕೆ ಒಂದು ಕಥೆ ಇದೆ. ಪಾರ್ವತಿ ದೇವಿಯ ಸೃಷ್ಟಿ ಈ ಗಣಪ. ಒಮ್ಮೆ ಪಾರ್ವತಿದೇವಿಯು ಕೈಲಾಸದಲ್ಲಿ ಇದ್ದಾಗ ನಂದಿಯನ್ನು ಕಾವಲಿಗಿರಿಸಿ ಯಾರನ್ನು ಒಳಗಡೆ ಬಿಡಬಾರದು ಎಂದು ಹೇಳಿದಳು. ಅದಾದ ಕೆಲ ಸಮಯಕ್ಕೆ ಶಿವನು ಲೋಕ ಸಂಚಾರವನ್ನು ಮುಗಿಸಿ ಕೈಲಾಸಕ್ಕೆ ಹಿಂದಿರುಗಿದನು. ನಂದಿಯು ಶಿವನನ್ನು ಒಳಗೆ ಬಿಡಲು ಪಾರ್ವತಿದೇವಿಗೆ ಪ್ರಶ್ನೆ ಮೂಡಿತು, ನಂದಿ ನನಗಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ಶಿವನಿಗೆ ಕೊಡುತ್ತಾನೆ ಹಾಗಾಗಿ ನನ್ನ ಆಜ್ಞೆಯನ್ನು ಮೀರಿ  ಬಿಡುತ್ತಾನೆಂದು. ಇದರಿಂದ ಪಾರ್ವತಿದೇವಿಯು ತಾನು ಹಚ್ಚಿಕೊಂಡಿದ್ದ ಅರಿಶಿಣವನ್ನು ತೆಗೆದು ಆಕೃತಿಯನ್ನು ಮಾಡಿ ಅದಕ್ಕೆ ಜೀವವನ್ನು ತುಂಬಿದಳು. ಈ ಬಾರಿ ದೇವಿಯು ದ್ವಾರದ ಬಳಿ ನಿಂತು ಯಾರನ್ನೂ ಒಳಗೆ ಬಿಡಬೇಡ ಎಂದು ಗಣಪತಿಗೆ  ಆಜ್ಞೆಯನ್ನು ನೀಡಿದಳು. ತಾಯಿಯ ಆಜ್ಞೆಯನ್ನು ಗಣಪನು ಪಾಲಿಸಲು ಅದೇ ಸಮಯಕ್ಕೆ ಶಿವನು ಬಂದನು ಶಿವನನ್ನು ಗಣಪತಿಯು ತಡೆಯಲು ಕೋಪಗೊಂಡ ಶಿವನು ಪಾರ್ವತಿಯ ಸೃಷ್ಟಿ ಬಾಲಕನೆಂದ ತಿಳಿಯದೆ , ಶಿವನು ಆ ಬಾಲಕನ ಶಿರವನ್ನು ಕತ್ತರಿಸಿದನು. ಪಾರ್ವತಿಯು ಹೊರಗೆ ಬಂದು ನೋಡಲಾಗಿ ಶಿರಚ್ಛೇದವಾದ ದೇಹ ಬಿದ್ದಿತ್ತು.
                     ತಾಯಿಯು ತನ್ನ ಮಗನಿಗೆ ಜೀವ ಬರಬೇಕೆಂದು ಹಠ ಹಿಡಿದು ಕುಳಿತಳು. ಪಾರ್ವತಿ ಹಠಕ್ಕೆ ಸೋತ ಶಿವನು ದೇಹಕ್ಕೆ ಜೀವ ಕೊಡಲು ಒಪ್ಪಿ ಬ್ರಹ್ಮನನ್ನು ಕೇಳಲು, ಬ್ರಹ್ಮನು ಪ್ರಾಣಿಯ ತಲೆಯನ್ನು ಜೋಡಿಸಿ ಜೀವ ಕೊಡಬಹುದೆಂದು ಹೇಳಲಾಗಿ, ಶಿವನು ತನ್ನ ಅನುಚರರನ್ನು ಕರೆದು ಉತ್ತರ ದಿಕ್ಕಿಗೆ ಮಲಗಿದ್ದ ಪ್ರಾಣಿಯ ತಲೆಯನ್ನು ತರಲು ಹೇಳಿದನು. ಉತ್ತರ ದಿಕ್ಕಿಗೆ ಮಲಗಿದ ಪ್ರಾಣಿಯ ತಲೆಯನ್ನು ಹುಡುಕಲು ಹೊರಟ ಅನುಚರರಿಗೆ ಸಿಕ್ಕಿದ್ದು ಆನೆಯ ತಲೆ. ಆನೆಯ ತಲೆಯನ್ನು ತಂದು ಜೀವತುಂಬಲು ಪಾರ್ವತಿದೇವಿಗೆ ಚಿಂತೆ ಕಾಡಿತು. ಯಾರು ಪ್ರಾಣಿತಲೆ ಇರುವ ನನ್ನ ಮಗನಿಗೆ ಬೆಲೆ ಕೊಡುತ್ತಾರೆ ಎಂದು ಆ ಚಿಂತೆಯನ್ನು ಹೋಗಿಸಲು ಪರಶಿವನು ಗಣಪತಿಯನ್ನು ಗಣಗಳಿಗೆ ಅಧಿನಾಯಕನನ್ನಾಗಿ ಮಾಡಿ ಎಲ್ಲಾ ದೇವತೆಗಳಿಂದ ಪೂಜೆ ಸ್ವೀಕರಿಸಲು, ಪೂಜೆಗೆ ಎಲ್ಲಾ ದೇವತೆಗಳಿಂದ ಮೊದಲು ಗಣಪನಿಗೆ ಸಿಗುವಂತೆ ಅನುಗ್ರಹಿತನಾದನು.
