Wednesday, November 8, 2023

ಧರ್ಮ ವಿಜಯ


             ಕೆಲವೊಮ್ಮೆ ಅನ್ನಿಸುವುದುಂಟು ನಾನು ಯಾರಿಗೂ ಏನನ್ನು ಕೆಟ್ಟದು ಬಯಸದಿದ್ದರೂ ನನಗೆ ಕೆಟ್ಟದಾಗುತ್ತದಲ್ಲ ಎಂದು ಇನ್ನು ಕೆಲವೊಮ್ಮೆ ಧರ್ಮವಿದಿಯೋ ಎಂದು ಪ್ರಶ್ನೆ ಹೇಳುವುದು ಸಹಜ. ಧರ್ಮಕ್ಕೆ ಇಂದಿನ ರಾಜಕಾರಣಿ ಪುಡಾರಿಗಳು ಧರ್ಮದ ಹೆಸರಿನಲ್ಲಿ ಅನ್ಯಾಯ ಅಕ್ರಮ ಅನೈತಿಕತೆ ಮಾಡುತ್ತಾ ಅದಕ್ಕೆ ಹಿಂದೂ ಧರ್ಮದ ಲೇಪನವನ್ನು ಹಚ್ಚಿ ಧರ್ಮದ ಸಾರವನ್ನೇ ಕೆಡಿಸಿದ್ದಾರೆ. ನಿಜ ಧರ್ಮದ ಅರ್ಥ ತಿಳಿದೆ ಈ ಸೋಗಲಾಡಿ ರಾಜಕಾರಣಿಗಳು ಮತ ಗಳಿಕೆಗೋಸ್ಕರ ಧರ್ಮವನ್ನು ಬಳಸಿ ಧರ್ಮದ ಸಾರವನ್ನು ಅವರಿಗೆ ಬೇಕಾದಂತೆ ತಿರುಗಿಸಿದ್ದಾರೆ. ಧರ್ಮವೆಂಬುದಕ್ಕೆ ಮಿತಿ ಇಲ್ಲ ಅದು ಬ್ರಹ್ಮಾಂಡದಂತೆ ಅನಂತ. ಧರ್ಮವೆಂಬುವುದು ಹುಟ್ಟು ಸಾವಿನ ಆಚೆಗಿನ ಪುಣ್ಯ. ನಾವು ಕೆಲವೊಮ್ಮೆ ನುಡಿಗಟ್ಟುಗಳನ್ನು ಕೇಳುತ್ತೇವೆ. ನಾವು ಸತ್ತಾಗ ಬರುವುದು ನಾವು ಮಾಡಿದ ಧರ್ಮ, ಪಾಪ,  ಪುಣ್ಯವೆಂದು.
              ಧರ್ಮವೆಂದರೆ ಏನು ಎಂಬ ಬಿಜ್ಞಾಸೆ ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುತ್ತದೆ ಅದರಲ್ಲೂ ನಿಜ ಧರ್ಮ ಪಾಲಿಸುವವರಿಗೆ ಅದು ಹೆಚ್ಚಾಗಿ ಕಾಡುತ್ತದೆ ಮಹಾಭಾರತದಲ್ಲಿ ಕೃಷ್ಣ ಯುದ್ಧವನ್ನು ಮಾಡಿಸಿದ್ದು ಅಧರ್ಮದ ವಿರುದ್ಧ. ಅಂದರೆ ಧರ್ಮದ ಆಧಾರದ ಮೇಲೆ ಅಲ್ಲಿ ಯುದ್ಧ  ನಡೆದಿದ್ದು ಅಣ್ಣ ತಮ್ಮಂದಿರ ನಡುವೆ. ಅಂದರೆ ಅಲ್ಲಿ ಧರ್ಮದ ಪದ ಪ್ರಯೋಗ ಏಕೆ ಆಯಿತು ಎಂದು ನೋಡುವುದಾದರೆ ಕೃಷ್ಣ ಹೇಳಿದ ಧರ್ಮದ ಸಾರವನ್ನು ಕಾಣಬಹುದು. ಅಲ್ಲಿ ಗೆಲ್ಲಬೇಕಾಗಿದ್ದು ಸತ್ಯ ಕೃಷ್ಣ ಗೆಲ್ಲಿಸಿದ್ದು ಅದನ್ನೇ. ಅಲ್ಲಿ ಸೋತಿದ್ದು ಅಸಹನೆ,ಅಸೂಯೆ ಸ್ವಾರ್ಥ, ಮೋಸ, ವಂಚನೆ ಅಲ್ಲಿ ಗೆದ್ದಿದ್ದು ಶೌರ್ಯ,ಸಹನೆ,ತಾಳ್ಮೆ ಸತ್ಯ, ಒಳ್ಳೆಯತನ. ಇವಾಗ ಹೇಳಿ ಅಲ್ಲಿ ಆಗಿದ್ದು ಏನೆಂದು ಅದೇ ಧರ್ಮದ ವಿಜಯ. ನಾವು ಬದುಕಿನಲ್ಲಿ ಒಳ್ಳೆಯತನವನ್ನು ಅಳವಡಿಸಿಕೊಂಡರೆ ಗೆಲ್ಲುತ್ತೇವೆ. ನಾವು ಗೆಲ್ಲುವುದು ಕಷ್ಟವಾದರೂ ಪ್ರಕೃತಿ ತನ್ನ ಅಗೋಚರ ಶಕ್ತಿಯನ್ನು ಕಳಿಸಿ ನಮಗೆ ಒಳಿತನ್ನೇ ಮಾಡುತ್ತದೆ. ಅದನ್ನೇ ನಾವು ದೈವವೆಂದು ನಂಬಿದ್ದು ಗೆಲುವು ತಡವಾಗಬಹುದು. ಶಾಶ್ವತವಾಗಿ ಉಳಿಯಬೇಕಾದರೆ ಯಾವುದು ತಕ್ಷಣಕ್ಕೆ ಗಟಿಸುವುದಿಲ್ಲ ಅದಕ್ಕೆ ತನ್ನದೇ ಆದ ಸಮಯ ಹಿಡಿಯುತ್ತದೆ. ಆದರೆ ಅದು ಶಾಶ್ವತ, ಅದೇ ಅಂತಿಮ ವಿಜಯ, ಅದೇ ಧರ್ಮವಿಜಯ.