                     ಅಂತಹ ಗಣಪತಿಯು ಮಳಲಕೊಪ್ಪ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಂಡ್ಡಿದ್ದೇ ರೋಚಕ, ಇಂದಿನ ಬಲಮುರಿ ಗಣಪತಿ ಇರುವ ಜಾಗದಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಗ್ರಾಮದ ಹಿರಿಯರು ನಿರ್ಧರಿಸಿದರು, ಆದರೂ ಎಲ್ಲವೂ ಗಣಪನ ಇಚ್ಛೆಯಂತೆ ಕೊನೆಯಲ್ಲಿ ವಿಘ್ನವಿನಾಯಕನದ ಗಣಪನಿಗೆ ಸುಂದರ ದೇವಾಲಯ ನಿರ್ಮಾಣ ಗೊಂಡಿತ್ತು. ಈ ವಿಗ್ರಹದ ವಿಶೇಷತೆಯೇನೆಂದರೆ ಇದನ್ನು ತಮಿಳುನಾಡಿನಿಂದ ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ಬಲಮುರಿ ಗಣಪನಿಗೆ ಸುತ್ತಮುತ್ತ ಹಳ್ಳಿಗಳಿಂದ ಭಕ್ತರು ಬಂದು ಸ್ವಾಮಿಯ ಸೇವೆಯನ್ನು ಮಾಡಿಸುತ್ತಾರೆ.
                    ಈ ದೇವಸ್ಥಾನದ ಮತ್ತೊಂದು ವಿಶೇಷವೆಂದರೆ ಇಲ್ಲಿ ಹೋಮಹವನ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುತ್ತವೆ . ಪ್ರತಿ ಹುಣ್ಣಿಮೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕವಾದ ಸತ್ಯನಾರಾಯಣ ಪೂಜೆ ಹಾಗೂ ಪ್ರತಿ ತಿಂಗಳು ಬರುವ ಸಂಕಷ್ಟಿಯಲ್ಲಿ ಸಂಕಷ್ಟಹರ ಚತುರ್ಥಿಪೂಜೆ ವಿಜೃಂಭಣೆಯಿಂದ ನಡೆಯುತ್ತದೆ. ಯಾವುದೇ ಜಾತಿ ಮತ ಬೇಧವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ.
                 ಇಂತಹ ಗಣಪನ ಗೋಪುರ ಕಾರ್ಯವು ಪೂರ್ಣಗೊಂಡಿದ್ದು ಇದೇ ತಿಂಗಳು ಊರಿನ ಗುರುಹಿರಿಯರ ಸಮಕ್ಷಮದಲ್ಲಿ ಶಿಖರ ಪ್ರತಿಷ್ಠಾಪನೆ ಕಾರ್ಯವು 15/07/2021ರಂದು ವಿಜ್ರಂಭಣೆಯಿಂದ ನಡೆಯುತ್ತಿದೆ. ಇದೇ ಸಮಯದಲ್ಲಿ ನವಗ್ರಹ ಬಿಂಬ ಪ್ರತಿಷ್ಠಾಪನೆ ಹಾಗೂ ಅಶ್ವತ್ಥ ವೃಕ್ಷ ಉದ್ಯಾಪನೆ ನಡೆಯುತ್ತಿದ್ದು ಸಕಲವೂ ಸ್ವಾಮಿಯ ಇಚ್ಛೆಯಂತೆ ಪೂರ್ಣಗೊಳ್ಳುವುದಿದೇ, ಗಣಪನು ಸಮಸ್ತ ಭಕ್ತರನ್ನು ಆಶೀರ್ವದಿಸುತ್ತಾ ಪ್ರತಿಷ್ಠಾಪನೆಗೊಂಡಿದ್ದಾರೆ.

Saturday, July 10, 2021

ಬದಲಾದ ದೇವತೆ - ಭಾಗ-2

..ಒಟ್ಟಿನಲ್ಲಿ ರೌದ್ರ ರೂಪಿಣಿ, ಆಕೆಯ ತಂಗಿಯೂ ನಾಲಿಗೆಯನ್ನು ಹೊರಗೆ ಚಾಚಿದ ರುದ್ರ ರೂಪಿಣಿ. ಅವರು ರಾಕ್ಷಸರನ್ನು ಸಂಹರಿಸಿದವರು. ಮಾಂಸ ಪ್ರಿಯರು ಕೋಳಿ, ಕೋಣ, ಕುರಿಗಳನ್ನು ಬಲಿ ತೆಗೆದುಕೊಂಡು ಬರುತ್ತಿದ್ದವರು.
                 ಕಾಲಚಕ್ರದ ಸುಳಿಗೆ ಸಿಲುಕಿ ಎಲ್ಲರೂ ಬದಲಾಗಬೇಕು ಇಲ್ಲವಾದರೆ ಅಸ್ತಿತ್ವ ಉಳಿಯುವುದು ಕಷ್ಟವಾಗುತ್ತದೆ. ಬದಲಾದರೂ ದೇವತೆಗಳೇ ಬದಲಾದರೂ ಸಾಮಂತರ ಕುಲದೇವತೆಯಾದ ಮೇಲೆ ಆಕೆಗೆ ಕೋಣ, ಕುರಿ, ಕೋಳಿಗಳನ್ನು ಬಲಿಕೊಡುವುದು ನಿಲ್ಲಿಸಲಾಯಿತು. ಆಕೆ ನೆಲೆಸಿದ್ದ ಆಕೆಯ ಸ್ಥಾನದಿಂದ ಆಕೆಯ ಆಚರಣೆಗಳನ್ನು ದೂರ ಮಾಡಲಾಯಿತು. ಬೆಟ್ಟದ ತುದಿಯಲ್ಲಿ ಇದ್ದ ಆಚರಣೆಯನ್ನು ಬೆಟ್ಟದ ಪಾದದ ಕೆಳಗೆ ತರಲಾಯಿತು. ಆಕೆ ಬಲಿ ಪಡೆಯುತ್ತಿದ್ದ ದೇವತೆ ಎನ್ನಲು ಸಾಕ್ಷಿಯೆನ್ನುವಂತೆ ಇಂದಿಗೂ ಬೆಟ್ಟದ ತಪ್ಪಲಿನ ಕೆಳಗೆ ಆಕೆಗೆ ಬಲಿಯನ್ನು ಕೊಡಲಾಗುವುದು.
         ರಾಜಾಶ್ರಯದಲ್ಲಿ ಆಕೆ ಬದಲಾದಳು ಆಕೆಯನ್ನು ರೌದ್ರ ರೂಪದಿಂದ ಸಾತ್ವಿಕತೆ ದೇವತೆ ಎನ್ನುವಂತೆ ಚಿತ್ರಿಸಲಾಯಿತು. ಆಕೆಯು ತಾಯಿ , ಆಕೆ ಮಕ್ಕಳು  ಇಷ್ಟಪಟ್ಟಂತೆ ಇರಲು ಬಯಸಿದಳೆನೋ ಎನ್ನುವಂತೆ ಬದಲಾದಳು, ಒಟ್ಟಿನಲ್ಲಿ ಬದಲಾಗಿದ್ದಳು ಕೊನೆಗೆ ಬರೀ ಕೆಳವರ್ಗದ ತಾಯಿಯಾಗಿದ್ದ ಆಕೆ ಮೇಲ್ವರ್ಗಕ್ಕೆ ಹತ್ತಿರವಾದಳು. ಕೊನೆಗೆ ನಾಡದೇವತೆಯಾಗಿ ಹೋದಳು. ಇಂದು ಆಕೆಯದು ರಾಜಬೀದಿ ಮೆರವಣಿಗೆ ಏಕೆಂದರೆ ಬದಲಾದಳು, ಬದಲಾವಣೆ ಆಕೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ದಿತು.
                 ನಾವು ಅಷ್ಟೇ ಬದಲಾಗಬೇಕು ನಮ್ಮ ಉನ್ನತಿಗಾಗಿ ಬದಲಾಗಬೇಕು ನಮ್ಮತನವನ್ನು ಉಳಿಸಿಕೊಂಡು ಧರ್ಮದ ಹಾದಿಯಲ್ಲಿ ನಡೆಯುತ್ತ ಬದಲಾಗಬೇಕು. ಬದಲಾವಣೆ ಜಗದ ನಿಯಮ ನಾವು ಬದಲಾದರೂ ಬದಲಾಗದಿದ್ದರೂ ಸಮಯ ಎಲ್ಲವನ್ನೂ ಬದಲು ಮಾಡುತ್ತದೆ. ಬದಲಾದರೆ ಉಳಿಯುತ್ತೇವೆ ಇಲ್ಲವಾದರೆ ಅಳಿಯುತ್ತೇವೆ .ಆಕೆ ನಮಗೆ ಕಲಿಸುತ್ತಿರುವ ಪಾಠ ಅದು. ಬದಲಾದಳು ತಾಯಿಯೇ ಬದಲಾದಳು ಇನ್ನು ನಾವು ಆಕೆಯ ಮಕ್ಕಳು, ಬದಲಾಗದಿದ್ದರೆ ಜಗದ ನಿಯಮದ ವಿರುದ್ದ ಅಳಿಯುತ್ತೇವೆ ಬದಲಾದರೆ ಉಳಿಯುತ್ತೇವೆ.